Monday, 3 April 2023

ಬೆಳಕಲಿ- Belakali song lyrics Hondisi bareyiri Kannada Movie



Google image source


ಬೆಳಕಲಿ- Belakali song lyrics Hondisi bareyiri Kannada Movie 


ಬೆಳಕಲಿ ಕಾಣದ ಇರುಳಿಗೂ

ಇರುಳಲೂ ಕಾಣುವ ಬೆಳಕಿಗೂ

ಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಈ ಸಮಯ

ಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ಈ ವಿಷಯ

//ಬೆಳಕಲಿ//


ನಿನ್ನ ಬದುಕೆ ನಿನ್ನೆಗಳಿಗೂ ನಾಳೆಗಳಿಗೂ ಉತ್ತರವು

ಸಹಜ ಬದುಕ ಸ್ವೀಕರಿಸೋ ರೂಪವೂ

ಇನ್ನು ಹೀಗೆ ನಿನ್ನ ಹಾಗೆ...

ನನ್ನ ದಿನಚರಿ... ಶುಭಾರಂಭವೂ...

ಈ ಹೆಣ್ಣು ಪೂಜಿಸೋ... 

ಈ ನೆಲದ ಗುಣಕೆ ಇವಳೇ ಕಾಣಿಕೆ// ಬೆಳಕಲಿ//


ಕಾಲದ ಕನ್ನಡಿಯಲಿ..

ಕಾಣದ ಮುನ್ನುಡಿ... ತಂದ ಬೆಳಕಿಗೆ..

ಕಡಲಲೆಯಲಿ ಗಿರಿತೊರೆಯಲಿ

ನಭ ನೆಲದಲಿ ಝೇಂಕಾರವು...

ಈ ಸಂಗಮವೇ ಸೃಷ್ಟಿ ಸಂಭ್ರಮ...

ಸೃಷ್ಟಿ ಬೆಸೆದ ಈ ಅನುಬಂಧಕೆ ಬೇಕಿಲ್ಲ ಯಾವ ಹೆಸರು

ಬದುಕಿ ಸುಮ್ಮನೆ...// ಬೆಳಕಲಿ//

**

ಹೊಂದಿಸಿ ಬರೆಯಿರಿ -ಸಿನೆಮಾ

ಜೋ. ಕೋಸ್ಟಾ - ಹಾಡಿದವರು

ರಾಮೇನಹಳ್ಳಿ‌ ಜಗನ್ನಾಥ- ರಚನೆ.

ನವೀನ್- ನಾಯಕನಟ

No comments:

Post a Comment