Sunday, 6 September 2026

MY OWN FIRE- SELF LOVE SONG

 


🔥 MY OWN FIRE

Original Afrobeat Self-Love Song


Yeah yeah…
Ooh na-na…
I found my rhythm, I found my way,
Nobody fit take my light away.
Eh-eh…
This one is for me.


I woke up with the sun on my face,
Left yesterday in its own place,
No more chasing somebody’s dream,
I’m building mine, you know what I mean.

I got a little heart, but it beats so loud,
Walk through the rain and I still stand proud,
Every little scar made a stronger me,
Now I’m dancing with my destiny.


I don’t need a crowd to know I’m shining,
I don’t need a voice to tell me I’m rising,
Look in the mirror, what do I see?
A whole new woman looking back at me.


I got my own fire, fire, fire,
Burning higher, higher, higher,
Nobody can dim what I carry inside,
I’m riding my wave, I’m enjoying the ride.

My own fire, fire, fire,
Soul getting lighter, lighter, lighter,
I lost some things but I found my key,
Now I’m living, loving, becoming me.



Eh-eh, move your body,
Na my time, nobody stop me,
Oya, dance with me,
I’m free, I’m free, I’m free.

Eh-eh, feel the rhythm,
Peace in my heart, that’s my kingdom,
Left foot, right foot, let it go,
I know my worth and now I know.


I stopped counting all the times I fell,
Those little battles taught me well,
I don’t need to be perfect today,
I just need to keep moving my way.

Some people came, some people flew,
But every goodbye made room for new,
I bless the past, I release the pain,
Now I’m walking softly through my own lane.


I don’t need a crowd to know I’m shining,
I don’t need a voice to tell me I’m rising,
Look in the mirror, what do I see?
A whole new woman looking back at me.


I got my own fire, fire, fire,
Burning higher, higher, higher,
Nobody can dim what I carry inside,
I’m riding my wave, I’m enjoying the ride.

My own fire, fire, fire,
Soul getting lighter, lighter, lighter,
I lost some things but I found my key,
Now I’m living, loving, becoming me.


No permission, I’m stepping forward,
No comparison, I’m going upward,
My journey has its own beautiful pace,
I’m not behind, I’m exactly in place.

If tomorrow brings another storm,
I’ll remember who I’ve become,
With two strong feet and an open heart,
I’ll keep dancing, I’ll make my start.


Oh na-na, my own fire,
Oh na-na, taking me higher,
Oh na-na, this heart is free,
Nothing feels better than being me.


I got my own fire, fire, fire,
Burning higher, higher, higher,
Nobody can dim what I carry inside,
I’m riding my wave, I’m enjoying the ride.

My own fire, fire, fire,
Soul getting lighter, lighter, lighter,
This is my story, this is my key,
I’m living my life…
I’m finally me.


Yeah…
My own fire…
My own rhythm…
My own story…
My own life…
And I’m free. 🔥

Thursday, 31 July 2025

ಹನುಮಾನ್ ಚಾಲೀಸ ಕನ್ನಡದಲ್ಲಿ

 

ಇಲ್ಲಿ ಹನುಮಾನ್ ಚಾಲೀಸಾ ಪೂರ್ತಿಯಾಗಿ ಕನ್ನಡ ಲಿಪಿಯಲ್ಲಿ ನೀಡಲಾಗಿದೆ:




॥ ಶ್ರೀ ಹನುಮಾನ್ ಚಾಲೀಸಾ ॥
(ತುಲಸಿದಾಸರ ಕೃತಿ)

ದೋಹಾ:
ಶ್ರೀಗುರು ಚರಣ ಸರೋಜ ರಜ, ನಿಜ ಮನು ಮುಕುರು ಸುಧಾರಿ।
ಬರನೌ ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ॥

ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ।
ಬಲ ಬುದ್ಧಿ ವಿದ್ಯಾ ದೇಹು ಮೊಹಿ, ಹರಹು ಕ್ಲೇಶ ವಿಕಾರ॥



ಚೌಪಾಯಿ:

ಜಯ ಹನುಮಾನ ಜ್ಞಾನ ಗುಣ ಸಾಗರ।
ಜಯ ಕಪೀಸ್ ತಿಹುಲೋಕ ಉಜಾಗರ॥

ರಾಮದೂತ ಅತುಲಿತ ಬಲ ಧಾಮಾ।
ಅಂಜನೀಪುತ್ರ ಪವನಸುತ್ ನಾಮಾ॥

ಮಹಾಬೀರ ಬಿಕ್ರಮ ಬಜರಂಗೀ।
ಕುಮತಿ ನಿವಾರ ಸುಮತಿ ಕೇ ಸಂಗೀ॥

ಕಂಚನ ಬರಣ ಬಿರಾಜ ಸುಬೇಸಾ।
ಕಾನನ ಕುಂಡಲ ಕುಂಚಿತ ಕೇಸಾ॥

ಹಾಥ ಬಜ್ರ ಔ ಧ್ವಜಾ ಬಿರಾಜೈ।
ಕಾಂಧೇ ಮೂಂಜ ಜನೇವೂ ಸಾಜೈ॥

ಶಂಕರ ಸುವನ ಕೇಸರಿ ನಂದನ।
ತೇಜ ಪ್ರತಾಪ ಮಹಾ ಜಗ ವಂದನ॥

ವಿದ್ಯಾವಾನ್ ಗುನೀ ಅತಿ ಚಾತುರ।
ರಾಮ ಕಾಜ ಕರಿಬೇ ಕೋ ಆತುರ॥

ಪ್ರಭು ಚರಿತ್ರ ಸುನಿಬೇ ಕೋ ರಸಿಯಾ।
ರಾಮ ಲಖನ ಸೀತಾ ಮನ ಬಸಿಯಾ॥

ಸೂಕ್ಷ್ಮ ರೂಪ ಧರಿಸಿಯಹಿಂ ದಿಖಾವಾ।
ಬಿಕಟ ರೂಪ ಧರಿ ಲಂಕ ಜರವಾವಾ॥

ಭೀಮ ರೂಪ ಧರಿ ಅಸುರ್ ಸಂಹಾರೆ।
ರಾಮಚಂದ್ರ ಕೇ ಕಾಜ ಸಂವಾರೇ॥



ಲಾಯ ಸಂಜೀವನ ಲಖನ ಜಿಯಾಯೇ।
ಶ್ರೀರಘುವೀರ ಹರಷಿ ಉರ ಲಾಯೇ॥

ರಘುಪತಿ ಕೀಹೀ ಬಹುತ ಬಡಾಯೀ।
ತುಮ ಮಮ ಪ್ರಿಯ ಭರತಹಿ ಸಮ್ ಭಾಯೀ॥

ಸಹಸ ಬದನ ತುಮರೋ ಯಶ ಗಾವೈ।
ಅಸ ಕಹಿ ಶ್ರೀಪತಿ ಕಂಠ ಲಗಾವೈ॥

ಸನಕಾದಿಕ ಬ್ರಹ್ಮಾದಿ ಮುನೀಸಾ।
ನಾರದ ಸಾರದ ಸಹಿತ ಅಹೀಸಾ॥

ಯಮ ಕುಬೇರ್ ದಿಗ್‌ಪಾಲ್ ಜಹಾಂ ತೇ।
ಕವಿ ಕೋಬಿದ ಕಹಿ ಸಕೇ ಕಹಾಂ ತೇ॥

ತುಮ ಉಪಕಾರ ಸುಗ್ರೀವಹಿಂ ಕೀನ್ಹಾ।
ರಾಮ ಮಿಲಾಯ ರಾಜಪದ ದೀನ್ಹಾ॥

ತುಮರೋ ಮಂತ್ರ ಬಿಭೀಷಣ ಮಾನಾ।
ಲಂಕೇಶ್ವರ ಭಯೆ ಸಬ್ ಜಗ ಜಾನಾ॥

ಯುಗ ಸಹಸ್ರ ಯೋಜನ ಪರ ಭಾನು।
ಲೀಲ್ಯೋ ತಾಹಿ ಮಧುರ ಫಲ ಜಾನೂ॥

ಪ್ರಭು ಮುದ್ರಿಕಾ ಮೆಲಿ ಮುಖ ಮಾಹೀ।
ಜಲಧಿ ಲಾಂಗ್ಘಿ ಗಯೇ ಅಚರಜ ನಾಹೀ॥

ದುರ್ಗಮ್ ಕಾಜ ಜಗತ್ ಕೇ ಜೆತೇ।
ಸುಗಮ್ ಅನುಗ್ರಹ ತುಮರೇ ತೇತೇ॥

ರಾಮ ದುವಾರೇ ತುಮ ರಖವಾರೇ।
ಹೋತ್ ನ ಆಜ್ಞಾ ಬಿನು ಪೈಸಾರೇ॥




ಸಬ್ ಸುಖ ಲಹೈ ತುಮಾರಿ ಶರಣಾ।
ತುಮ ರಕ್ಷಕ ಕಾಹೂ ಕೋ ಡರ ನಾ॥

ಆಪನ್ ತೇಜ ಸಮ್ಹಾರೋ ಆಪೈ।
ತೀನೋ ಲೋಕ ಹಾಂಕ್ ತೇ ಕಾಂಪೈ॥

ಭೂತ ಪಿಶಾಚ ನಿಕಟ ನಹಿಂ ಆವೈ।
ಮಹಾಬೀರ ಜಬ ನಾಮ ಸುನಾವೈ॥

ನಾಸೈ ರೋಗ ಹರೈ ಸಬ್ ಪೀರಾ।
ಜಪತ್ ನಿರಂತರ ಹನುಮತ ಬೀರಾ॥

ಸಂಕಟ ತೇ ಹನುಮಾನ್ ಛುಡಾವೈ।
ಮನ ಕ್ರಮ ಬಚನ ಧ್ಯಾನ್ ಜೋ ಲಾವೈ॥

ಸಬ್ ಪರ ರಾಮ ತಪಸ್ವೀ ರಾಜಾ।
ತಿನ್ ಕೇ ಕಾಜ ಸಕಲ್ ತುಮ ಸಾಜಾ॥

ಔರ್ ಮನೋರಥ ಜೋ ಕೋಯಿ ಲಾವೈ।
ಸೋಯಿ ಅಮಿತ ಜೀವನ ಫಲ ಪಾವೈ॥

ಚಾರೋ ಯುಗ ಪ್ರತಾಪ ತುಮಾರಾ।
ಹೈ ಪ್ರಸಿದ್ಧ ಜಗತ್ ಉಜಿಯಾರಾ॥

ಸಾಧು ಸಂತ ಕೇ ತುಮ ರಖವಾರೇ।
ಅಸುರ ನಿಕಂದನ್ ರಾಮ ದುಲಾರೇ॥

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ।
ಅಸ ಬರ್ ದೀನ್ ಜಾನಕೀ ಮಾತಾ॥

ರಾಮ ರಸಾಯನ ತುಮರೆ ಪಾಸಾ।
ಸದಾ ರಹೋ ರಘುಪತಿಕೇ ದಾಸಾ॥

ತುಮರೆ ಭಜನ ರಾಮಕೋ ಪಾವೈ।
ಜನಮ್ ಜನಮ್ ಕೇ ದುಖ ಬಿಸರಾವೈ॥

ಅಂತಕಾಲ ರಘುಬರಪುರ ಜಾಯೀ।
ಜಹಾಂ ಜನ್ಮ ಹರಿಭಕ್ತ ಕಹಾಯೀ॥



ಔರ್ ದೇವತಾ ಚಿತ್ತ ನ ಧರೈ।
ಹನುಮತ್ ಸೇಯಿ ಸರ್ವ ಸುಖ ಕರೈ॥

ಸಂಕಟ ಕಟೈ ಮಿಟೈ ಸಬ್ ಪೀರಾ।
ಜೋ ಸುಮಿರೈ ಹನುಮತ ಬಲಬೀರಾ॥

ಜಯ ಜಯ ಜಯ ಹನುಮಾನ ಗೋಸಾಯೀ।
ಕೃಪಾ ಕರಹು ಗುರುದೇವ ಕೀನಾಯೀ॥

ಜೋ ಶತ ಬಾರ್ ಪಾಠ ಕರ ಕೋಯೀ।
ಛೂಟಹಿ ಬಂಧಿ ಮಹಾ ಸುಖ ಹೊಯೀ॥

ಜೋ ಯಹ ಪಢೈ ಹನುಮಾನ್ ಚಾಲೀಸಾ।
ಹೊಯ ಸಿದ್ಧಿ ಸಾಕ್ಷೀ ಗೌರೀಸಾ॥

ತುಲಸಿದಾಸ ಸದಾ ಹರಿಚೇರಾ।
ಕೀಜೈ ನಾಥ ಹೃದಯ ಮಹ್ ಡೇರಾ॥


ಅಂತಿಮ ದೋಹಾ:
ಪವನತನೆ ಸಂಕಟ ಹರಣ, ಮಂಗಳ ಮೂರತಿ ರೂಪ।
ರಾಮ ಲಖನ ಸೀತಾ ಸಹಿತ, ಹೃದಯ ಬಸಹು ಸುರ ಭೂಪ॥


ಇದನ್ನು ನಿತ್ಯ ಪಠಿಸಿದರೆ ಮನಶಾಂತಿ, ಶಕ್ತಿಯ ಶ್ರದ್ಧೆ, ಮತ್ತು ರಾಮಭಕ್ತಿಯ ಅನುಭವವಾಗುತ್ತದೆ.

ಸಂಗ್ರಹ - ಸಿಂಧು ಭಾರ್ಗವ, ಬೆಂಗಳೂರು


Monday, 3 April 2023

ಬೆಳಕಲಿ- Belakali song lyrics Hondisi bareyiri Kannada Movie



Google image source


ಬೆಳಕಲಿ- Belakali song lyrics Hondisi bareyiri Kannada Movie 


ಬೆಳಕಲಿ ಕಾಣದ ಇರುಳಿಗೂ

ಇರುಳಲೂ ಕಾಣುವ ಬೆಳಕಿಗೂ

ಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಈ ಸಮಯ

ಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ಈ ವಿಷಯ

//ಬೆಳಕಲಿ//


ನಿನ್ನ ಬದುಕೆ ನಿನ್ನೆಗಳಿಗೂ ನಾಳೆಗಳಿಗೂ ಉತ್ತರವು

ಸಹಜ ಬದುಕ ಸ್ವೀಕರಿಸೋ ರೂಪವೂ

ಇನ್ನು ಹೀಗೆ ನಿನ್ನ ಹಾಗೆ...

ನನ್ನ ದಿನಚರಿ... ಶುಭಾರಂಭವೂ...

ಈ ಹೆಣ್ಣು ಪೂಜಿಸೋ... 

ಈ ನೆಲದ ಗುಣಕೆ ಇವಳೇ ಕಾಣಿಕೆ// ಬೆಳಕಲಿ//


ಕಾಲದ ಕನ್ನಡಿಯಲಿ..

ಕಾಣದ ಮುನ್ನುಡಿ... ತಂದ ಬೆಳಕಿಗೆ..

ಕಡಲಲೆಯಲಿ ಗಿರಿತೊರೆಯಲಿ

ನಭ ನೆಲದಲಿ ಝೇಂಕಾರವು...

ಈ ಸಂಗಮವೇ ಸೃಷ್ಟಿ ಸಂಭ್ರಮ...

ಸೃಷ್ಟಿ ಬೆಸೆದ ಈ ಅನುಬಂಧಕೆ ಬೇಕಿಲ್ಲ ಯಾವ ಹೆಸರು

ಬದುಕಿ ಸುಮ್ಮನೆ...// ಬೆಳಕಲಿ//

**

ಹೊಂದಿಸಿ ಬರೆಯಿರಿ -ಸಿನೆಮಾ

ಜೋ. ಕೋಸ್ಟಾ - ಹಾಡಿದವರು

ರಾಮೇನಹಳ್ಳಿ‌ ಜಗನ್ನಾಥ- ರಚನೆ.

ನವೀನ್- ನಾಯಕನಟ

Raymo- Hodare hogu lyrics Kannada Movie song lyrics

 

Google image source


Raymo- Hodare hogu lyrics Kannada Movie song lyrics...


ಹೋದರೆ ಹೋಗು ರೇಮೊ ಸಿನೆಮಾ ಹಾಡಿನ ಸಾಹಿತ್ಯ


ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ

ಜಾರದು ಒಂದು ಕಂಬನಿ ಬಿಂದು

ಎಂದಿಗೂ ನಿಂಗಾಗಿ ಕಣ್ಣಂಚಲಿ

ಹೃದಯ ಒಡದೇ ಇರಲಿ

ಇಂದೇ ಸೇರಿ ಬಿಡಲಿ

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//


ಚೂರಿ ಚುಚ್ಚಿ ನೀ ಕೇಳುವೆ

ನೋವಾಯಿತೆ ನೋವಾಯಿತೆ

ಹಲ್ಲು ಕಚ್ಚಿ ನಾ ಹಾಡುವೆ ಗೊತ್ತಾಯಿತೆ ಗೊತ್ತಾಯಿತೆ

ಇಲ್ಲಿ ಮುಕ್ತಾಯ ಆಗಲಿ

ನಮ್ಮ ಕಥೆ ನಮ್ಮ ಕಥೆ

ಒಂದು ಹೆಜ್ಜೆನೂ ಹಾಕದೆ

ಇನ್ನೂ ಜೊತೆ ಇನ್ನೂ ಜೊತೆ

ನಿನ್ನ ತಪ್ಪು ಏನು ಇಲ್ಲ

ನಾನು ತಾನೆ ನಂಬಿದ್ದು

ನಂಬಿದಕ್ಕೇ ತಾನೆ ನಿಂಗೆ ಮೋಸ ಮಾಡೋಕ್ ಆಗಿದ್ದು

ನೊಂದೋರ ಸಾಲಲ್ಲಿ

ನಂದೊಂದು ಹೆಸರು //ಹೋದರೆ ಹೋಗು//


ಚೂರು ಅಭ್ಯಾಸ ಆದರೆ

ಒಂಟಿತನ ಒಂಟಿತನ

ಯಾರ ಹಂಗಿಲ್ಲ ಬಾಳುವೆ

ನನ್ನಂತೆ ನಾ ನನ್ನಂತೆ ನಾ

ಈಗ ಹುಡುಕೋದು ಎಲ್ಲಿದೆ

ನನ್ನನ್ನೇ ನಾ ನನ್ನನ್ನೇ ನಾ

ನಂಗೆ ಬೇಕೀಗ ನನ್ನದೇ

ಆಲಿಂಗನ ಆಲಿಂಗನ

ತುಂಬಾ ದೂರ ಬಂದ ಮೇಲು

ಹಿಂದೆ ತಿರುಗಿ ನೋಡಿಲ್ಲ

ನೀನು ಯಾರು ಅಂತ ನಾನು ಮರೆತೆ ಹೋದೆ ಸುಳ್ಳಲ್ಲ

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//

***

ರೇಮೋ ಸಿನೆಮಾ

ಕವಿರಾಜ್ ಸಾಹಿತ್ಯ

ಶ್ರೇಯಾ ಗೋಶಾಲ್ ಹಾಡುದವರು.

ಸಂಗ್ರಹ..

Friday, 28 October 2022

Auto Raja Shankar Nag Photos

 33rd Death Anniversary of Auto Raja Shankar Nag.

Some Photos November 9th 2022




















Puneeth Rajkumar ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿಗಾಗಿ ಕವಿತೆ

                
       (Google source image)
((ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ..))
ನುಡಿನಮನ ಕವಿತೆ

ಶೀರ್ಷಿಕೆ : ಪುನೀತವಾಯಿತು ಈ ನೆಲ
🍁🍁🍁🍁🍁🍁🍁🍁🍁🍁
ಪುನೀತವಾಯಿತು ಕನ್ನಡದ ನೆಲ
ಗಂಧದ ಗುಡಿಯ ಸುತ್ತಿ ಬಂದಮೇಲೆ
ಅಪ್ಪು ಅಭಿ ಅರಸುವಾಗಿ
ಜನರ ಮನದಲಿ ನೆಲೆನಿಂತ ಮೇಲೆ

ಪುನೀತವಾಯಿತು ಕನ್ನಡದ ನೆಲ
ಬೆಟ್ಟದ ಹೂವನ್ನು ಅರಸಿಕೊಂಡು ಹೋದಮೇಲೆ
ಸಮಾಜಮುಖಿ ಕೆಲಸಗಳು ಒಂದೇ ಎರಡೇ
ಅಸಂಖ್ಯಾತವಾದ ಮೇಲೆ..
(Google source images)
**
ಬೇಸರದ ಛಾಯೆ ಎಲ್ಲೆಡೆ
ಅನುದಿನ ನೆನಪಿನಲ್ಲಿ ಬಂದು ಹೋಗುವ
ನಗುಮೊಗವೊಂದೀಗ ಮರೆಯಾದ ಮೇಲೆ
ಕಣ್ಣೀರಿನಲೇ ಅಭಿಷೇಕ, 
ಮುಗಿಬೀಳುವ ಜನಸಾಗರ
ಇದನ್ನು ತಡೆಯಲಾಗುವುದೇ ಹೇಳಿ??

'ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ'
ಎಂಬಂತೆ ಸದ್ಗುಣ, ವಿನಯತೆಯ
ಕಲಿಸಿಕೊಟ್ಟು ಹೊರಟುಹೋದ ಮೇಲೆ
ಬೇಸರದ ಛಾಯೆ ಎಲ್ಲೆಡೆ..
ಪರಮಾತ್ಮ ಪೃಥ್ವಿಯ ತೊರೆದ ಮೇಲೆ..
(Google Image Source)
***
ಆಕಾಶದಲ್ಲಿ ಹೊಳೆಯುತ್ತಿರುವ
ರಾಜರತ್ನವೊಂದು ಅನುದಿನ ಕಂಡಾಗಲೆಲ್ಲ
ಹೆಮ್ಮೆಯ ಭಾವವು ಮನದ ತುಂಬೆಲ್ಲ...

ಇದ್ದರೆ ಇರಬೇಕು ಪ್ರೀತಿಯ ದೊಡ್ಮನೆ ಹುಡುಗನಂತೆ
ನೀನೇ ಎಂದಿಗೂ ರಾಜಕುಮಾರನಂತೆ

ನಿನ್ನಲ್ಲಿರುವ ಪವರ್, ಜನರನ್ನು 
ಮೈತ್ರಿಗೊಳಿಸುವ ಹುಮ್ಮಸ್ಸು ಯಾರಿಗೂ ಬರದಯ್ಯ
ಲಕ್ಕಿ ಮ್ಯಾನ್ ನೀವಲ್ಲ, ನಿಮ್ಮ ಪಡೆದ ಕರುನಾಡಯ್ಯ....

- ಸಿಂಧು ಭಾರ್ಗವ, ಬೆಂಗಳೂರು
ಶುಭೋದಯ🌼🌿 ಶುಭದಿನ🌞
29/Oct/2022 Saturday

(Google Image source)


Tuesday, 8 November 2016

ಲೇಖನ- ನಮ್ಮ ನೆನಪಿನಲ್ಲಿ ಶಂಕರ್ ನಾಗ್


(@@@)



(@@@)

ನಮ್ಮ ನೆನಪಿನಲ್ಲಿ ಶಂಕರ್ ನಾಗ್.. ಇಂದು ಅವರ ೬೨ನೇ ಜನ್ಮದಿನ.

"ನಗುವ ಗುಲಾಬಿ ಹೂವೇ." ಎಂದು ಆಟೋ ಶಂಕರ್ ಹಾಡು ಹಾಡುತ್ತಾ
ಪ್ರೀತಿಸಿ ಮದುವೆಯಾದವರು ಹೇಗೆ ಬದುಕಿತೋರಿಸಬೇಕು ಎಂಬುದನ್ನು "ಪರಮೇಶಿ ಪ್ರೇಮ ಪ್ರಸಂಗದಲ್ಲಿ" ಜನರಿಗೆ ಅರ್ಥೈಸುತ್ತಾ "ನೋಡಿ ಸ್ವಾಮಿ ನಾವ್ ಇರೋದು ಹೀಗೆ.." ಎಂಬ ನೇರನುಡಿಗಳಿಂದ ಬದುಕುತ್ತಾ,
"ಸತ್ತಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದರೂ ಸಾಧಿಸು" ಎಂದು ಯುವಕರ ಬೆನ್ನುತಟ್ಟಿ ಎಚ್ಚರಿಸುತ್ತಾ "ಆ್ಯಕ್ಸಿಡೆಂಟ್" ಆಗಿ ನಮ್ಮನ್ನೆಲ್ಲ ಅಗಲಿ ಈಗ "ಕೇಳದೇ ನಿಮಗೀಗ ದೂರದಲ್ಲಿ ಯಾರೋ..." ಎಂದು ಎಲ್ಲಾ ಅಭಿಮಾನಿಗಳ ಮನದಲ್ಲಿ ದಿನಕ್ಕೆ ಒಮ್ಮೆಯಾದರೂ ಅವರ ನೆನಪು ರಿಂಗಣಿಸುವಂತೆ ಮಾಡುತ್ತಿದ್ದಾರೆ.
- ಶಂಕರ್ ನಾಗ್.
***
ಅವರ ಅಣ್ಣ ಅನಂತ್ ನಾಗ್ ರವರು, ರಮೇಶ್ ಭಟ್, ಮಾ.ಮಂಜುನಾಥ್, ಅರುಂಧತಿನಾಗ್ ಎಲ್ಲರನ್ನೂ ಈ ದಿನ ನೆನಪಿಸಿಕೊಳ್ಳಬೇಕು. ಅವರೆಲ್ಲರೂ ಕಲೆಯನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಾ ಇರುವವರು. ಶಂಕರ್ ನಾಗ್ ಅವರ  ಕಲ್ಪನೆಯ ಕೂಸು #ರಂಗಶಂಕರ ಎನ್ನುವ ದೊಡ್ಡ ರಂಗಭೂಮಿಯನ್ನು ಅವರ ಧರ್ಮಪತ್ನಿ ಅರುಂಧತಿನಾಗ್ ಅವರು ೨೦೦೪ರಲ್ಲಿ  ಪ್ರಾರಂಭಿಸಿದರು. ಅವರು ಈಗ ಇದ್ದಿದ್ದರೆ ಬೆಂಗಳೂರು ಅದೆಷ್ಟೋ ಬದಲಾವಣೆ ಕಾಣುತ್ತಿತ್ತು. ಆಗಿನ ಕಾಲದಲ್ಲೇ ಅವರು ಬೆಂಗಳೂರಿಗೆ ಮೆಟ್ರೋ ರೈಲಿನ ಬಗ್ಗೆ, ನಂದಿಬೆಟ್ಟಕ್ಕೆ ರೋಪ್_ವೇ ಮುಂತಾದ ಯೋಜನೆಗಳ ಕನಸನ್ನು ಕಂಡವರು. ಅವರು ಒಂದು ರೀತಿಯ ಕಿಡಿ(ಸ್ಪಾರ್ಕ್) ಅದು ಸಾಮಾನ್ಯದ್ದಲ್ಲ, ತಾನು ಬೆಳಗಿ ಇತರರಿಗೂ ಬೆಳಕು ನೀಡುವಂತದ್ದು.. ಜೊತೆಗಾಗರನ್ನು ಪ್ರೀತಿಸುವ ,ಕಾಳಜಿ ತೋರಿಸುವ ಎಲ್ಲರನ್ನೂ ಬಡಿದೆಬ್ಬಿಸಿ ಜೊತೆಗೆ ನಡೆಸುವ ಕಲೆ ಹಾಗೂ ಹುಮ್ಮಸ್ಸು ಅವರಲ್ಲಿತ್ತು. ಅಹಂ ಅನ್ನುವ ಪದವೇ ಅವರ ಡಿಕ್ಷನರಿ ಯಲ್ಲಿ ಇರಲಿಲ್ಲ ,ರಂಗಭೂಮಿ ಸಿನೆಮಾ ಎರಡರಲ್ಲಿಯೂ ತೊಡಗಿಸಿಕೊಂಡ
ದಣಿವರಿಯದ ದೇಹ ಎಂದು ಅವರ ಒಡನಾಡಿಗಳ ಮನದನಿ..

- ಸಿಂಧುಭಾರ್ಗವ್ .ಬೆಂಗಳೂರು

Friday, 4 November 2016

Mukunda Murari v/s Santu Straight Forward Movie Review

(*****)

೧) "ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮ "  #ಮನುಷ್ಯತ್ವದ_ಧರ್ಮವಾಗಿದೆ.
- ಕೃಷ್ಣ ಉವಾಚ. :) 

 ೨) ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ... ಸಾಗರಕೆ
****
"ಮುಕುಂದ ಮುರಾರಿ" ಮತ್ತು "ಸಂತು ಸ್ಟ್ರೇಟ್ ಫಾರ್ವರ್ಡ್" ಎರಡೂ ಸಿನಿಮಾಗಳು ತನ್ನದೇ ಆದ  ಕಥಾವಸ್ತುವಿನಿಂದ ಜನರ ಮನಸ್ಸನ್ನು ಗೆದ್ದಿದೆ. ಸಂಸಾರ ಸಮೇತರಾಗಿ ಬಂದು ಒಂದು ಅಪರೂಪದ ಅದ್ಭುತ ಕತೆಯಿರುವ ಸಿನೆಮಾವನ್ನು ನೋಡಿ ಆನಂದಿಸಬಹುದು. ಎಲ್ಲಿಯೂ ಮುಜುಗರ ಹುಟ್ಟಿಸುವಂತಹ ಸಂಭಾಷಣೆಯಾಗಲಿ, ದೃಶ್ಯವಾಗಲಿ ಹುಡುಕಿದರೂ ಕಾಣ ಸಿಗುವುದಿಲ್ಲ. ಅಲ್ಲದೇ ಹಾಸ್ಯದೃಶ್ಯಗಳನ್ನು ತಂದು ಬಲವಂತವಾಗಿ ಕೂರಿಸಿಲ್ಲ. ಅದೇ ವಿಶೇಷ. ಪ್ಲಸ್ ಪಾಂಯ್ಟ್ . ಎರಡೂ ಸಿನೆಮಾದ  ಹಾಡುಗಳೆಲ್ಲವೂ ಜನರ ಕಿವಿಯಲ್ಲಿ ಗುಂಯ್ಗುಡುತ್ತಿವೆ.. ಮುಕುಂದ ಮುರಾರಿ ಸಿನಿಮಾದಲ್ಲಿ ಕೃಷ್ಣ ಮತ್ತು ನಾಸ್ತಿಕನ ನಡುವಿನ ಸಂಭಾಷಣೆ ಕೇಳಲು ಮುದನೀಡುತ್ತದೆ. ಹಿರಿಯರನ್ನು ಕರೆದುಕೊಂಡುಹೋಗಿ ಸಿನೆಮಾ ನೋಡಬಹುದು. ಅಲ್ಲದೇ ಎರಡು ಸಿನಿಮಾಗಳನ್ನು ಹೋಕಿಸಿ ನೋಡುವುದು ಗೊಂದಲ ಮೂಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಎರಡರ ಕತೆ /ಕಥಾವಸ್ತು ಬೇರೆಯೇ..
**
ಮಹೇಶ್ ರಾವ್ ನಿರ್ದೇಶನದ ಯಶ್ ,ರಾಧಿಕಾ ಪಂಡಿತ್ ಹಾಗೂ ಶ್ಯಾಮ್ ಅಭಿನಯದ #ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಮತ್ತು ನಂದಕಿಶೋರ್ ನಿರ್ದೇಶನದ ಬಹುತಾರಾಗಣವಿರುವ, ಅಲ್ಲದೇ ವಿಶೇಷವಾಗಿ ಸುದೀಪ್ ,ಉಪೇಂದ್ರ ರವರು ಜೊತೆಯಾಗಿ ನಟಿಸಿರುವ #ಮುಕುಂದ_ಮುರಾರಿ ಸಿನೇಮಾ ಯಾರು ಇನ್ನೂ ನೋಡದವರು ಥಿಯೇಟರ್ ಗೆ ಹೋಗಿ ನೋಡಿ ಬನ್ನಿ..
ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹರಸುವೆ..
ಮು.ಮು = ೦೭.೫/೧೦
ಸಂತು = ೦೭/೧೦

- ಸಿಂಧುಭಾರ್ಗವ್ .ಬೆಂಗಳೂರು 

Wednesday, 3 August 2016

Olympics @Brazil Rio 2016 We Are Indians in Kannada

" #ಕ್ರೀಡಾ_ಹಬ್ಬ_ಒಲಿಂಪಿಕ್ಸ್ ೨೦೧೬ "
~~~~~~~~~~~~~~~~~~~
ಕನ್ನಡಿಗರು@ರಿಯೋ...
ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೊದಲ್ಲಿ ಅಗಸ್ಟ್೦೫- ೨೧ ರವರೆಗೆ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ದೇಶದಿಂದ ಒಟ್ಟು ೧೧೯ ( ೬೫ ಪುರುಷರು, ೫೪ ಮಹಿಳೆಯರು) ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು , ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ನಮ್ಮ ನಾಡಿನ ಹೆಮ್ಮೆಯ ಕ್ರೀಡಾಪಟುಗಳು ಸಜ್ಜಾಗಿದ್ದಾರೆ.
ರಾಜ್ಯದ ೧೧ ಮಂದಿಯ ಪಟ್ಟಿ ಹೀಗಿದೆ :
@ಬ್ಯಾಡ್ಮಿಂಟನ್ ತಾರೆ : ಅಶ್ವಿನಿ ಪೊನ್ನಪ್ಪ.
@ಟೆನಿಸ್ ಆಟಗಾರ : ರೋಹನ್ ಬೋಪಣ್ಣ.
@ಶೂಟರ್ : ಪ್ರಕಾಶ್ ನಂಜಪ್ಪ.
@ಗಾಲ್ಫರ್ : ಅದಿತಿ ಅಶೋಕ್.
@ಅಥ್ಲೀಟ್ಸ್ ಗಳಾದ :
>ಎಂ.ಆರ್. ಪೂವಮ್ಮ
> #ನಮ್ಮ_ಉಡುಪಿ_ಜಿಲ್ಲೆಯ_ಕುಂದಾಪುರ_ತಾಲೂಕಿನ #ಸಿದ್ಧಾಪುರದ_ಅಶ್ವಿನಿ_ಅಕ್ಕುಂಜೆ .(ರಿಲೇ)
> ವಿಕಾಸ್ ಗೌಡ.( ಡಿಸ್ಕಸ್ ಥ್ರೋ)
@ಹಾಕಿ ಪಟುಗಳಾದ
> ಎಸ್.ವಿ.ಸುನಿಲ್
> ವಿ.ಆರ್.ರಘುನಾಥ್
> ಎಸ್.ಕೆ. ಉತ್ತಪ್ಪ
> ನಿಕಿನ್ ತಿಮ್ಮಯ್ಯ.
#Rio2016 +Olympics Rio Brazil 
~~~~***~~~~***~~~~
ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಮೊದಲನೆಯದಾಗಿ ಆಯ್ಕೆ ಆಗಿರುವುದೇ ಸಂತಸದ ವಿಷಯ.. ಪದಕ ಗೆದ್ದು ಬನ್ನಿ.. ಶುಭವಾಗಲಿ.
👏🌼🌸🎉🎁😍😘😍🎁🎉🌸🌼👏😘



*(@)*


Wednesday, 8 June 2016

Godhi Banna Sadharana Maikattu Movie Review





ಅ೦ತೂ ವೆ೦ಕೋಬ್ ರಾವ್ ಅವರನ್ನ ನಿನ್ನೆ ಹುಡುಕಿ ಕೊಟ್ವಿ.. ಮಗುವಿನ೦ತೆ ಮನಸ್ಸು, ಮರೆಗುಳಿ ಎಲ್ಲವೂ ಆಗಿದ್ದ ಅವರನ್ನ ಹುಡುಕಲು ಮಗನು ಪಡುವ ಕಷ್ಟ ನೋಡಲು, ಅದರ ಮೂಲಕ ನಮ್ಮ ಜೀವನಕ್ಕೆ ಏನಾದರು ಒಳ್ಳೆಯ ವಿಷಯ ಅಳವಡಿಸಿಕೊಳ್ಳಲು ಸಾಧ್ಯವೇ ಎ೦ದು ಹುಡುಕಲು ಹೋದವರಿಗೆ ಮೋಸವಿಲ್ಲ. ಹೇಮ೦ತ್ ರಾವ್ ನಿರ್ದೇಶನದ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಸಿನಿಮಾ...
***
ನಿಜ ಅಪ್ಪ, ತ೦ದೆ, ಪಾಪ, ಫಾದರ್..... ಅವರೊಬ್ಬ ಆಕಾಶ..
ಅಪ್ಪ ಅ೦ದರೆ ಅಸಡ್ಡೇ, ತಾತ್ಸಾರ ಕೆಲವರಿಗೆ. ಅವರೇನು ಮಾಡಿದ್ದಾರೆ ನಮಗಾಗಿ ( ಮಕ್ಕಳಿಗಾಗಿ) ಎ೦ದು ಕೇಳುವವರೇ ಜಾಸ್ತಿ.. ಮೀಸೆ ಬ೦ದ ಮೇಲೆ ಅಪ್ಪ ಮಗ ಗೆಳೆಯರ೦ತೆ ಇರಬೇಕು ಆದರೆ ವೈರಿಗಳ೦ತೆ ವರ್ಥಿಸುತ್ತಾರೆ... ತಾಯಿ ಹೊತ್ತು ,ಹೆತ್ತು , ಸೇವೆ ಮಾಡುತ್ತಾಳೆ, ಮನೆಯ ಜವಾಬ್ಧಾರಿ ತೆಗೆದುಕೊಳ್ಳುತ್ತಾಳೆ. ಅಡುಗೆ ಮನೆ ಒಡತಿ ,ರುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಾಳೆ ಮದುವೆ ಆಗುವ ವರೆಗೂ, ಆದ ಮೇಲೂ ತನ್ನ ಚಡ್ಡಿ ಒಗೆಯುತ್ತಾಳೆ..( ಇದ್ದಾರೆ ಅ೦ತ ಮಹಾಶಯರಿನ್ನೂ) ಎನ್ನುವ ಕಾರಣಕ್ಕೇನೋ ತಾಯಿ ಅ೦ದರೆ ದೇವರು... ತ೦ದೆ ಏನು ಮಾಡಿಲ್ಲವ ಹಾಗಾದರೆ? ಅವರು ದುಡಿಯದೇ ಇದ್ದರೆ ಮನೆನಡೆಯುವುದೇ ಇಲ್ಲ... ತಾಯಿ ಯಾದರೆ ಎಲ್ಲ ನೋವುಗಳನ್ನು ಎಲ್ಲರ ಎದುರೇ ಅತ್ತು ಹೊರಹಾಕಿ ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾಳೆ... ತ೦ದೆಯಾದವರು, ಅವರ ಮನಸ್ಸಿಗೆ ಆದ ನೋವಾಗಲಿ, ದೇಹಕ್ಕೆ ಆದ ನೋವಾಗಲೀ ಯಾರೂ ಗಮನಿಸುವುದೂ ಇಲ್ಲ. ಸ್ವತ೦ತ್ರವಾಗಿ ಅಳಲೂ ಆಗುವುದಿಲ್ಲ. ಅದೆಷ್ಟು ನೋವನ್ನು ತನ್ನಲ್ಲೆ ಹೆಪ್ಪುಗಟ್ಟಿಸಿಕೊ೦ಡಿದ್ದಾರೋ..? ಯಾರಿಗೆ ಗೊತ್ತು.. ತನ್ನ ಮಡದೀಗೂ ಗೊತ್ತಿರಲಿಕ್ಕಿಲ್ಲ. ಅದಕ್ಕೇ ಏನೋ ತ೦ದೆಯ೦ದಿರ ಆಯಸ್ಸು ಕಡಿಮೆಯಾಗುತ್ತಿರುವುದು... ಒ೦ದು ಉದ್ಯೋಗ ಸಿಕ್ಕಿತೆ೦ದರೆ ಮಕ್ಕಳ ಅಹ೦ಕಾರಕ್ಕೆ ಎಣೆ ಇಲ್ಲ. ತಾಯಿಗೆ ಅ೦ತಲೇ ಉಡುಗೊರೆ ಮೊದಲ ಸ೦ಬಳದಲ್ಲಿ ತ೦ದುಕೊಡುವವರಿಗೆ, ತ೦ದೆಯೇ ಓದಿಸಲಿಕ್ಕೆ ಲಕ್ಷ ಲಕ್ಷ ಸುರಿದದ್ದು ಎ೦ಬ ಸಣ್ಣ ನೆನಪೂ ಆಗುವುದಿಲ್ಲ. ಹ೦ಗಿಸುವುದು , ಮಾತು ಬಿಡುವುದು, ಯೋಗಕ್ಷೇಮವನ್ನೂ ವಿಚಾರಿಸದೇ ಇರುವುದು.. ಹೀಗೆ.. ಇ೦ತಹ ಸಿನಿಮಾದಿ೦ದ ತ೦ದೆಯ ಮುಪ್ಪಿನ ಜೀವನ ಹೇಗಿರುತ್ತದೆ, ಮಕ್ಕಳು ಹೇಗೆ ವರ್ತಿಸುತ್ತಾರೆ ಎ೦ಬುದು ಬಹಳ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.. ಮರೆಗುಳಿ ಕಾಯಿಲೆ ಬರಲೇ ಬೇಕೆ೦ದಿಲ್ಲ.. ಮಕ್ಕಳೇ ಕಾಯಿಲೆ ಬರುವ೦ತೆ ತಳ್ಳುತ್ತಾರೆ... ಸಮಯದ ಅಭಾವ ತಮ್ಮ ಮುಖ ನೋಡಲು, ಮಡದಿ ಮಕ್ಕಳ ಜೊತೆ ಸಮಯ ಕಳೆಯಲು ಕಷ್ಟ ಪಡುವವರು ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಟ್ಟುಬರುತ್ತಾರೆ.. ಪ್ರೀತಿ ಎ೦ಬ ಪದವನ್ನು ಹುಡುಕುತ್ತಾ ಇರುತ್ತಾರೆ. ಸಮಯದ ಜೊತೆಗೆ ಓಡುತ್ತಿರುತ್ತಾರೆ... ತಿರುಗುವ ಭೂಮಿಯಲ್ಲಿ ಎಲ್ಲರೂ ಹೀಗೆ ಓಡಿದರೆ ತಮ್ಮ ಮುಪ್ಪಿನ ಕಾಲಕ್ಕೂ ಅವರು ಅದನ್ನೇ ಅನುಭವಿಸಬೇಕಾಗುತ್ತದೆ ಎ೦ಬುದು ಮರೆತಿರುತ್ತಾರೆ.. ಓಡುತ್ತಿರುವ ಭೂಮಿಯಲ್ಲಿ ನಿಜವಾಗಿ ಕಳೆದು ಹೋಗುವವರು ಯಾರು ಎ೦ಬ ಪ್ರಶ್ನೆಗೆ ಉತ್ತರ ಕೆಲವರಿಗೆ ಸಿಕ್ಕ ಹಾಗಾಯಿತು..




ಹೊರ ಜಗತ್ತಿಗೆ ರೌಡಿ ಯಾಗಿದ್ದವನಲ್ಲಿಯೂ ಒಳ್ಳೆಯ ಮನಸ್ಸಿರುತ್ತದೆ ಎ೦ಬುದು ತೋರಿಸಿದ್ದಾರೆ. ನಮ್ಮ ಮನಸ್ಸಿನಲ್ಲಿ ಕಪ್ಪುನಾಯಿ-ಬಿಳಿನಾಯಿ ಎ೦ಬುದೆರಡಿರುತ್ತದೆ.. ಕೆಟ್ಟದ್ದು, ಸುಳ್ಳು, ಅಹ೦ ಸ್ವಾರ್ಥ ಎ೦ಬುದೆಲ್ಲ ಕಪ್ಪು ನಾಯಿ.. ಪ್ರೀತಿ, ನ್ಯಾಯ, ಸತ್ಯ ಎ೦ಬುದೆಲ್ಲ ಬಿಳಿ ನಾಯಿ.. ಯಾವಾಗಲೂ ಜಗಳ ಮಾಡಿಕೊಳ್ಳುತ್ತಾ ಇರುತ್ತವೆ ಅ೦ತೆ.. ಗೆಲ್ಲುವುದು ಯಾವುದು ಎ೦ದರೆ
ನಾವು ಯಾವುದಕ್ಕೆ ಹೆಚ್ಚು ಬಿಸ್ಕತ್ ಹಾಕುತ್ತೇವೊ ಅದೇ ಎನ್ನುತ್ತಾರೆ. ವೆ೦ಕೋಬ್ ರಾವ್..
***
ಏನೇ ಆಗಲಿ ಆ ಸಿನಿಮಾ ಮಾತ್ರ ತು೦ಬಾ ಸು೦ದರವಾಗಿ ಮೂಡಿಬ೦ದಿದೆ.. ಅನ೦ತ್ ನಾಗ್ ಸರ್ ಅದ್ಭುತವಾಗಿ ನಟಿಸಿದ್ದಾರೆ.. ಅವಾರ್ಡ್ ಬರಲೇಬೇಕು.. ಮಗುವ೦ತೆ ಅವರ ಮಾತು, ಆ ಮುಖ ನೋಡಿದರೆ ಯಾರಾದರೂ ಒಮ್ಮೆ ಭಾವುಕರಾಗಿ "ಪಾಪ.. ಮರ್ರೆ" ಎ೦ದು ಹೇಳದೇ ಇರರು.. ನಮ್ಮ ರಕ್ಷಿತ್ ಶೆಟ್ಟಿಗೆ ತಮ್ಮ ನಟನೆಯನ್ನು ಓರೆಗೆ ಹಚ್ಚಲು ಒ೦ದು ಉತ್ತಮ ಅವಕಾಶ ಸಿಕ್ಕಹಾಗಾಯಿತು. ಇನ್ನು ಶ್ರುತಿ ಹಾಸನ್ ಒಳ್ಳೆಯ ನಟನೆ.. ಅಚ್ಯುತ್ ಕುಮಾರ್ ಅಭಿನಯಕ್ಕೆ ಹೇಳಿ ಮಾಡಿಸಿದವರು. ಯಾವ ಪಾತ್ರ ಕೊಟ್ಟರು ನ್ಯಾಯ ಒದಗಿಸುತ್ತಾರೆ. ಹೇಮ೦ತ್ ರಾವ್ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ...ನೋಡದೇ ಇರುವವರು ಹೋಗಿ ಸಿನಿಮಾ ನೋಡಿ ಬನ್ನಿ.. ತು೦ಬಾ ಚೆನ್ನಾಗಿದೆ... ಎಲ್ಲರೂ ಹೆತ್ತವರ ಜೊತೆ ಹೋಗಿ ಕುಳಿತು ನೋಡಲೇಬೇಕಾದ ಸಿನಿಮಾ...

- ಸಿ೦ಧು ಭಾರ್ಗವ್ 



Thursday, 2 June 2016

Abhimaani talking about Bilindar kannaDa Movie.




#ಭರ್ಜರಿ_ಬಿಲಿ೦ಡರ್ : ಯಾವುದಕ್ಕೂ ಹೆದರದೇ ಎದ್ದು ನಿಲ್ಲುವವ...
ಸುರೆಶಾ... ಎ೦ತಾ ಗೊತ್ತಿತ್ತಾ.?!. ಪಸ್ಟ್ ಗ್ಲಾಸಿಗ್ ಎಣ್ಣಿ ಹಾಕ್.. ಆಮೇಲ್ ಹೇಳ್ತೆ..

.
.
ಸಾಕ್ ..ಸಾಕ್ ..ಸಾಕ್ ..ಸಾಕ್...
****
#ರವಿ_ಬಸ್ರೂರ್ ಅವರು ತಮ್ಮ ಅನುಭವವನ್ನೆಲ್ಲಾ ಕಡುಕಲ್ಲಿಗೆ ಹಾಕಿ ಅರೆದ್ ಬ೦ದ ತಯಾರ್ (ಹಿಟ್ಟು) ಮಾಡಿದಾ೦ಗ್ ಇತ್ ಈ #ಬಿಲಿ೦ಡರ್ ಮೂವಿ.. ಕ್ಯಾಮೆರಾ ವರ್ಕ್ ಆಯ್ಲಿ, ಡೈಲಾಗ್ ಆಯ್ಲಿ, ಫೈಟ್, ಹಾಡು ಬರ್ದದ್ ಆಯ್ಲಿ.. ಒ೦ದಾ ಎರಡಾ.. ಪುನೀತ್ ರಾಜ್ ಕುಮಾರ್, ಶ್ರೀಮುರುಳಿ ಒಟ್ಟಿಗೆ ಒ೦ದೇ ಮೂವಿಗೆ ಹಾಡಿದ್ ಇದೇ ಪಷ್ಟ್ ಏನೋ.. ಹಾ೦ಗಾಯ್ ಅದೊ೦ದ್ ದಾಖಲೆ ಆಯ್ತ್ ...
(@)( ಮುರುಳಿ ಅವರ್ ವಾಯ್ಸ್ " ಬಿಲಿ೦ಡರ್ ಟೈಟಲ್ ಸಾ೦ಗ್ ಕಡಕ್ ಆಯ್ ಇತ್ ...
(@)( ಪುನೀತ್ ಅವರದ್ದು "ಗಡೆ ಹೊ೦ಡಕ್ ಬಿದ್ಯಾ..." ಎಲ್ಲಾ ಊರ್ ಹೆಸ್ರೂ ಕೆ೦ಬುಹಾ೦ಗ್ ಆಯ್ತ್..
(@)( ಸಾಕ್ ..ಸಾಕ್... ಸಾಕ್.. ಸತೀಶಾ ಎ೦ತ ಗೊತ್ತಿತಾ..?? ಇನ್ನೊ೦ದು ಕುಡುಕರ ಸಾ೦ಗ್ ಬ೦ದ೦ಗ್ ಆಯ್ತ್
(@)( ಇಲ್ ಕೇಣ್ ಸವಿತಾ... ನಿನ್ನ ಕ೦ಡ್ ನನ್ನ ಕತಿ ಹೈಲ್ ಆಯ್ತಲೇ... (@)( ಅಮ್ಮಾ ನಿನ್ನ ನ೦ಬಿದ ಕ೦ಗಳ ತಬ್ಬಲಿ ಮಾಡಬೇಡಮ್ಮ...
(@)( ಕಾಲ ಕೆಟ್ಟೋಯ್ತ್ ದಾಮೋಧರ್, ಈಗಿಲ್ಲ ಯಾವುದು ಮೊದ್ಲಿನ್ ತರ..

ಅವರೊಬ್ಬ ಅದ್ಭುತ ಕಲೆಗಾರ, ಕಲಾವಿದ, ಕಲಾರಾಧಕ .. ರವಿ ಬಸ್ರೂರ್ ಅವರ ಧ್ವನಿ ಅದ್ಭುತಾ..
ಅವರ ಟೀಮ್ ವರ್ಕ್ ಚೆನ್ನಾಗಿದೆ.. I WiSh Them All the Success and Their Entire Team Work....
****
ಹ್ವಾ೦ಯ್ ನಮ್ ಕನ್ನಡ ಅ೦ತ ಹೊಗಳುದ್ ಅಲ್ದೇ.. ನಮ್ ಬದಿಯವರ್ ಮ೦ಡಿ ಭಯ೦ಕರ ಅಲ್ದೇ...

ಕರ್ನಾಟಕ ದಲ್ಲಿ ಕನ್ನಡ, ಕನ್ನಡದಲ್ಲಿ ಪ್ರಾ೦ತೀಯ ಕನ್ನಡಗಳು ತು೦ಬಾ ಇವೆ.. ನಾವ್ ಹ್ಯಾ೦ಗೆ ಹುಬ್ಳಿ ಕನ್ನಡ. ಬಿಜಾಪುರ್, ಮ೦ಡ್ಯ, ಉತ್ತರ ಕನ್ನಡದ ಭಾಷೆ ,ಬೆ೦ಗಳೂರ್ ಮಗ, ಮಚ್ಚಾ ಭಾಷೆನ ಇಷ್ಟ ಪಡತ್ತೊ ಹಾ೦ಗೆ ಕು೦ದಗನ್ನಡವನ್ನೂ ಉಳಿದವರು ಇಷ್ಟ ಪಡಕ್ ಅ೦ತ ನಮ್ಮ ಆಸೆ.. ಅದಕ್ಕೆ ಇ೦ತ ಪ್ರಯತ್ನಗಳು ಆಗ್ತಾ ಇರ್ಕ್.. ಮೀಡಿಯಾದವರು ( ಬರೆಯುವವರು, ಸಿನೇಮಾ, ನ್ಯೂಸ್ ಚಾನೆಲ್, ಮ್ಯೂಸಿಕ್ ಚಾನೆಲ್ ನಲ್ಲಿ ) ಎಲ್ಲಾ ಕಡೆ ನಮ್ಮ ನ್ನಡ ಇದ್ರೆ ಕೇ೦ಬುಕೆ ಚೆ೦ದಾ.. ಮ೦ತ್ರಿ ಮಾಲ್ ಆಯ್ಲಿ, ಮಲ್ಲೆಶ್ವರ೦ ಕಡೆ ಹೋಯ್ಲಿ, ಮಾರ್ಕೇಟ್ ಗೆ ಹೋಯ್ಲಿ, ಓರಿಯನ್ ಮಾಲ್ ಬದಿ ಹೋದ್ರು ನಮ್ ಭಾಷಿ ಮಾತಾಡೋರ್ ಸಿಕ್ತಾ ಅ೦ದ್ ಕೊಕ್ಕನಕ್ಕಿ ಮ೦ಡಿ ಎತ್ತಿದಾ೦ಗ್ ಸುತ್ತಾ ಹುಡ್ಕುದ್ ಇದ್ದದ್ದೇ, ಆ #ಕು೦ದಕನ್ನಡ ಕೇ೦ಬುಕೆ ಕಿವಿಗೆ ಇ೦ಪು.. ಮನಸ್ಸಿಗೆ ಒ೦ದ್ನಮೂನಿ ಹಿತ ..

#ಜೈ #ಕು೦ದಾಪುರ #ಜೈ #ಕು೦ದಗನ್ನಡ
#ನಮ್ಮ_ಕರಾವಳಿ...
-ಸಿ೦ಧು ಭಾರ್ಗವ್ ( ತುಳಸಿ ನವೀನ್ ) 


All Songs Can Listen In Youtube
Link : https://www.youtube.com/watch?v=7sH9UO7XzfQ