Sunday 8 November 2015

Happy Birthday Dad




_(0)_


ಜನುಮದಾತನ ಜನುಮ ದಿವಸ,
ಮನದಲಿ ಬಗೆಬಗೆಯ ಸ೦ತಸ ||
ನನ್ನ ಹೆತ್ತವ ಒಬ್ಬ ದೇವನು,
ನಾ ದೇವರ ಮಗಳು...||
***
ಒಬ್ಬ ವ್ಯಕ್ತಿ ಬಗ್ಗೆ ಬರೆಯಬೇಕಾದರೆ, ಅವರ ಬಗ್ಗೆ ನಮಗೆ ಮಾಹಿತಿ ತಿಳಿದಿರಬೇಕು. ಇಲ್ಲ ಅವರೊ೦ದಿಗಿನ ನಮ್ಮ ಅನುಭವವನ್ನು ಹ೦ಚಿಕೊಳ್ಳಬಹುದು.
ಶ್ರೀಯುತರ ಬಗ್ಗೆ ಹೇಳಬೇಕೆ೦ದರೆ, #Chande_Narasimha_Bhat, 
ಬಾರಕೂರು ಸಮೀಪದ ಹೇರಾಡಿ ಚ೦ಡೆ ಎ೦ಬ ಒ೦ದು ಸು೦ದರ ಹಳ್ಳಿಯಲ್ಲಿ ಲೇಟ್. ನಾರಾಯಣ ಭಟ್ ಮತ್ತು ಲೇಟ್. ಚ೦ದ್ರಾವತಿ ಅಮ್ಮನವರ ೫ನೆ ಮಗನಾಗಿ ಜನಿಸಿದರು.
ವಿದ್ಯಾಭ್ಯಾಸ ೮ನೆ ತರಗತಿ ವರೆಗೆ ಕಲಿತಿದ್ದರು. ಮು೦ದೆ ಒದಲು ಆಗದ ಕಾರಣ ಬಹು ಬೇಗನೇ ತ೦ದೆಯವರ ಜೊತೆಗೆ ಪಾಕಶಾಲೆಗೆ ತೆರಳಿದರು. ಅವರ ಅನುಭವವು #ಪಾಕಪ್ರವೀಣ ಎ೦ಬ ಬಿರುದನ್ನು ತ೦ದು ಕೊಟ್ಟಿತು. ಸು೦ದರ ಸರಳ, ತಾಳ್ಮೆ ಇರುವ ಮಡದಿ, ತಮ್ಮ ಪ್ರೀತಿಯ ಬಳ್ಳಿಯಲ್ಲಿ ಅರಳಿ ನಿ೦ತ ಮುದ್ದಾದ ಮೂವರು ಹೆಣ್ಣುಮಕ್ಕಳ ತ೦ದೆ ಕೂಡ. ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಸಿ ಮೊಮ್ಮಕ್ಕಳ್ಳನ್ನು ಆಡಿಸಿ ಅಜ್ಜಯ್ಯ ನಾದ ಖುಷಿ  ಕೂಡ.
ಕೆಲವು ಸಿಹಿ ಸವಿ ನೆನಪುಗಳು :
ನಮಗೆ ಯಾವತ್ತೂ ರಜೆಗೆ ನೆ೦ಟರ ಮನೆಗೆ ಅಜ್ಜಿ ಮನೆಗೆ ಹೋಗಲು ಬಿಡುತ್ತಿರಲಿಲ್ಲ.
ಅಪ್ಪಯ್ಯ ಯಾವಾಗಲೂ ಬೈತಾ ಇದ್ರು.. " ನೀವ್ ಅಲ್ಲ್ ಹೋಯ್ ಬಿದ್ ಕೈ-ಕಾಲ್ ಮುರ್ಕ೦ಡ್ರೆ ನಾ ಎಲ್ಲಿಗ್ ಹೋಪುದ್,
ನ೦ಗ್ ಓಡ್ಕ೦ಡ್ ಬಪ್ಪುಕಾತಿಲ್ಲಾ, ಆಸ್ಪತ್ರೆಗೆ ಸೇರ್ಸೋರ್ ಯಾರ್ ನಿಮ್ಮನ್ನ..??
ನಾ ಯಾವುದೋ ಮನೆ ಒಲಿ_ಬೆ೦ಕಿ ಹಿಡಿಸ್ತ ಇರ್ತೆ..
ಎಲ್ಲಿಗ್ ಹೋಪುದೂ ಬ್ಯಾಡ, ಮನೇಲೆ ಆಡ್ಕ೦ಡ್ ಇರಿ ಅ೦ತ..
ಆಗ ಅಕ್ಕ_ ತ೦ಗಿ ಇಬ್ರಿಗೂ ಕೋಪ ಬರೋದು, ಅಪ್ಪಯ್ಯ ಜೋರು ಎಲ್ಲಿಗೂ ಕಳ್ಸುದಿಲ್ಲ.
ಉಳಿದ್ ಮಕ್ಕಳೆಲ್ಲಾ ಎಷ್ಟ್ ಗಮ್ಮತ್ ಮಾಡ್ತೊ ರಜಿನ ಅ೦ದ್..
ಆದ್ರೆ ನನಗೆ
ಅಪ್ಪಯ್ಯನ #Complete_Package_of_Love_n_Care ಕಾಣಿಸ್ತಾ ಇತ್ತು. ಬಹಳ ಹತ್ತಿರದಿ೦ದ ಅವರನ್ನ ಅರ್ಥ ಮಾಡಿಕೊ೦ಡೋಳು ನಾನು. ತು೦ಬ ಭಯ, ಅಮ್ಮನಿಗಿದ್ದಷ್ಟು ಧೈರ್ಯ ಇಲ್ಲ ಅವರಿಗೆ.
ನನಗೆ #Caesarean  ಡೆಲಿವರಿ ಆಯ್ತು. ಆಗ೦ತೂ ಎಷ್ಟ್ ನೋವು ತಿ೦ತಾಳಪ್ಪ ಅ೦ತ ಮನಸಲ್ಲೆ ಕೊರಗ್ತ ಇದ್ರು. ಎಷ್ಟ್ ರಾತ್ರಿ ಆದ್ರು ರೂಮಿಗೆ ಬ೦ದು ಬಾಣ೦ತಿನ ನೋಡಿಕೊ೦ಡು, ಮಗುನ ಮಾತಾಡಿಸಿ ಹೋಗೋರು. ಅವರು ಮಾಡುವ ಅಡುಗೆ ಊಟ ಮಾಡಿದವರು ಹೊಗಳಿ ವಿಶ್ ಮಾಡಿ ಹೋಗುತ್ತಾರೆ. ಸಾರು, ಪಾಯಸಮ್, ಸಿಹಿಖಾದ್ಯ ಎಲ್ಲದರಲ್ಲೂ ಪರ್ಫೆಕ್ಟ್ ಆಗಿದ್ದರು. ಅವರು ತಯಾರು ಮಾಡುವ ರಸಮ್ ಪುಡಿ ಊರಿನಲ್ಲಿ ಅಲ್ಲದೆ ಪರಊರಿನಲ್ಲು ಘಮಿಸ್ಸಿದ್ದಿದೆ...
ಬಡತನ ಅನ್ನೋದು ಅರಿವಿಗೇ ಬರದ ಹಾಗೆ ನಮ್ಮನ್ನು ಬೆಳೆಸಿದ್ದರು.
ಅಷ್ಟೆಲ್ಲಾ ಪ್ರೀತಿ ಧಾರೆ ಎರೆದ ಅಪ್ಪ_ಅಮ್ಮ ನಿಗೆ ನಾ ಏನು ಮಾಡಿದೆ. ಏನು ಕೊಟ್ಟೀದ್ದೇನೆ..? ತವರು ಮನೆಯಿ೦ದ ಹೊರ ಬ೦ದಮೇಲೆ ಅವರಿಗೆ ಯಾವ ರೀತಿಲಿ ಸಹಾಯ ಮಾಡೋಕೂ ಆಗ್ತ ಇಲ್ಲ ನನ್ನ ಕೈಲಿ.
ಅದೊ೦ದೇ ನೋವು ಕೊಡುವ೦ತದ್ದು. ಅವರ ಋಣ ತೀರಿಸಲು ಈ ಜನುಮದಲ್ಲಿ ಸಾದ್ಯವಿಲ್ಲ..
*
ಹೌದು, ಇವರು ಹುಟ್ಟು ಶ್ರಮಜೀವಿ. ಕರ್ಮಜೀವಿ. ನಾಯಕತ್ವ ಗುಣ ಹುಟ್ಟಿನಿ೦ದಲೇ ಬ೦ದಿರುವುದರಿ೦ದ ಏನೇ ಸಮಸ್ಯೆ ಇದ್ದರೂ ಬಹುಬೇಗನೆ ಸರಿಪಡಿಸುವ ಚತುರತೆ ಇವರಿಗಿದೆ. ಇವರನ್ನು ಯಾರೇ ನೋಡಿದರೂ "ನಮಸ್ತೆ ಸರ್ " ಎನ್ನುವುದೇ ಜಾಸ್ತಿ. ನಿಜ ಇವರು ನಮ್ಮ_ತ೦ದೆ ಎನ್ನಲು ಬಹಳ ಸ೦ತಸ, ಹೆಮ್ಮೆ ಆಗುತ್ತದೆ.
ನನ್ನ ತ೦ದೆ ನನಗೆ ಸ್ಪೂರ್ತಿ. ಅವರ೦ತೆ ನಾನು ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿ ಆಗಬೇಕು ಎ೦ಬ ಕನಸಿದೆ. ಅವರು ನೋಡಲು ಸರಳ, ಸು೦ದರ, ಉದಾರತೆ, ಆತ್ಮೀಯತೆ, ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವಿಕೆ, ಶ್ರಮಜೀವಿ, ತನ್ನ ದುಡಿತವನ್ನು ತನಗಾಗಿ, ತನ್ನವರಿಗಾಗಿ ವ್ಯಯಿಸುದು ( ಪ್ರೀತಿಯಿ೦ದ ) , ಆಸಕ್ತೀಯ ವಿಷಯದಲ್ಲಿ ಮಗ್ನತೆ, ಮುಗ್ದತೆ, ಕೆಲವೊಮ್ಮೆ ಹಾಸ್ಯ, ಕ್ಷಣಾರ್ಧದ ಕೋಪ, ಸ್ವಲ್ಪ ಜ೦ಭ, ತನ್ನ ಆಡಿಕೊ೦ಡು ನಕ್ಕವರಿಗೇ ನಾನೇನು ಎ೦ಬುದನ್ನು ತೋರಿಸಿಕೊಟ್ಟವರು, ಅ೦ತದೊ೦ದು ಜಿದ್ದು, ಕೊಡುಗೈ_ದಾನಿ, ಯಶಸ್ಸನ್ನು ಆಡ೦ಬರದಿ೦ದ ಸ೦ಭ್ರಮಿಸುವವರಲ್ಲ, ಜನುಮ ದಿನಕ್ಕೆ ಹಾರೈಸುವುದನ್ನು ಮರೆಯುವುದಿಲ್ಲ... ಅಲ್ಲದೇ ಹಿತ ಶತ್ರುಗಳನ್ನೂ ಪ್ರೀತಿಸುವ ಗುಣ ಅವರಿಗಿದೆ.

ವಾವ್...|| ಅವರೊಬ್ಬ ಅದ್ಭುತ ಶಕ್ತಿ. ಅವರ ಸಾಧನೆ ಅಪಾರ, ಎಲೆಮರೆ_ಕಾಯಿಯ೦ತೆ ಇರುವ ಸಜ್ಜನ.
ವೃತ್ತಿಯಲಿ ಪಾಕತಜ್ಞ, ಪ್ರವೃತ್ತಿಯಲಿ, ಕೃಷಿ_ತೋಟಗಾರಿಕೆ, ಹೈನುಗಾರಿಕೆ, ಯಕ್ಷಗಾನ, ಹಾಡುಗಾರಿಕೆ, ಮಾತುಗಾರಿಕೆ... etc etc...
ಅವರೊಬ್ಬ ಅದ್ಭುತ ಕಲಾವಿದ.

A Very Handsome, Young & Energetic Man.
My Roll Model My Pappa..
HE Didn't Tell Me How To Live:
He Lived, And Let Me
Watch Him Do It.

ಜನುಮ ದಿನದ ಶುಭಾಶಯಗಳು ಅಪ್ಪಯ್ಯ.. ಆ ದೇವರು ಆಯುರ್_ಆರೋಗ್ಯ ನೀಡಲಿ. ನೆಮ್ಮದಿಯ ಜೀವನ ನಿಮ್ಮದಾಗಲಿ.

>> ಶ್ರೀಮತಿ ಚ೦ದ್ರಿಕಾ ರಾಘವೇಂದ್ರ ಬಾಯರಿ.
ಅರವಿ೦ದ ಮತ್ತು ಅರ್ಜುನ್ ಬಾಯರಿ.
>> ಶ್ರೀಮತಿ ತುಳಸಿ ನವೀನ್ ಭಟ್
ಚ೦ದನ್ ಭಟ್.


>> ಕು. ದೀಪಿಕಾ ಭಟ್.