(*****)
೧) "ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮ " #ಮನುಷ್ಯತ್ವದ_ಧರ್ಮವಾಗಿದೆ.
- ಕೃಷ್ಣ ಉವಾಚ. :)
೨) ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ... ಸಾಗರಕೆ
****
"ಮುಕುಂದ ಮುರಾರಿ" ಮತ್ತು "ಸಂತು ಸ್ಟ್ರೇಟ್ ಫಾರ್ವರ್ಡ್" ಎರಡೂ ಸಿನಿಮಾಗಳು ತನ್ನದೇ ಆದ ಕಥಾವಸ್ತುವಿನಿಂದ ಜನರ ಮನಸ್ಸನ್ನು ಗೆದ್ದಿದೆ. ಸಂಸಾರ ಸಮೇತರಾಗಿ ಬಂದು ಒಂದು ಅಪರೂಪದ ಅದ್ಭುತ ಕತೆಯಿರುವ ಸಿನೆಮಾವನ್ನು ನೋಡಿ ಆನಂದಿಸಬಹುದು. ಎಲ್ಲಿಯೂ ಮುಜುಗರ ಹುಟ್ಟಿಸುವಂತಹ ಸಂಭಾಷಣೆಯಾಗಲಿ, ದೃಶ್ಯವಾಗಲಿ ಹುಡುಕಿದರೂ ಕಾಣ ಸಿಗುವುದಿಲ್ಲ. ಅಲ್ಲದೇ ಹಾಸ್ಯದೃಶ್ಯಗಳನ್ನು ತಂದು ಬಲವಂತವಾಗಿ ಕೂರಿಸಿಲ್ಲ. ಅದೇ ವಿಶೇಷ. ಪ್ಲಸ್ ಪಾಂಯ್ಟ್ . ಎರಡೂ ಸಿನೆಮಾದ ಹಾಡುಗಳೆಲ್ಲವೂ ಜನರ ಕಿವಿಯಲ್ಲಿ ಗುಂಯ್ಗುಡುತ್ತಿವೆ.. ಮುಕುಂದ ಮುರಾರಿ ಸಿನಿಮಾದಲ್ಲಿ ಕೃಷ್ಣ ಮತ್ತು ನಾಸ್ತಿಕನ ನಡುವಿನ ಸಂಭಾಷಣೆ ಕೇಳಲು ಮುದನೀಡುತ್ತದೆ. ಹಿರಿಯರನ್ನು ಕರೆದುಕೊಂಡುಹೋಗಿ ಸಿನೆಮಾ ನೋಡಬಹುದು. ಅಲ್ಲದೇ ಎರಡು ಸಿನಿಮಾಗಳನ್ನು ಹೋಕಿಸಿ ನೋಡುವುದು ಗೊಂದಲ ಮೂಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಎರಡರ ಕತೆ /ಕಥಾವಸ್ತು ಬೇರೆಯೇ..
**
ಮಹೇಶ್ ರಾವ್ ನಿರ್ದೇಶನದ ಯಶ್ ,ರಾಧಿಕಾ ಪಂಡಿತ್ ಹಾಗೂ ಶ್ಯಾಮ್ ಅಭಿನಯದ #ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಮತ್ತು ನಂದಕಿಶೋರ್ ನಿರ್ದೇಶನದ ಬಹುತಾರಾಗಣವಿರುವ, ಅಲ್ಲದೇ ವಿಶೇಷವಾಗಿ ಸುದೀಪ್ ,ಉಪೇಂದ್ರ ರವರು ಜೊತೆಯಾಗಿ ನಟಿಸಿರುವ #ಮುಕುಂದ_ಮುರಾರಿ ಸಿನೇಮಾ ಯಾರು ಇನ್ನೂ ನೋಡದವರು ಥಿಯೇಟರ್ ಗೆ ಹೋಗಿ ನೋಡಿ ಬನ್ನಿ..
ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹರಸುವೆ..
ಮು.ಮು = ೦೭.೫/೧೦
ಸಂತು = ೦೭/೧೦
- ಸಿಂಧುಭಾರ್ಗವ್ .ಬೆಂಗಳೂರು
No comments:
Post a Comment