Tuesday 8 November 2016

ಲೇಖನ- ನಮ್ಮ ನೆನಪಿನಲ್ಲಿ ಶಂಕರ್ ನಾಗ್


(@@@)



(@@@)

ನಮ್ಮ ನೆನಪಿನಲ್ಲಿ ಶಂಕರ್ ನಾಗ್.. ಇಂದು ಅವರ ೬೨ನೇ ಜನ್ಮದಿನ.

"ನಗುವ ಗುಲಾಬಿ ಹೂವೇ." ಎಂದು ಆಟೋ ಶಂಕರ್ ಹಾಡು ಹಾಡುತ್ತಾ
ಪ್ರೀತಿಸಿ ಮದುವೆಯಾದವರು ಹೇಗೆ ಬದುಕಿತೋರಿಸಬೇಕು ಎಂಬುದನ್ನು "ಪರಮೇಶಿ ಪ್ರೇಮ ಪ್ರಸಂಗದಲ್ಲಿ" ಜನರಿಗೆ ಅರ್ಥೈಸುತ್ತಾ "ನೋಡಿ ಸ್ವಾಮಿ ನಾವ್ ಇರೋದು ಹೀಗೆ.." ಎಂಬ ನೇರನುಡಿಗಳಿಂದ ಬದುಕುತ್ತಾ,
"ಸತ್ತಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದರೂ ಸಾಧಿಸು" ಎಂದು ಯುವಕರ ಬೆನ್ನುತಟ್ಟಿ ಎಚ್ಚರಿಸುತ್ತಾ "ಆ್ಯಕ್ಸಿಡೆಂಟ್" ಆಗಿ ನಮ್ಮನ್ನೆಲ್ಲ ಅಗಲಿ ಈಗ "ಕೇಳದೇ ನಿಮಗೀಗ ದೂರದಲ್ಲಿ ಯಾರೋ..." ಎಂದು ಎಲ್ಲಾ ಅಭಿಮಾನಿಗಳ ಮನದಲ್ಲಿ ದಿನಕ್ಕೆ ಒಮ್ಮೆಯಾದರೂ ಅವರ ನೆನಪು ರಿಂಗಣಿಸುವಂತೆ ಮಾಡುತ್ತಿದ್ದಾರೆ.
- ಶಂಕರ್ ನಾಗ್.
***
ಅವರ ಅಣ್ಣ ಅನಂತ್ ನಾಗ್ ರವರು, ರಮೇಶ್ ಭಟ್, ಮಾ.ಮಂಜುನಾಥ್, ಅರುಂಧತಿನಾಗ್ ಎಲ್ಲರನ್ನೂ ಈ ದಿನ ನೆನಪಿಸಿಕೊಳ್ಳಬೇಕು. ಅವರೆಲ್ಲರೂ ಕಲೆಯನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಾ ಇರುವವರು. ಶಂಕರ್ ನಾಗ್ ಅವರ  ಕಲ್ಪನೆಯ ಕೂಸು #ರಂಗಶಂಕರ ಎನ್ನುವ ದೊಡ್ಡ ರಂಗಭೂಮಿಯನ್ನು ಅವರ ಧರ್ಮಪತ್ನಿ ಅರುಂಧತಿನಾಗ್ ಅವರು ೨೦೦೪ರಲ್ಲಿ  ಪ್ರಾರಂಭಿಸಿದರು. ಅವರು ಈಗ ಇದ್ದಿದ್ದರೆ ಬೆಂಗಳೂರು ಅದೆಷ್ಟೋ ಬದಲಾವಣೆ ಕಾಣುತ್ತಿತ್ತು. ಆಗಿನ ಕಾಲದಲ್ಲೇ ಅವರು ಬೆಂಗಳೂರಿಗೆ ಮೆಟ್ರೋ ರೈಲಿನ ಬಗ್ಗೆ, ನಂದಿಬೆಟ್ಟಕ್ಕೆ ರೋಪ್_ವೇ ಮುಂತಾದ ಯೋಜನೆಗಳ ಕನಸನ್ನು ಕಂಡವರು. ಅವರು ಒಂದು ರೀತಿಯ ಕಿಡಿ(ಸ್ಪಾರ್ಕ್) ಅದು ಸಾಮಾನ್ಯದ್ದಲ್ಲ, ತಾನು ಬೆಳಗಿ ಇತರರಿಗೂ ಬೆಳಕು ನೀಡುವಂತದ್ದು.. ಜೊತೆಗಾಗರನ್ನು ಪ್ರೀತಿಸುವ ,ಕಾಳಜಿ ತೋರಿಸುವ ಎಲ್ಲರನ್ನೂ ಬಡಿದೆಬ್ಬಿಸಿ ಜೊತೆಗೆ ನಡೆಸುವ ಕಲೆ ಹಾಗೂ ಹುಮ್ಮಸ್ಸು ಅವರಲ್ಲಿತ್ತು. ಅಹಂ ಅನ್ನುವ ಪದವೇ ಅವರ ಡಿಕ್ಷನರಿ ಯಲ್ಲಿ ಇರಲಿಲ್ಲ ,ರಂಗಭೂಮಿ ಸಿನೆಮಾ ಎರಡರಲ್ಲಿಯೂ ತೊಡಗಿಸಿಕೊಂಡ
ದಣಿವರಿಯದ ದೇಹ ಎಂದು ಅವರ ಒಡನಾಡಿಗಳ ಮನದನಿ..

- ಸಿಂಧುಭಾರ್ಗವ್ .ಬೆಂಗಳೂರು

Friday 4 November 2016

Mukunda Murari v/s Santu Straight Forward Movie Review

(*****)

೧) "ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮ "  #ಮನುಷ್ಯತ್ವದ_ಧರ್ಮವಾಗಿದೆ.
- ಕೃಷ್ಣ ಉವಾಚ. :) 

 ೨) ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ... ಸಾಗರಕೆ
****
"ಮುಕುಂದ ಮುರಾರಿ" ಮತ್ತು "ಸಂತು ಸ್ಟ್ರೇಟ್ ಫಾರ್ವರ್ಡ್" ಎರಡೂ ಸಿನಿಮಾಗಳು ತನ್ನದೇ ಆದ  ಕಥಾವಸ್ತುವಿನಿಂದ ಜನರ ಮನಸ್ಸನ್ನು ಗೆದ್ದಿದೆ. ಸಂಸಾರ ಸಮೇತರಾಗಿ ಬಂದು ಒಂದು ಅಪರೂಪದ ಅದ್ಭುತ ಕತೆಯಿರುವ ಸಿನೆಮಾವನ್ನು ನೋಡಿ ಆನಂದಿಸಬಹುದು. ಎಲ್ಲಿಯೂ ಮುಜುಗರ ಹುಟ್ಟಿಸುವಂತಹ ಸಂಭಾಷಣೆಯಾಗಲಿ, ದೃಶ್ಯವಾಗಲಿ ಹುಡುಕಿದರೂ ಕಾಣ ಸಿಗುವುದಿಲ್ಲ. ಅಲ್ಲದೇ ಹಾಸ್ಯದೃಶ್ಯಗಳನ್ನು ತಂದು ಬಲವಂತವಾಗಿ ಕೂರಿಸಿಲ್ಲ. ಅದೇ ವಿಶೇಷ. ಪ್ಲಸ್ ಪಾಂಯ್ಟ್ . ಎರಡೂ ಸಿನೆಮಾದ  ಹಾಡುಗಳೆಲ್ಲವೂ ಜನರ ಕಿವಿಯಲ್ಲಿ ಗುಂಯ್ಗುಡುತ್ತಿವೆ.. ಮುಕುಂದ ಮುರಾರಿ ಸಿನಿಮಾದಲ್ಲಿ ಕೃಷ್ಣ ಮತ್ತು ನಾಸ್ತಿಕನ ನಡುವಿನ ಸಂಭಾಷಣೆ ಕೇಳಲು ಮುದನೀಡುತ್ತದೆ. ಹಿರಿಯರನ್ನು ಕರೆದುಕೊಂಡುಹೋಗಿ ಸಿನೆಮಾ ನೋಡಬಹುದು. ಅಲ್ಲದೇ ಎರಡು ಸಿನಿಮಾಗಳನ್ನು ಹೋಕಿಸಿ ನೋಡುವುದು ಗೊಂದಲ ಮೂಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಎರಡರ ಕತೆ /ಕಥಾವಸ್ತು ಬೇರೆಯೇ..
**
ಮಹೇಶ್ ರಾವ್ ನಿರ್ದೇಶನದ ಯಶ್ ,ರಾಧಿಕಾ ಪಂಡಿತ್ ಹಾಗೂ ಶ್ಯಾಮ್ ಅಭಿನಯದ #ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಮತ್ತು ನಂದಕಿಶೋರ್ ನಿರ್ದೇಶನದ ಬಹುತಾರಾಗಣವಿರುವ, ಅಲ್ಲದೇ ವಿಶೇಷವಾಗಿ ಸುದೀಪ್ ,ಉಪೇಂದ್ರ ರವರು ಜೊತೆಯಾಗಿ ನಟಿಸಿರುವ #ಮುಕುಂದ_ಮುರಾರಿ ಸಿನೇಮಾ ಯಾರು ಇನ್ನೂ ನೋಡದವರು ಥಿಯೇಟರ್ ಗೆ ಹೋಗಿ ನೋಡಿ ಬನ್ನಿ..
ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹರಸುವೆ..
ಮು.ಮು = ೦೭.೫/೧೦
ಸಂತು = ೦೭/೧೦

- ಸಿಂಧುಭಾರ್ಗವ್ .ಬೆಂಗಳೂರು