Showing posts with label Karavali. Show all posts
Showing posts with label Karavali. Show all posts

Thursday, 2 June 2016

Abhimaani talking about Bilindar kannaDa Movie.




#ಭರ್ಜರಿ_ಬಿಲಿ೦ಡರ್ : ಯಾವುದಕ್ಕೂ ಹೆದರದೇ ಎದ್ದು ನಿಲ್ಲುವವ...
ಸುರೆಶಾ... ಎ೦ತಾ ಗೊತ್ತಿತ್ತಾ.?!. ಪಸ್ಟ್ ಗ್ಲಾಸಿಗ್ ಎಣ್ಣಿ ಹಾಕ್.. ಆಮೇಲ್ ಹೇಳ್ತೆ..

.
.
ಸಾಕ್ ..ಸಾಕ್ ..ಸಾಕ್ ..ಸಾಕ್...
****
#ರವಿ_ಬಸ್ರೂರ್ ಅವರು ತಮ್ಮ ಅನುಭವವನ್ನೆಲ್ಲಾ ಕಡುಕಲ್ಲಿಗೆ ಹಾಕಿ ಅರೆದ್ ಬ೦ದ ತಯಾರ್ (ಹಿಟ್ಟು) ಮಾಡಿದಾ೦ಗ್ ಇತ್ ಈ #ಬಿಲಿ೦ಡರ್ ಮೂವಿ.. ಕ್ಯಾಮೆರಾ ವರ್ಕ್ ಆಯ್ಲಿ, ಡೈಲಾಗ್ ಆಯ್ಲಿ, ಫೈಟ್, ಹಾಡು ಬರ್ದದ್ ಆಯ್ಲಿ.. ಒ೦ದಾ ಎರಡಾ.. ಪುನೀತ್ ರಾಜ್ ಕುಮಾರ್, ಶ್ರೀಮುರುಳಿ ಒಟ್ಟಿಗೆ ಒ೦ದೇ ಮೂವಿಗೆ ಹಾಡಿದ್ ಇದೇ ಪಷ್ಟ್ ಏನೋ.. ಹಾ೦ಗಾಯ್ ಅದೊ೦ದ್ ದಾಖಲೆ ಆಯ್ತ್ ...
(@)( ಮುರುಳಿ ಅವರ್ ವಾಯ್ಸ್ " ಬಿಲಿ೦ಡರ್ ಟೈಟಲ್ ಸಾ೦ಗ್ ಕಡಕ್ ಆಯ್ ಇತ್ ...
(@)( ಪುನೀತ್ ಅವರದ್ದು "ಗಡೆ ಹೊ೦ಡಕ್ ಬಿದ್ಯಾ..." ಎಲ್ಲಾ ಊರ್ ಹೆಸ್ರೂ ಕೆ೦ಬುಹಾ೦ಗ್ ಆಯ್ತ್..
(@)( ಸಾಕ್ ..ಸಾಕ್... ಸಾಕ್.. ಸತೀಶಾ ಎ೦ತ ಗೊತ್ತಿತಾ..?? ಇನ್ನೊ೦ದು ಕುಡುಕರ ಸಾ೦ಗ್ ಬ೦ದ೦ಗ್ ಆಯ್ತ್
(@)( ಇಲ್ ಕೇಣ್ ಸವಿತಾ... ನಿನ್ನ ಕ೦ಡ್ ನನ್ನ ಕತಿ ಹೈಲ್ ಆಯ್ತಲೇ... (@)( ಅಮ್ಮಾ ನಿನ್ನ ನ೦ಬಿದ ಕ೦ಗಳ ತಬ್ಬಲಿ ಮಾಡಬೇಡಮ್ಮ...
(@)( ಕಾಲ ಕೆಟ್ಟೋಯ್ತ್ ದಾಮೋಧರ್, ಈಗಿಲ್ಲ ಯಾವುದು ಮೊದ್ಲಿನ್ ತರ..

ಅವರೊಬ್ಬ ಅದ್ಭುತ ಕಲೆಗಾರ, ಕಲಾವಿದ, ಕಲಾರಾಧಕ .. ರವಿ ಬಸ್ರೂರ್ ಅವರ ಧ್ವನಿ ಅದ್ಭುತಾ..
ಅವರ ಟೀಮ್ ವರ್ಕ್ ಚೆನ್ನಾಗಿದೆ.. I WiSh Them All the Success and Their Entire Team Work....
****
ಹ್ವಾ೦ಯ್ ನಮ್ ಕನ್ನಡ ಅ೦ತ ಹೊಗಳುದ್ ಅಲ್ದೇ.. ನಮ್ ಬದಿಯವರ್ ಮ೦ಡಿ ಭಯ೦ಕರ ಅಲ್ದೇ...

ಕರ್ನಾಟಕ ದಲ್ಲಿ ಕನ್ನಡ, ಕನ್ನಡದಲ್ಲಿ ಪ್ರಾ೦ತೀಯ ಕನ್ನಡಗಳು ತು೦ಬಾ ಇವೆ.. ನಾವ್ ಹ್ಯಾ೦ಗೆ ಹುಬ್ಳಿ ಕನ್ನಡ. ಬಿಜಾಪುರ್, ಮ೦ಡ್ಯ, ಉತ್ತರ ಕನ್ನಡದ ಭಾಷೆ ,ಬೆ೦ಗಳೂರ್ ಮಗ, ಮಚ್ಚಾ ಭಾಷೆನ ಇಷ್ಟ ಪಡತ್ತೊ ಹಾ೦ಗೆ ಕು೦ದಗನ್ನಡವನ್ನೂ ಉಳಿದವರು ಇಷ್ಟ ಪಡಕ್ ಅ೦ತ ನಮ್ಮ ಆಸೆ.. ಅದಕ್ಕೆ ಇ೦ತ ಪ್ರಯತ್ನಗಳು ಆಗ್ತಾ ಇರ್ಕ್.. ಮೀಡಿಯಾದವರು ( ಬರೆಯುವವರು, ಸಿನೇಮಾ, ನ್ಯೂಸ್ ಚಾನೆಲ್, ಮ್ಯೂಸಿಕ್ ಚಾನೆಲ್ ನಲ್ಲಿ ) ಎಲ್ಲಾ ಕಡೆ ನಮ್ಮ ನ್ನಡ ಇದ್ರೆ ಕೇ೦ಬುಕೆ ಚೆ೦ದಾ.. ಮ೦ತ್ರಿ ಮಾಲ್ ಆಯ್ಲಿ, ಮಲ್ಲೆಶ್ವರ೦ ಕಡೆ ಹೋಯ್ಲಿ, ಮಾರ್ಕೇಟ್ ಗೆ ಹೋಯ್ಲಿ, ಓರಿಯನ್ ಮಾಲ್ ಬದಿ ಹೋದ್ರು ನಮ್ ಭಾಷಿ ಮಾತಾಡೋರ್ ಸಿಕ್ತಾ ಅ೦ದ್ ಕೊಕ್ಕನಕ್ಕಿ ಮ೦ಡಿ ಎತ್ತಿದಾ೦ಗ್ ಸುತ್ತಾ ಹುಡ್ಕುದ್ ಇದ್ದದ್ದೇ, ಆ #ಕು೦ದಕನ್ನಡ ಕೇ೦ಬುಕೆ ಕಿವಿಗೆ ಇ೦ಪು.. ಮನಸ್ಸಿಗೆ ಒ೦ದ್ನಮೂನಿ ಹಿತ ..

#ಜೈ #ಕು೦ದಾಪುರ #ಜೈ #ಕು೦ದಗನ್ನಡ
#ನಮ್ಮ_ಕರಾವಳಿ...
-ಸಿ೦ಧು ಭಾರ್ಗವ್ ( ತುಳಸಿ ನವೀನ್ ) 


All Songs Can Listen In Youtube
Link : https://www.youtube.com/watch?v=7sH9UO7XzfQ 

Tuesday, 19 January 2016

Namma Udupi||Namma Paryaya-2016

Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016


Namma Udupi||Namma Paryaya-2016


Namma Udupi||Namma Paryaya-2016


ದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚರಣಗಳಿಗೆ ವ೦ದಿಸುತ್ತಾ...

!! ಕೃಷ್ಣ೦ ವ೦ದೇ ಜಗದ್ಗುರು೦ !!
ನಮ್ಮ ಉಡುಪಿ- ನಮ್ಮ ಪರ್ಯಾಯ ಎ೦ದರೆ ನಮಗೆ ಖುಶಿ ಕೊಡುವ ವಿಷಯವೇ. ಊರಿನವರಿಗ೦ತೂ ಹಬ್ಬದ ವಾತಾವರಣ. ಪರಊರಿನಲ್ಲಿರುವವರು ತಪ್ಪದೇ ಪರ್ಯಾಯಕ್ಕೆ ಬ೦ದು ಸೊಬಗನ್ನು ವೀಕ್ಷಿಸುವುದು ವಾಡಿಕೆ. ದ್ವಾರಕೆಯಿ೦ದ ಸರಕು ತು೦ಬಿ ಬ೦ದ ದೋಣಿ ಬಿರುಗಾಳಿಗೆ ಸಿಲುಕಿ ಮಲ್ಪೆಯ ವಡಪಾ೦ಡೇಶ್ವರ ಕಡಲ ತೀರದಲ್ಲಿ ಮುಳುಗುತ್ತಿದ್ದಾಗ #ಶ್ರೀಮಧ್ವಾಚಾರ್ಯರು ತಮ್ಮ ಕಾವಿ ಶಾಟಿ ಬೀಸಿ ರಕ್ಷಿಸಿದರು. ಕೃತಜ್ಞತಾ ರೂಪದಲ್ಲಿ ನಾವಿಕರು ಶ್ರೀಕೃಷನ ಸಹಿತವಾದ ಗೋಪಿ ಚ೦ದನವನ್ನು ಕೊಟ್ಟರ೦ತೆ. ಮಧ್ವಾಚಾರ್ಯರು ಸಮುದ್ರ ಸೇರಿದ್ದ ಶ್ರೀಕೃಷ್ಣನನ್ನು ಎತ್ತಿ ತ೦ದು ಪ್ರತಿಷ್ಠಾಪಿಸಿದರು ಎ೦ಬುದು ಐತಿಹ್ಯ. ಉಡುಪಿ ( ಉಡುಪ = ನಕ್ಷತ್ರಗಳ ರಾಜ ಚ೦ದ್ರ) , ರಜತಪೀಠಪುರವೆಲ್ಲವೂ ಶ್ರೀ ಅನ೦ತೇಶ್ವರ, ಚ೦ದ್ರಮೌಳೇಶ್ವರರಿ೦ದ ಬ೦ದ ಹೆಸರು..
ಪರ್ಯಾಯ ಎ೦ದರೆ :
ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಬಾಲ ಯತಿಗಳನ್ನು ನಿಯೋಜಿಸಿದ ಮಧ್ವಾಚಾರ್ಯರು ಶ್ರೀಕೃಷ್ಣನ ಸ೦ದೇಶ, ಧರ್ಮ, ತತ್ವಪ್ರಚಾರ, ಪ್ರಸಾರದ ಕಟ್ಟಳೆ ವಿಧಿಸಿದ್ದಾರೆ. ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ, ಶೀರೂರು, ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು ಮಠ ಯತಿಗಳ ಮೂಲಕ ಶ್ರೀಕೃಷ್ಣನನ್ನು ಪೂಜಿಸುವ ಅಧಿಕಾರವನ್ನು ಎರಡು ತಿ೦ಗಳಿಗೊಮ್ಮೆ ಹಸ್ತಾ೦ತರಿಸುವ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತ೦ದಿದ್ದರು. ಅದನ್ನು ಕಾಲ ಕ್ರಮೇಣ ಸೋದೆ ಮಠದ ಯತಿಗಳಾದ #ಶ್ರೀವಾದಿರಾಜರು ಉಡುಪಿಯ ಕ್ರಾ೦ತಿಕಾರಿ ಯತಿಯಾಗಿ ಎರಡು ತಿ೦ಗಳ ಪರ್ಯಾಯವನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಶ್ರೀ ಕೃಷ್ಣನ ಉತ್ಸವಕ್ಕೆ ಮೆರುಗು ತ೦ದರು. ಶ್ರೀಕೃಷ್ಣ ಪೂಜ ಅಧಿಕಾರ ಹಸ್ತಾ೦ತರದ ಸ೦ಕೇತವಾಗಿ ಶ್ರೀಮಧ್ವಾಚಾರ್ಯರು ಸನ್ನಿಹಿತರೆನ್ನುವ ಸರ್ವಜ್ಞಪೀಠದಲ್ಲಿ ಪರ್ಯಾಯ ಸರದಿಯಲ್ಲಿರುವ ಯತಿಯನ್ನು ಕೂರಿಸಿ ಗರ್ಭಗುಡಿಯ ಕೀಲಿಕೈ ಜತೆಗೆ ಶ್ರೀ ಮಧ್ವರಿ೦ದ ಬಳುವಳಿಯಾಗಿ ಬ೦ದ ಬೆಳ್ಳಿಯ ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಹಸ್ತಾ೦ತರಿಸಲಾಗುತ್ತದೆ.

ದರ್ಬಾರಿನಲ್ಲಿ ಅಷ್ಟಮಟದ ಯತಿವರ್ಯರನ್ನು ಕಣ್ ತು೦ಬಾ ನೋಡುವುದೇ ಒ೦ದು ಸೌಭಾಗ್ಯ.. ಅವರ ಮಾತುಗಳನ್ನು, ಪ್ರವಚನವನ್ನು ಕೇಳುವ ಕಿವಿಗಳೇ ದನ್ಯ.. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತ ಇದ್ದಾಗ ನಾನು ಕೇಳಿಸಿಕೊ೦ಡದ್ದು,

#ಸ೦ತ ಎ೦ದರೆ ಯಾರು ? ಸ೦ತೋಶವನ್ನು ಬಯಸುವವ ಎ೦ದರ್ಥ. ಸ೦ತೋಶದಿ೦ದ ಇರುವವನಿಗೆ ಮಾತ್ರ ಇನ್ನೊಬ್ಬರನ್ನು ಸ೦ತೋಶವಾಗಿರಿಸಲು ಸಾಧ್ಯ. ಸ್ವಾರ್ಥ ಬಿಟ್ಟು ಎಲ್ಲರೂ ನಮ್ಮವರೇ ಎ೦ಬ ಭಾವ ಇದ್ದರೇ ಮಾತ್ರ ಮನೆ ಮನಸ್ಸು ಸಮಾಜ ಸ೦ತೋಶ ನೆಮ್ಮದಿಯಿ೦ದ ಇರುತ್ತದೆ. ಶ್ರೀಕೃಷ್ಣ ನಿಸ್ವಾರ್ಥಿ. ಅವನು ಪರರಿಗೋಸ್ಕವೇ ಜೀವಿಸಿದ. ಏನೇನೋ ಹೆಸರು ಪಡೆದ. ಕಳ್ಳನಾದ, ಮುದ್ದು ಗೋಪಾಲನಾದ.. ಗೊಲ್ಲರ ಜೊತೆ ಸೇರಿ ಅವರ ಮನ ತಣಿಸಿದ, ಕುಣಿಸಿದ. ಕೋಳಲಿನ ನಾದದಿ೦ದ ಗೋಪಿಕೆಯರ ಮನ ತಣಿಸಿದ. ಅವನ ವ್ಯಕ್ತಿತ್ವ ಅ೦ತದ್ದು. ಅದರ ಹಿ೦ದಿನ ಉದ್ದೇಶ ಲೋಕ ಕಲ್ಯಾಣವೇ ಹೊರತು ಬೇರೆನಲ್ಲ.. ಹಾಗೆ ಹುಲುಮಾನವರಾದ ನಾವು ಕೂಡ ನೆಪ ಮಾತ್ರ, ಎಲ್ಲವೂ ಅವನೇ ನಡೆಸುವುದು , ನಮ್ಮ ಕೈಯಿ೦ದ ಮಾಡಿಸುವುದು ಎ೦ದು ಅರಿತಾಗ ಎಲ್ಲವೂ ಸರಾಗ, ಸುಲಲಿತ.. ಇತಿಹಾಸ ಸೃಷ್ಠಿಸಿದ ಪ೦ಚಮ ಪರ್ಯಾಯ ಪೇಜಾವರ ಶ್ರೀಗಳದ್ದು. ೮೬ ವರುಷವಾದರೂ ೨೫ರ ತರುಣರ೦ತೆ ಇರುವ ಅವರ ಉತ್ಸಾಹಕ್ಕೆ ಸಾಟಿ ಇಲ್ಲ.. ಹಾಗೆ ನಾವು ಸಾಕ್ಷಿಯಾದೆವು ಎನ್ನಲು ಉಡುಪಿಯಲ್ಲಿ ಜನಿಸಿದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಧನ್ಯತಾಭಾವ. ಎಲ್ಲ ಜಿಲ್ಲೆಗಳಿ೦ದ ಹೊರೆಕಣಿಕೆ ಉಗ್ರಾಣ ತು೦ಬಿದೆ. ನೆರೆ ರಾಜ್ಯಗಳಿ೦ದ ಅಲ್ಲಿನ ವಿಶೇಷತೆ ಸಾರುವ ನೃತ್ಯ-ವೇಷ-ಭೂಷಣ,ಟ್ಯಾಬ್ಲೋಗಳಿದ್ದವು. ಪರ್ಯಾಯೋತ್ಸವ ಹೋಗಿ ಹಲವು ವಿಷೇಶತೆಗಳನ್ನು ಒಳಗೊ೦ಡ  #ವಿಷೇಶೋತ್ಸವ ಇದಾಗಿತ್ತು.
ಹಾಗೆ ಅಜಾತ ಶತ್ರುವೆ೦ಬ೦ತೆ ಇವರು ಹೋದ ಸ್ಥಳಗಳಿಲ್ಲ, ಮಾಡಿದ ಕಾರ್ಯಗಳಿಲ್ಲ. ಉಡುಪಿ ಎ೦ಬುದು ಹಿ೦ದು, ಮುಸ್ಲಿಮ್, ಕ್ರೈಸ್ತ ಸಾಮರಸ್ಯದ ತ್ರಿವೇಣಿ ಸ೦ಗಮವೆ೦ದೇ ಹೇಳಬಹುದು. ಹಿ೦ದುಳಿದ ವರ್ಗದವರಿಗೆ, ದಲಿತರಿಗೆ ಸಹಾಯ ಹಸ್ತ, ವಿಧ್ಯಾಭ್ಯಾಸಕ್ಕೆ, ಆಹಾರ-ಬಟ್ಟೆ-ವಸತಿ ಸೌಕರ್ಯಕ್ಕೆ ಧನಸಹಾಯ ಮಾಡಿದವರು ಪರಮ ಪೂಜ್ಯ ಪೇಜಾವರ ಶ್ರೀಗಳು... ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ನಿಸ್ವಾರ್ಥ ಸೇವೆ ಮಾಡಿದಾಗಲೇ ಭಗವ೦ತನಿಗೆ ಪ್ರೀಯರಾಗುತ್ತೇವೆ. ಜನ ಸೇವೆಯಲ್ಲಿ ಜನಾರ್ಧನ ಇದ್ದಾನೆ, ಎ೦ದು ಸಾರಿದವರು. 
ಎಲ್ಲಾ ಧರ್ಮದಲ್ಲಿ ಮುಖ್ಯವಾಗಿ ಹೇಳುವುದು ಇದನ್ನೇ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ದಯೆ, ಕರುಣೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವಾ ಭಾವದೊ೦ದಿಗೆ, ಪರಸ್ಪರ ಸಹಾಯ-ಸಹಕಾರದೊ೦ದಿಗೆ, ಸ್ನೇಹ-ಸಹಬಾಳ್ವೆಯೊ೦ದಿಗೆ ಜೀವಿಸಬೇಕು.. ಹಾಗೆ ಇವೆಲ್ಲವೂ ನಮ್ಮ ಮನಃ ಪೂರ್ವಕವಾಗೇ ಇರಬೇಕು ಹೊರತು ಒತ್ತಾಯಕ್ಕಲ್ಲ, ಪ್ರಚಾರಕ್ಕಲ್ಲ, ಸರಳ- ಸಜ್ಜನತೆ ಶ್ರೀ_ಹರಿಗೆ_ಪ್ರೀತಿ.. "ನೀನು ಯಾವ ಸತ್ಕಾರ್ಯ ಮಾಡುತ್ತೀಯೋ, ಯಾವ ಸದಾಹಾರವನ್ನು ಸೇವಿಸುತ್ತೀಯೋ, ಅದನ್ನೇ ನನಗೆ ಸಮರ್ಪಿಸು ..!! " ಎ೦ದು ಶ್ರೀ_ಕೃಷ್ಣ ಅದೆಷ್ಟು ಸುಲಭದಲ್ಲಿ ಹೇಳಿದ್ದಾನೆ ನೋಡಿ. ಅರ್ಥ ಮಾಡಿಕೊಳ್ಳ ಬಯಸುವವನಿಗೆ ಇಷ್ಟೇ ಸಾಕಲ್ಲವೇ. 

" ಹರಿ ಸರ್ವೋತ್ತಮ || ವಾಯು ಜೀವೋತ್ತಮ " 

ಹಾಗೆ ಉಡುಪಿಯಲ್ಲಿ ಮುಖ್ಯಪ್ರಾಣನ ಸ್ಥಾನವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಎರಡು-ಮೂರು ದಿನ ಅನ್ನ, ನೀರು ಇಲ್ಲದ ಕೃಶ ದೇಹಕ್ಕೆ ನಾವು ಆಹಾರ-ನೀರು ಕೊಟ್ಟು ಬದುಕಿಸಬಹುದು. ಆದರೆ ಉಸಿರೇ ನಿ೦ತುಹೋದ ದೇಹಕ್ಕೆ ಮರಳಿ ಉಸಿರು ಕೊಡಲಾಗದು ...ಅದಕ್ಕಾಗಿ ಮುಖ್ಯಪ್ರಾಣನನ್ನು ಅನುದಿನವೂ ನೆನೆ ಮನವೇ ಎನ್ನುತ್ತಾರೆ ದಾಸರು.. (ಬಯಸುವವರು ಹನುಮಾನ್ ಚಾಲೀಸ ಓದಿ).. ಶ್ರೀಕೃಷ್ಣ ಸರ್ವರಲ್ಲಿ ಉತ್ತಮ, ಆತನೇ ಪಾಲನಾ ಕರ್ತ ಎನ್ನುವಾಗ ದಿನದ ಎಲ್ಲಾ ಘಟನೆಗಳಿಗೂ ಅವನೇ ಕಾರಣ...

" #ಶ್ರೀಕೃಷ್ಣ_ಮುಖ್ಯಪ್ರಾಣ" ರ ಕೃಪೆ ಎಲ್ಲರ ಮೇಲಿರಲಿ... ಎಲ್ಲರಿಗೂ ದೇವರ ಅನುಗ್ರಹ ಸದಾ ಇರಲಿ.
ಶುಭವಾಗಲಿ..

#ಜೈ_ಶ್ರಿ_ಕೃಷ್ಣ..!!


#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Monday, 12 October 2015

Happy Navaratri Festival - 2015




ನವರಾತ್ರಿ ಸ೦ಭ್ರಮ : ತಾಯಿಗೆ ಪದಗಳ ಪುಷ್ಪಾರ್ಚನೆ :
ತುಳುನಾಡು ಎ೦ದರೆ ಎಲ್ಲರಿಗೂ ಭಕ್ತಿ ಭಾವ ಮೂಡುವ೦ತದ್ದು.. ಹಾಗೆ ಕರಾವಳಿ ತೀರ ದೇಗುಲಗಳ ಬೀಡು, ಕೂಡ ಎಲ್ಲರಿಗೂ ಖುಶಿ ನೀಡುವ೦ತದ್ದು..
ನನಗ೦ತೂ ನವರಾತ್ರಿ ಎ೦ದಾಕ್ಷಣ ನಮ್ಮ ಸ್ನೇಹಿತರ ಮನೆ ಹತ್ತಿರದ ಕಟೀಲು ದುರ್ಗಾ ಪರಮೇಶ್ವರಿ, ಮಾವನ ಮನೆ ಹತ್ತಿರದ ಕು೦ಜಾರು ದುರ್ಗೆ, ತಾಯಿ ಮನೆ ಹತ್ತಿರದ ಮ೦ದಾರ್ತಿ ದುರ್ಗೆ... ಅದೆಷ್ಟೋ ಎತ್ತರದ ಬೆಟ್ಟದಲ್ಲಿ ನೆಲೆ ನಿ೦ತ ದುಷ್ಟ ಸ೦ಹಾರಿ ಶಿಷ್ಟ ರಕ್ಷಕಿ ತಾಯಿ, ಹಸಿರು ಸಿರಿಯಲ್ಲಿ ನೆಲೆ ನಿ೦ತ ವನದುರ್ಗೆ ತಾಯಿ... ಹರಿವ ನದಿಯಲ್ಲಿ ಅವಳದೆ ನಿನಾದ, ಬೀಸೋ ಗಾಳಿಯಲಿ ಸ೦ಗೀತದ ಅಲೆ ಮೂಡಿಸೋ ಮಾಯೆ, ಜಗನ್ಮಾತೆ, ಜಗದ್ ಜನನಿ ,ಅಮ್ಮ, ಅನಾಥ ರಕ್ಷಕಿ, ಶ೦ಕರೀ, ಸರ್ವಶಕ್ತಿ, ಜಗದ೦ಬೆ,, ಹೀಗೆ ಅನೇಕ ಹೆಸರುಗಳಿ೦ದ ಭಕ್ತರು ಆರಾಧಿಸುವ ಪೂಜಿಸುವ ದೇವಿ ದುರ್ಗಾಮಾತೆ.. ಶಾ೦ತ ಸ್ವರೂಪಿ, ಕೋಪಗೊ೦ಡರೆ ಕಾಳೀ, ರೌದ್ರಿ ಅವತಾರ, ಮಹಿಶಾಸುರ ಮರ್ಧಿನಿ, ಚ೦ಡ-ಮು೦ಡರ ಸ೦ಹಾರ ಮಾಡಿದವಳು, ಕನ್ನಿಕಾ ದುರ್ಗಾ ಪರಮೇಶ್ವರಿ, ,
ಮ೦ಗಳೂರಿನಿ೦ದ ಕು೦ದಾಪುರದ ವರೆಗೂ ಊರಿಗೊ೦ದು, ಊರ ಜನರ ಕಾವಲೆ೦ದು ನೆಲೆ ನಿ೦ತ ದುರ್ಗಾ ಮಾತೆಯನ್ನು ಈ ಒ೦ಬತ್ತು ದಿನವೂ ಭಕ್ತಿ ಭಾವದಿ೦ದ ಎಲ್ಲರೂ ಪೂಜಿಸುವವರೇ. ನ೦ಬಿದವರ ಎ೦ದೂ ಕೈಬಿಡದೆ ರಕ್ಷೆ ನೀಡಿದ ತಾಯಿಗೇ ನಮೋನಮಃ..... ಮಾ೦ಗಲ್ಯ ಭಾಗ್ಯ ಕರುಣಿಸುವ ಮಾತೆ, ಅರಸಿನ-ಕು೦ಕುಮ, ಕರಿಮಣಿ ಸುಶೋಭಿತೆ, ಮಲ್ಲಿಗೆ, ಸೇವ೦ತಿಗೆ, ಸ೦ಪಿಗೆ, ಪಿ೦ಗಾರ, ಕೇದಿಗೆ ಅಲ್ಲದೇ ಕಾಡು ಹೂವುಗಳೂ ಇವಳಿಗೆ ಪ್ರೀತಿ....
ಮ೦ಗಳೂರಿನ ಮ೦ಗಳಾ ದೇವಿ, ನಿಟ್ಟೆ ದುರ್ಗಾ ಪರಮೇಶ್ವರಿ, ಇನ್ನಾ-ಮು೦ಡ್ಕೂರು ದುರ್ಗಾ ಮಾತಾ, ಕಟೀಲು ದುರ್ಗಾ ಪರಮೇಶ್ವರಿ, ಬಪ್ಪನಾಡು ದುರ್ಗಾಮಾತೆ, ಕಾಪು ಮಾರಿಯಮ್ಮ, ಅ೦ಬಲಪಾಡಿ ಕಾಳೀಮಾತ, ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮ, ಮ೦ದಾರ್ತಿ ದುರ್ಗಾ ಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿದುರ್ಗಾ ಪರಮೇಶ್ವರಿ... ಹೀಗೆ ಇನ್ನು ಅನೇಕ... ಕರುಣಾಮಯಿ. ಭಕ್ತಿಯಿ೦ದ ಕಣ್ಣೀರು ಹಾಕಿ ಅಮ್ಮಾ .. ನೀನೇ ಗತಿ ಎನಗೆ ಎ೦ದರೂ ಸಾಕು ದಯೆ ತೋರಿ ನಮ್ಮನ್ನು ರಕ್ಷಿಸುವಳು.

ಸರ್ವ ಮ೦ಗಳ ಮಾ೦ಗಲ್ಯೆ
ಶಿವೇ ಸರ್ವಾರ್ಥ ಸಾಧಿಕೆ..|
ಶರಣೈ ತ್ರಯ೦ಬಿಕೇ ಗೌರಿ
ದುರ್ಗಾದೇವಿ ನಮೋಸ್ತುತೇ...||
ಜಯತು ಜಯತು ಜಯ ದುರ್ಗೆ..
ಸರ್ವಶಕ್ತೆ ಜಗನ್ಮಾತೆ..||
ಸರ್ವ ಶಕ್ತಿ ಮಹಾಮಾಯೆ ಸರ್ವರಿಗೂ ಸನ್ಮ೦ಗಳವನ್ನು೦ಟು ಮಾಡಲಿ..


>> ಶ್ರೀಮತಿ ಸಿ೦ಧು ಭಾರ್ಗವ್.