Monday, 3 April 2023

Raymo- Hodare hogu lyrics Kannada Movie song lyrics

 

Google image source


Raymo- Hodare hogu lyrics Kannada Movie song lyrics...


ಹೋದರೆ ಹೋಗು ರೇಮೊ ಸಿನೆಮಾ ಹಾಡಿನ ಸಾಹಿತ್ಯ


ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ

ಜಾರದು ಒಂದು ಕಂಬನಿ ಬಿಂದು

ಎಂದಿಗೂ ನಿಂಗಾಗಿ ಕಣ್ಣಂಚಲಿ

ಹೃದಯ ಒಡದೇ ಇರಲಿ

ಇಂದೇ ಸೇರಿ ಬಿಡಲಿ

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//


ಚೂರಿ ಚುಚ್ಚಿ ನೀ ಕೇಳುವೆ

ನೋವಾಯಿತೆ ನೋವಾಯಿತೆ

ಹಲ್ಲು ಕಚ್ಚಿ ನಾ ಹಾಡುವೆ ಗೊತ್ತಾಯಿತೆ ಗೊತ್ತಾಯಿತೆ

ಇಲ್ಲಿ ಮುಕ್ತಾಯ ಆಗಲಿ

ನಮ್ಮ ಕಥೆ ನಮ್ಮ ಕಥೆ

ಒಂದು ಹೆಜ್ಜೆನೂ ಹಾಕದೆ

ಇನ್ನೂ ಜೊತೆ ಇನ್ನೂ ಜೊತೆ

ನಿನ್ನ ತಪ್ಪು ಏನು ಇಲ್ಲ

ನಾನು ತಾನೆ ನಂಬಿದ್ದು

ನಂಬಿದಕ್ಕೇ ತಾನೆ ನಿಂಗೆ ಮೋಸ ಮಾಡೋಕ್ ಆಗಿದ್ದು

ನೊಂದೋರ ಸಾಲಲ್ಲಿ

ನಂದೊಂದು ಹೆಸರು //ಹೋದರೆ ಹೋಗು//


ಚೂರು ಅಭ್ಯಾಸ ಆದರೆ

ಒಂಟಿತನ ಒಂಟಿತನ

ಯಾರ ಹಂಗಿಲ್ಲ ಬಾಳುವೆ

ನನ್ನಂತೆ ನಾ ನನ್ನಂತೆ ನಾ

ಈಗ ಹುಡುಕೋದು ಎಲ್ಲಿದೆ

ನನ್ನನ್ನೇ ನಾ ನನ್ನನ್ನೇ ನಾ

ನಂಗೆ ಬೇಕೀಗ ನನ್ನದೇ

ಆಲಿಂಗನ ಆಲಿಂಗನ

ತುಂಬಾ ದೂರ ಬಂದ ಮೇಲು

ಹಿಂದೆ ತಿರುಗಿ ನೋಡಿಲ್ಲ

ನೀನು ಯಾರು ಅಂತ ನಾನು ಮರೆತೆ ಹೋದೆ ಸುಳ್ಳಲ್ಲ

ನೊಂದೋರ ಸಾಲಲ್ಲಿ

ನಂದೊಂದು ಹೆಸರು//ಹೋದರೆ ಹೋಗು//

***

ರೇಮೋ ಸಿನೆಮಾ

ಕವಿರಾಜ್ ಸಾಹಿತ್ಯ

ಶ್ರೇಯಾ ಗೋಶಾಲ್ ಹಾಡುದವರು.

ಸಂಗ್ರಹ..

No comments:

Post a Comment