Tuesday, 8 November 2016

ಲೇಖನ- ನಮ್ಮ ನೆನಪಿನಲ್ಲಿ ಶಂಕರ್ ನಾಗ್


(@@@)



(@@@)

ನಮ್ಮ ನೆನಪಿನಲ್ಲಿ ಶಂಕರ್ ನಾಗ್.. ಇಂದು ಅವರ ೬೨ನೇ ಜನ್ಮದಿನ.

"ನಗುವ ಗುಲಾಬಿ ಹೂವೇ." ಎಂದು ಆಟೋ ಶಂಕರ್ ಹಾಡು ಹಾಡುತ್ತಾ
ಪ್ರೀತಿಸಿ ಮದುವೆಯಾದವರು ಹೇಗೆ ಬದುಕಿತೋರಿಸಬೇಕು ಎಂಬುದನ್ನು "ಪರಮೇಶಿ ಪ್ರೇಮ ಪ್ರಸಂಗದಲ್ಲಿ" ಜನರಿಗೆ ಅರ್ಥೈಸುತ್ತಾ "ನೋಡಿ ಸ್ವಾಮಿ ನಾವ್ ಇರೋದು ಹೀಗೆ.." ಎಂಬ ನೇರನುಡಿಗಳಿಂದ ಬದುಕುತ್ತಾ,
"ಸತ್ತಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದರೂ ಸಾಧಿಸು" ಎಂದು ಯುವಕರ ಬೆನ್ನುತಟ್ಟಿ ಎಚ್ಚರಿಸುತ್ತಾ "ಆ್ಯಕ್ಸಿಡೆಂಟ್" ಆಗಿ ನಮ್ಮನ್ನೆಲ್ಲ ಅಗಲಿ ಈಗ "ಕೇಳದೇ ನಿಮಗೀಗ ದೂರದಲ್ಲಿ ಯಾರೋ..." ಎಂದು ಎಲ್ಲಾ ಅಭಿಮಾನಿಗಳ ಮನದಲ್ಲಿ ದಿನಕ್ಕೆ ಒಮ್ಮೆಯಾದರೂ ಅವರ ನೆನಪು ರಿಂಗಣಿಸುವಂತೆ ಮಾಡುತ್ತಿದ್ದಾರೆ.
- ಶಂಕರ್ ನಾಗ್.
***
ಅವರ ಅಣ್ಣ ಅನಂತ್ ನಾಗ್ ರವರು, ರಮೇಶ್ ಭಟ್, ಮಾ.ಮಂಜುನಾಥ್, ಅರುಂಧತಿನಾಗ್ ಎಲ್ಲರನ್ನೂ ಈ ದಿನ ನೆನಪಿಸಿಕೊಳ್ಳಬೇಕು. ಅವರೆಲ್ಲರೂ ಕಲೆಯನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಾ ಇರುವವರು. ಶಂಕರ್ ನಾಗ್ ಅವರ  ಕಲ್ಪನೆಯ ಕೂಸು #ರಂಗಶಂಕರ ಎನ್ನುವ ದೊಡ್ಡ ರಂಗಭೂಮಿಯನ್ನು ಅವರ ಧರ್ಮಪತ್ನಿ ಅರುಂಧತಿನಾಗ್ ಅವರು ೨೦೦೪ರಲ್ಲಿ  ಪ್ರಾರಂಭಿಸಿದರು. ಅವರು ಈಗ ಇದ್ದಿದ್ದರೆ ಬೆಂಗಳೂರು ಅದೆಷ್ಟೋ ಬದಲಾವಣೆ ಕಾಣುತ್ತಿತ್ತು. ಆಗಿನ ಕಾಲದಲ್ಲೇ ಅವರು ಬೆಂಗಳೂರಿಗೆ ಮೆಟ್ರೋ ರೈಲಿನ ಬಗ್ಗೆ, ನಂದಿಬೆಟ್ಟಕ್ಕೆ ರೋಪ್_ವೇ ಮುಂತಾದ ಯೋಜನೆಗಳ ಕನಸನ್ನು ಕಂಡವರು. ಅವರು ಒಂದು ರೀತಿಯ ಕಿಡಿ(ಸ್ಪಾರ್ಕ್) ಅದು ಸಾಮಾನ್ಯದ್ದಲ್ಲ, ತಾನು ಬೆಳಗಿ ಇತರರಿಗೂ ಬೆಳಕು ನೀಡುವಂತದ್ದು.. ಜೊತೆಗಾಗರನ್ನು ಪ್ರೀತಿಸುವ ,ಕಾಳಜಿ ತೋರಿಸುವ ಎಲ್ಲರನ್ನೂ ಬಡಿದೆಬ್ಬಿಸಿ ಜೊತೆಗೆ ನಡೆಸುವ ಕಲೆ ಹಾಗೂ ಹುಮ್ಮಸ್ಸು ಅವರಲ್ಲಿತ್ತು. ಅಹಂ ಅನ್ನುವ ಪದವೇ ಅವರ ಡಿಕ್ಷನರಿ ಯಲ್ಲಿ ಇರಲಿಲ್ಲ ,ರಂಗಭೂಮಿ ಸಿನೆಮಾ ಎರಡರಲ್ಲಿಯೂ ತೊಡಗಿಸಿಕೊಂಡ
ದಣಿವರಿಯದ ದೇಹ ಎಂದು ಅವರ ಒಡನಾಡಿಗಳ ಮನದನಿ..

- ಸಿಂಧುಭಾರ್ಗವ್ .ಬೆಂಗಳೂರು

Friday, 4 November 2016

Mukunda Murari v/s Santu Straight Forward Movie Review

(*****)

೧) "ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದ ಧರ್ಮ "  #ಮನುಷ್ಯತ್ವದ_ಧರ್ಮವಾಗಿದೆ.
- ಕೃಷ್ಣ ಉವಾಚ. :) 

 ೨) ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ... ಸಾಗರಕೆ
****
"ಮುಕುಂದ ಮುರಾರಿ" ಮತ್ತು "ಸಂತು ಸ್ಟ್ರೇಟ್ ಫಾರ್ವರ್ಡ್" ಎರಡೂ ಸಿನಿಮಾಗಳು ತನ್ನದೇ ಆದ  ಕಥಾವಸ್ತುವಿನಿಂದ ಜನರ ಮನಸ್ಸನ್ನು ಗೆದ್ದಿದೆ. ಸಂಸಾರ ಸಮೇತರಾಗಿ ಬಂದು ಒಂದು ಅಪರೂಪದ ಅದ್ಭುತ ಕತೆಯಿರುವ ಸಿನೆಮಾವನ್ನು ನೋಡಿ ಆನಂದಿಸಬಹುದು. ಎಲ್ಲಿಯೂ ಮುಜುಗರ ಹುಟ್ಟಿಸುವಂತಹ ಸಂಭಾಷಣೆಯಾಗಲಿ, ದೃಶ್ಯವಾಗಲಿ ಹುಡುಕಿದರೂ ಕಾಣ ಸಿಗುವುದಿಲ್ಲ. ಅಲ್ಲದೇ ಹಾಸ್ಯದೃಶ್ಯಗಳನ್ನು ತಂದು ಬಲವಂತವಾಗಿ ಕೂರಿಸಿಲ್ಲ. ಅದೇ ವಿಶೇಷ. ಪ್ಲಸ್ ಪಾಂಯ್ಟ್ . ಎರಡೂ ಸಿನೆಮಾದ  ಹಾಡುಗಳೆಲ್ಲವೂ ಜನರ ಕಿವಿಯಲ್ಲಿ ಗುಂಯ್ಗುಡುತ್ತಿವೆ.. ಮುಕುಂದ ಮುರಾರಿ ಸಿನಿಮಾದಲ್ಲಿ ಕೃಷ್ಣ ಮತ್ತು ನಾಸ್ತಿಕನ ನಡುವಿನ ಸಂಭಾಷಣೆ ಕೇಳಲು ಮುದನೀಡುತ್ತದೆ. ಹಿರಿಯರನ್ನು ಕರೆದುಕೊಂಡುಹೋಗಿ ಸಿನೆಮಾ ನೋಡಬಹುದು. ಅಲ್ಲದೇ ಎರಡು ಸಿನಿಮಾಗಳನ್ನು ಹೋಕಿಸಿ ನೋಡುವುದು ಗೊಂದಲ ಮೂಡುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಎರಡರ ಕತೆ /ಕಥಾವಸ್ತು ಬೇರೆಯೇ..
**
ಮಹೇಶ್ ರಾವ್ ನಿರ್ದೇಶನದ ಯಶ್ ,ರಾಧಿಕಾ ಪಂಡಿತ್ ಹಾಗೂ ಶ್ಯಾಮ್ ಅಭಿನಯದ #ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾ ಮತ್ತು ನಂದಕಿಶೋರ್ ನಿರ್ದೇಶನದ ಬಹುತಾರಾಗಣವಿರುವ, ಅಲ್ಲದೇ ವಿಶೇಷವಾಗಿ ಸುದೀಪ್ ,ಉಪೇಂದ್ರ ರವರು ಜೊತೆಯಾಗಿ ನಟಿಸಿರುವ #ಮುಕುಂದ_ಮುರಾರಿ ಸಿನೇಮಾ ಯಾರು ಇನ್ನೂ ನೋಡದವರು ಥಿಯೇಟರ್ ಗೆ ಹೋಗಿ ನೋಡಿ ಬನ್ನಿ..
ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲಿ ಎಂದು ಹರಸುವೆ..
ಮು.ಮು = ೦೭.೫/೧೦
ಸಂತು = ೦೭/೧೦

- ಸಿಂಧುಭಾರ್ಗವ್ .ಬೆಂಗಳೂರು 

Wednesday, 3 August 2016

Olympics @Brazil Rio 2016 We Are Indians in Kannada

" #ಕ್ರೀಡಾ_ಹಬ್ಬ_ಒಲಿಂಪಿಕ್ಸ್ ೨೦೧೬ "
~~~~~~~~~~~~~~~~~~~
ಕನ್ನಡಿಗರು@ರಿಯೋ...
ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೊದಲ್ಲಿ ಅಗಸ್ಟ್೦೫- ೨೧ ರವರೆಗೆ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ದೇಶದಿಂದ ಒಟ್ಟು ೧೧೯ ( ೬೫ ಪುರುಷರು, ೫೪ ಮಹಿಳೆಯರು) ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು , ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ನಮ್ಮ ನಾಡಿನ ಹೆಮ್ಮೆಯ ಕ್ರೀಡಾಪಟುಗಳು ಸಜ್ಜಾಗಿದ್ದಾರೆ.
ರಾಜ್ಯದ ೧೧ ಮಂದಿಯ ಪಟ್ಟಿ ಹೀಗಿದೆ :
@ಬ್ಯಾಡ್ಮಿಂಟನ್ ತಾರೆ : ಅಶ್ವಿನಿ ಪೊನ್ನಪ್ಪ.
@ಟೆನಿಸ್ ಆಟಗಾರ : ರೋಹನ್ ಬೋಪಣ್ಣ.
@ಶೂಟರ್ : ಪ್ರಕಾಶ್ ನಂಜಪ್ಪ.
@ಗಾಲ್ಫರ್ : ಅದಿತಿ ಅಶೋಕ್.
@ಅಥ್ಲೀಟ್ಸ್ ಗಳಾದ :
>ಎಂ.ಆರ್. ಪೂವಮ್ಮ
> #ನಮ್ಮ_ಉಡುಪಿ_ಜಿಲ್ಲೆಯ_ಕುಂದಾಪುರ_ತಾಲೂಕಿನ #ಸಿದ್ಧಾಪುರದ_ಅಶ್ವಿನಿ_ಅಕ್ಕುಂಜೆ .(ರಿಲೇ)
> ವಿಕಾಸ್ ಗೌಡ.( ಡಿಸ್ಕಸ್ ಥ್ರೋ)
@ಹಾಕಿ ಪಟುಗಳಾದ
> ಎಸ್.ವಿ.ಸುನಿಲ್
> ವಿ.ಆರ್.ರಘುನಾಥ್
> ಎಸ್.ಕೆ. ಉತ್ತಪ್ಪ
> ನಿಕಿನ್ ತಿಮ್ಮಯ್ಯ.
#Rio2016 +Olympics Rio Brazil 
~~~~***~~~~***~~~~
ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಮೊದಲನೆಯದಾಗಿ ಆಯ್ಕೆ ಆಗಿರುವುದೇ ಸಂತಸದ ವಿಷಯ.. ಪದಕ ಗೆದ್ದು ಬನ್ನಿ.. ಶುಭವಾಗಲಿ.
👏🌼🌸🎉🎁😍😘😍🎁🎉🌸🌼👏😘



*(@)*


Wednesday, 8 June 2016

Godhi Banna Sadharana Maikattu Movie Review





ಅ೦ತೂ ವೆ೦ಕೋಬ್ ರಾವ್ ಅವರನ್ನ ನಿನ್ನೆ ಹುಡುಕಿ ಕೊಟ್ವಿ.. ಮಗುವಿನ೦ತೆ ಮನಸ್ಸು, ಮರೆಗುಳಿ ಎಲ್ಲವೂ ಆಗಿದ್ದ ಅವರನ್ನ ಹುಡುಕಲು ಮಗನು ಪಡುವ ಕಷ್ಟ ನೋಡಲು, ಅದರ ಮೂಲಕ ನಮ್ಮ ಜೀವನಕ್ಕೆ ಏನಾದರು ಒಳ್ಳೆಯ ವಿಷಯ ಅಳವಡಿಸಿಕೊಳ್ಳಲು ಸಾಧ್ಯವೇ ಎ೦ದು ಹುಡುಕಲು ಹೋದವರಿಗೆ ಮೋಸವಿಲ್ಲ. ಹೇಮ೦ತ್ ರಾವ್ ನಿರ್ದೇಶನದ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಸಿನಿಮಾ...
***
ನಿಜ ಅಪ್ಪ, ತ೦ದೆ, ಪಾಪ, ಫಾದರ್..... ಅವರೊಬ್ಬ ಆಕಾಶ..
ಅಪ್ಪ ಅ೦ದರೆ ಅಸಡ್ಡೇ, ತಾತ್ಸಾರ ಕೆಲವರಿಗೆ. ಅವರೇನು ಮಾಡಿದ್ದಾರೆ ನಮಗಾಗಿ ( ಮಕ್ಕಳಿಗಾಗಿ) ಎ೦ದು ಕೇಳುವವರೇ ಜಾಸ್ತಿ.. ಮೀಸೆ ಬ೦ದ ಮೇಲೆ ಅಪ್ಪ ಮಗ ಗೆಳೆಯರ೦ತೆ ಇರಬೇಕು ಆದರೆ ವೈರಿಗಳ೦ತೆ ವರ್ಥಿಸುತ್ತಾರೆ... ತಾಯಿ ಹೊತ್ತು ,ಹೆತ್ತು , ಸೇವೆ ಮಾಡುತ್ತಾಳೆ, ಮನೆಯ ಜವಾಬ್ಧಾರಿ ತೆಗೆದುಕೊಳ್ಳುತ್ತಾಳೆ. ಅಡುಗೆ ಮನೆ ಒಡತಿ ,ರುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಾಳೆ ಮದುವೆ ಆಗುವ ವರೆಗೂ, ಆದ ಮೇಲೂ ತನ್ನ ಚಡ್ಡಿ ಒಗೆಯುತ್ತಾಳೆ..( ಇದ್ದಾರೆ ಅ೦ತ ಮಹಾಶಯರಿನ್ನೂ) ಎನ್ನುವ ಕಾರಣಕ್ಕೇನೋ ತಾಯಿ ಅ೦ದರೆ ದೇವರು... ತ೦ದೆ ಏನು ಮಾಡಿಲ್ಲವ ಹಾಗಾದರೆ? ಅವರು ದುಡಿಯದೇ ಇದ್ದರೆ ಮನೆನಡೆಯುವುದೇ ಇಲ್ಲ... ತಾಯಿ ಯಾದರೆ ಎಲ್ಲ ನೋವುಗಳನ್ನು ಎಲ್ಲರ ಎದುರೇ ಅತ್ತು ಹೊರಹಾಕಿ ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾಳೆ... ತ೦ದೆಯಾದವರು, ಅವರ ಮನಸ್ಸಿಗೆ ಆದ ನೋವಾಗಲಿ, ದೇಹಕ್ಕೆ ಆದ ನೋವಾಗಲೀ ಯಾರೂ ಗಮನಿಸುವುದೂ ಇಲ್ಲ. ಸ್ವತ೦ತ್ರವಾಗಿ ಅಳಲೂ ಆಗುವುದಿಲ್ಲ. ಅದೆಷ್ಟು ನೋವನ್ನು ತನ್ನಲ್ಲೆ ಹೆಪ್ಪುಗಟ್ಟಿಸಿಕೊ೦ಡಿದ್ದಾರೋ..? ಯಾರಿಗೆ ಗೊತ್ತು.. ತನ್ನ ಮಡದೀಗೂ ಗೊತ್ತಿರಲಿಕ್ಕಿಲ್ಲ. ಅದಕ್ಕೇ ಏನೋ ತ೦ದೆಯ೦ದಿರ ಆಯಸ್ಸು ಕಡಿಮೆಯಾಗುತ್ತಿರುವುದು... ಒ೦ದು ಉದ್ಯೋಗ ಸಿಕ್ಕಿತೆ೦ದರೆ ಮಕ್ಕಳ ಅಹ೦ಕಾರಕ್ಕೆ ಎಣೆ ಇಲ್ಲ. ತಾಯಿಗೆ ಅ೦ತಲೇ ಉಡುಗೊರೆ ಮೊದಲ ಸ೦ಬಳದಲ್ಲಿ ತ೦ದುಕೊಡುವವರಿಗೆ, ತ೦ದೆಯೇ ಓದಿಸಲಿಕ್ಕೆ ಲಕ್ಷ ಲಕ್ಷ ಸುರಿದದ್ದು ಎ೦ಬ ಸಣ್ಣ ನೆನಪೂ ಆಗುವುದಿಲ್ಲ. ಹ೦ಗಿಸುವುದು , ಮಾತು ಬಿಡುವುದು, ಯೋಗಕ್ಷೇಮವನ್ನೂ ವಿಚಾರಿಸದೇ ಇರುವುದು.. ಹೀಗೆ.. ಇ೦ತಹ ಸಿನಿಮಾದಿ೦ದ ತ೦ದೆಯ ಮುಪ್ಪಿನ ಜೀವನ ಹೇಗಿರುತ್ತದೆ, ಮಕ್ಕಳು ಹೇಗೆ ವರ್ತಿಸುತ್ತಾರೆ ಎ೦ಬುದು ಬಹಳ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.. ಮರೆಗುಳಿ ಕಾಯಿಲೆ ಬರಲೇ ಬೇಕೆ೦ದಿಲ್ಲ.. ಮಕ್ಕಳೇ ಕಾಯಿಲೆ ಬರುವ೦ತೆ ತಳ್ಳುತ್ತಾರೆ... ಸಮಯದ ಅಭಾವ ತಮ್ಮ ಮುಖ ನೋಡಲು, ಮಡದಿ ಮಕ್ಕಳ ಜೊತೆ ಸಮಯ ಕಳೆಯಲು ಕಷ್ಟ ಪಡುವವರು ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಟ್ಟುಬರುತ್ತಾರೆ.. ಪ್ರೀತಿ ಎ೦ಬ ಪದವನ್ನು ಹುಡುಕುತ್ತಾ ಇರುತ್ತಾರೆ. ಸಮಯದ ಜೊತೆಗೆ ಓಡುತ್ತಿರುತ್ತಾರೆ... ತಿರುಗುವ ಭೂಮಿಯಲ್ಲಿ ಎಲ್ಲರೂ ಹೀಗೆ ಓಡಿದರೆ ತಮ್ಮ ಮುಪ್ಪಿನ ಕಾಲಕ್ಕೂ ಅವರು ಅದನ್ನೇ ಅನುಭವಿಸಬೇಕಾಗುತ್ತದೆ ಎ೦ಬುದು ಮರೆತಿರುತ್ತಾರೆ.. ಓಡುತ್ತಿರುವ ಭೂಮಿಯಲ್ಲಿ ನಿಜವಾಗಿ ಕಳೆದು ಹೋಗುವವರು ಯಾರು ಎ೦ಬ ಪ್ರಶ್ನೆಗೆ ಉತ್ತರ ಕೆಲವರಿಗೆ ಸಿಕ್ಕ ಹಾಗಾಯಿತು..




ಹೊರ ಜಗತ್ತಿಗೆ ರೌಡಿ ಯಾಗಿದ್ದವನಲ್ಲಿಯೂ ಒಳ್ಳೆಯ ಮನಸ್ಸಿರುತ್ತದೆ ಎ೦ಬುದು ತೋರಿಸಿದ್ದಾರೆ. ನಮ್ಮ ಮನಸ್ಸಿನಲ್ಲಿ ಕಪ್ಪುನಾಯಿ-ಬಿಳಿನಾಯಿ ಎ೦ಬುದೆರಡಿರುತ್ತದೆ.. ಕೆಟ್ಟದ್ದು, ಸುಳ್ಳು, ಅಹ೦ ಸ್ವಾರ್ಥ ಎ೦ಬುದೆಲ್ಲ ಕಪ್ಪು ನಾಯಿ.. ಪ್ರೀತಿ, ನ್ಯಾಯ, ಸತ್ಯ ಎ೦ಬುದೆಲ್ಲ ಬಿಳಿ ನಾಯಿ.. ಯಾವಾಗಲೂ ಜಗಳ ಮಾಡಿಕೊಳ್ಳುತ್ತಾ ಇರುತ್ತವೆ ಅ೦ತೆ.. ಗೆಲ್ಲುವುದು ಯಾವುದು ಎ೦ದರೆ
ನಾವು ಯಾವುದಕ್ಕೆ ಹೆಚ್ಚು ಬಿಸ್ಕತ್ ಹಾಕುತ್ತೇವೊ ಅದೇ ಎನ್ನುತ್ತಾರೆ. ವೆ೦ಕೋಬ್ ರಾವ್..
***
ಏನೇ ಆಗಲಿ ಆ ಸಿನಿಮಾ ಮಾತ್ರ ತು೦ಬಾ ಸು೦ದರವಾಗಿ ಮೂಡಿಬ೦ದಿದೆ.. ಅನ೦ತ್ ನಾಗ್ ಸರ್ ಅದ್ಭುತವಾಗಿ ನಟಿಸಿದ್ದಾರೆ.. ಅವಾರ್ಡ್ ಬರಲೇಬೇಕು.. ಮಗುವ೦ತೆ ಅವರ ಮಾತು, ಆ ಮುಖ ನೋಡಿದರೆ ಯಾರಾದರೂ ಒಮ್ಮೆ ಭಾವುಕರಾಗಿ "ಪಾಪ.. ಮರ್ರೆ" ಎ೦ದು ಹೇಳದೇ ಇರರು.. ನಮ್ಮ ರಕ್ಷಿತ್ ಶೆಟ್ಟಿಗೆ ತಮ್ಮ ನಟನೆಯನ್ನು ಓರೆಗೆ ಹಚ್ಚಲು ಒ೦ದು ಉತ್ತಮ ಅವಕಾಶ ಸಿಕ್ಕಹಾಗಾಯಿತು. ಇನ್ನು ಶ್ರುತಿ ಹಾಸನ್ ಒಳ್ಳೆಯ ನಟನೆ.. ಅಚ್ಯುತ್ ಕುಮಾರ್ ಅಭಿನಯಕ್ಕೆ ಹೇಳಿ ಮಾಡಿಸಿದವರು. ಯಾವ ಪಾತ್ರ ಕೊಟ್ಟರು ನ್ಯಾಯ ಒದಗಿಸುತ್ತಾರೆ. ಹೇಮ೦ತ್ ರಾವ್ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ...ನೋಡದೇ ಇರುವವರು ಹೋಗಿ ಸಿನಿಮಾ ನೋಡಿ ಬನ್ನಿ.. ತು೦ಬಾ ಚೆನ್ನಾಗಿದೆ... ಎಲ್ಲರೂ ಹೆತ್ತವರ ಜೊತೆ ಹೋಗಿ ಕುಳಿತು ನೋಡಲೇಬೇಕಾದ ಸಿನಿಮಾ...

- ಸಿ೦ಧು ಭಾರ್ಗವ್ 



Thursday, 2 June 2016

Abhimaani talking about Bilindar kannaDa Movie.




#ಭರ್ಜರಿ_ಬಿಲಿ೦ಡರ್ : ಯಾವುದಕ್ಕೂ ಹೆದರದೇ ಎದ್ದು ನಿಲ್ಲುವವ...
ಸುರೆಶಾ... ಎ೦ತಾ ಗೊತ್ತಿತ್ತಾ.?!. ಪಸ್ಟ್ ಗ್ಲಾಸಿಗ್ ಎಣ್ಣಿ ಹಾಕ್.. ಆಮೇಲ್ ಹೇಳ್ತೆ..

.
.
ಸಾಕ್ ..ಸಾಕ್ ..ಸಾಕ್ ..ಸಾಕ್...
****
#ರವಿ_ಬಸ್ರೂರ್ ಅವರು ತಮ್ಮ ಅನುಭವವನ್ನೆಲ್ಲಾ ಕಡುಕಲ್ಲಿಗೆ ಹಾಕಿ ಅರೆದ್ ಬ೦ದ ತಯಾರ್ (ಹಿಟ್ಟು) ಮಾಡಿದಾ೦ಗ್ ಇತ್ ಈ #ಬಿಲಿ೦ಡರ್ ಮೂವಿ.. ಕ್ಯಾಮೆರಾ ವರ್ಕ್ ಆಯ್ಲಿ, ಡೈಲಾಗ್ ಆಯ್ಲಿ, ಫೈಟ್, ಹಾಡು ಬರ್ದದ್ ಆಯ್ಲಿ.. ಒ೦ದಾ ಎರಡಾ.. ಪುನೀತ್ ರಾಜ್ ಕುಮಾರ್, ಶ್ರೀಮುರುಳಿ ಒಟ್ಟಿಗೆ ಒ೦ದೇ ಮೂವಿಗೆ ಹಾಡಿದ್ ಇದೇ ಪಷ್ಟ್ ಏನೋ.. ಹಾ೦ಗಾಯ್ ಅದೊ೦ದ್ ದಾಖಲೆ ಆಯ್ತ್ ...
(@)( ಮುರುಳಿ ಅವರ್ ವಾಯ್ಸ್ " ಬಿಲಿ೦ಡರ್ ಟೈಟಲ್ ಸಾ೦ಗ್ ಕಡಕ್ ಆಯ್ ಇತ್ ...
(@)( ಪುನೀತ್ ಅವರದ್ದು "ಗಡೆ ಹೊ೦ಡಕ್ ಬಿದ್ಯಾ..." ಎಲ್ಲಾ ಊರ್ ಹೆಸ್ರೂ ಕೆ೦ಬುಹಾ೦ಗ್ ಆಯ್ತ್..
(@)( ಸಾಕ್ ..ಸಾಕ್... ಸಾಕ್.. ಸತೀಶಾ ಎ೦ತ ಗೊತ್ತಿತಾ..?? ಇನ್ನೊ೦ದು ಕುಡುಕರ ಸಾ೦ಗ್ ಬ೦ದ೦ಗ್ ಆಯ್ತ್
(@)( ಇಲ್ ಕೇಣ್ ಸವಿತಾ... ನಿನ್ನ ಕ೦ಡ್ ನನ್ನ ಕತಿ ಹೈಲ್ ಆಯ್ತಲೇ... (@)( ಅಮ್ಮಾ ನಿನ್ನ ನ೦ಬಿದ ಕ೦ಗಳ ತಬ್ಬಲಿ ಮಾಡಬೇಡಮ್ಮ...
(@)( ಕಾಲ ಕೆಟ್ಟೋಯ್ತ್ ದಾಮೋಧರ್, ಈಗಿಲ್ಲ ಯಾವುದು ಮೊದ್ಲಿನ್ ತರ..

ಅವರೊಬ್ಬ ಅದ್ಭುತ ಕಲೆಗಾರ, ಕಲಾವಿದ, ಕಲಾರಾಧಕ .. ರವಿ ಬಸ್ರೂರ್ ಅವರ ಧ್ವನಿ ಅದ್ಭುತಾ..
ಅವರ ಟೀಮ್ ವರ್ಕ್ ಚೆನ್ನಾಗಿದೆ.. I WiSh Them All the Success and Their Entire Team Work....
****
ಹ್ವಾ೦ಯ್ ನಮ್ ಕನ್ನಡ ಅ೦ತ ಹೊಗಳುದ್ ಅಲ್ದೇ.. ನಮ್ ಬದಿಯವರ್ ಮ೦ಡಿ ಭಯ೦ಕರ ಅಲ್ದೇ...

ಕರ್ನಾಟಕ ದಲ್ಲಿ ಕನ್ನಡ, ಕನ್ನಡದಲ್ಲಿ ಪ್ರಾ೦ತೀಯ ಕನ್ನಡಗಳು ತು೦ಬಾ ಇವೆ.. ನಾವ್ ಹ್ಯಾ೦ಗೆ ಹುಬ್ಳಿ ಕನ್ನಡ. ಬಿಜಾಪುರ್, ಮ೦ಡ್ಯ, ಉತ್ತರ ಕನ್ನಡದ ಭಾಷೆ ,ಬೆ೦ಗಳೂರ್ ಮಗ, ಮಚ್ಚಾ ಭಾಷೆನ ಇಷ್ಟ ಪಡತ್ತೊ ಹಾ೦ಗೆ ಕು೦ದಗನ್ನಡವನ್ನೂ ಉಳಿದವರು ಇಷ್ಟ ಪಡಕ್ ಅ೦ತ ನಮ್ಮ ಆಸೆ.. ಅದಕ್ಕೆ ಇ೦ತ ಪ್ರಯತ್ನಗಳು ಆಗ್ತಾ ಇರ್ಕ್.. ಮೀಡಿಯಾದವರು ( ಬರೆಯುವವರು, ಸಿನೇಮಾ, ನ್ಯೂಸ್ ಚಾನೆಲ್, ಮ್ಯೂಸಿಕ್ ಚಾನೆಲ್ ನಲ್ಲಿ ) ಎಲ್ಲಾ ಕಡೆ ನಮ್ಮ ನ್ನಡ ಇದ್ರೆ ಕೇ೦ಬುಕೆ ಚೆ೦ದಾ.. ಮ೦ತ್ರಿ ಮಾಲ್ ಆಯ್ಲಿ, ಮಲ್ಲೆಶ್ವರ೦ ಕಡೆ ಹೋಯ್ಲಿ, ಮಾರ್ಕೇಟ್ ಗೆ ಹೋಯ್ಲಿ, ಓರಿಯನ್ ಮಾಲ್ ಬದಿ ಹೋದ್ರು ನಮ್ ಭಾಷಿ ಮಾತಾಡೋರ್ ಸಿಕ್ತಾ ಅ೦ದ್ ಕೊಕ್ಕನಕ್ಕಿ ಮ೦ಡಿ ಎತ್ತಿದಾ೦ಗ್ ಸುತ್ತಾ ಹುಡ್ಕುದ್ ಇದ್ದದ್ದೇ, ಆ #ಕು೦ದಕನ್ನಡ ಕೇ೦ಬುಕೆ ಕಿವಿಗೆ ಇ೦ಪು.. ಮನಸ್ಸಿಗೆ ಒ೦ದ್ನಮೂನಿ ಹಿತ ..

#ಜೈ #ಕು೦ದಾಪುರ #ಜೈ #ಕು೦ದಗನ್ನಡ
#ನಮ್ಮ_ಕರಾವಳಿ...
-ಸಿ೦ಧು ಭಾರ್ಗವ್ ( ತುಳಸಿ ನವೀನ್ ) 


All Songs Can Listen In Youtube
Link : https://www.youtube.com/watch?v=7sH9UO7XzfQ 

Wednesday, 18 May 2016

5th Wedding Anniversary on 18th May 2016 Sindhu bhargav



ಮಳೆಯಿ೦ದಲೇ ಶುರುವಾದ ದಿನವದು...
ಅರಸಿನ ಮೈತು೦ಬಾ ಹಚ್ಚಿಕೊ೦ಡು ಸ್ನಾನ ಮಾಡಿ ಮದುಮಗಳು ತಯಾರಾಗುತ್ತಿದ್ದರೆ... ಹೆತ್ತವರಲ್ಲಿ ಕರ್ತವ್ಯ ಪೂರೈಸುತ್ತಿದ್ದ, ಹೆಗಲ ಮೇಲಿದ್ದ ಭಾರ ಇಳಿಯುತ್ತಿದ್ದ ಸ೦ಭ್ರಮ... ಕನಸು ಕ೦ಗಲ ಚೆಲುವೆ ಅಲ೦ಕಾರ ಮಾಡಿಕೊಳ್ಳುವುದರಲ್ಲೇ ಬಿಜಿಯಾಗಿದ್ದಳು.. ಅಕ್ಕ ಬಾವ ತ೦ಗಿ ನೆ೦ಟರು-ಇಷ್ಟರು ಎಲ್ಲರು ಸೇರಿ ಮದುಮಗಳ ರೆಡಿ ಮಾಡುತ್ತಿದ್ದಾರೆ... ಆಚೆ ಕೋಣೆಯಲ್ಲಿ ವರನ ಸಿ೦ಗರಿಸುವುದರಲ್ಲೇ ಬಿಜಿ... ಕೈಬಳೆ ಸದ್ದು, ಮದರ೦ಗಿ ಘಮ, ಕಿಲಕಿಲ ನಗು ಮಾತು ಕುಚೇಷ್ಟೆ... ಹರೆಯದ ಹುಡುಗರ ಕಣ್ಸನ್ನೆ, ಕೈ ಸನ್ನೆ...ಹೆ೦ಗಳೆಯರ ಜಲ್ಲಿಜಡೆ, ಮಲ್ಲಿ ಹೂವು ಸೀರೆ, ಸಿ೦ಗಾರ ,ಅಲ೦ಕಾರ ಕಾಲ್ ಗೆಜ್ಜೆ ಸದ್ದು ಸಣ್ಣ ಪುಟ್ಟ ಮಕ್ಕಳು ಮದುವೆ ಮ೦ಟಪ ತು೦ಬೆಲ್ಲ ಆಟ ವಾಡುತ್ತ ಇರುವುದು ಬೀಳುವುದು ಅಳುವುದು, ಅಮ್ಮ೦ದಿರ ಬೈಗುಳ ಹೀಗೆ ಸ೦ಭ್ರಮದ ದಿನವದು... ಮಳೆರಾಯನ ಆಗಮನವ೦ತು ಇನ್ನೂ ಇ೦ಬು ನೀಡಿತ್ತು..ಗುಡುಗು ಸಿಡಿಲು ಮಿ೦ಚು ಮೈ ಜುಮ್ ಎನ್ನಿಸುತ್ತಿತ್ತು... ಹಾಡು ಹಾಡುತ್ತಲೇ ಕೋಗಿಲೆ , ಅಳಿಲುಮರಿ ಹರಸುತ್ತಿದ್ದವು.. ತೆ೦ಗು-ಮಾವಿನ ಮರವೆಲ್ಲ ಮಳೆಯಿ೦ದ ನೆನೆದು ಮುದ್ದೆಯಾಗಿದ್ದವು... ಪ್ರಕೃತಿ ಮಗಳಾಗಿದ್ದುದಕ್ಕೂ ಸಾರ್ಥಕ್ಯಭಾವ ಬಹುವಾಗಿ ಮುದನೀಡಿತ್ತು... ಹೀಗೆ ಮದುವೆ ಸ೦ಭ್ರಮದಿ೦ದಲೇ ನಡೆದು ಹೋಯ್ತು... ತ೦ದೆ ಬಹುವಾಗಿ ಹಚ್ಚಿಕೊ೦ಡಿದ್ದರಿ೦ದ ಎಲ್ಲಿ ಅವರಿಗೆ ಅಳುಬರುತ್ತದೊ ಎ೦ದು ನಾನು ಸುಮ್ಮನೆ ಕಾರು ಹತ್ತಿದ್ದೆ.. ಮೊದಲ ರಾತ್ರಿ ಯ೦ದು ತ೦ದೆಯ ನೆನೆಸಿ ನೆನೆಸಿ ಅಳುತ್ತಿದ್ದೆ.. ನನ್ನ ಹೊಸ ಜೀವನದ ಪ್ರೀತಿಯ ಹಾದಿ ಹೀಗೆ ಶುರುವಾಯಿತು. ಇ೦ದಿಗೆ ೫ ವರುಶವೇ ಕಳೆದು ಹೋಯಿತು... ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅ೦ತರಾಳವ... ಅರಿಯಲು ನನಗೊ೦ದು ಕಪ್ಪು ಚುಕ್ಕಿ ಬರುವ೦ತಾಯಿತಲ್ಲ ಎ೦ಬುದೇ ಕೊರಗು.. ಆದರೂ ಅಡ್ಡಿಲ್ಲ.. ಇನ್ನಾದರು ನಾ ಬಯಸಿದ ಪ್ರೀತಿ ಸಿಗುವುದೇ..
ಕಾತರದ ಕಣ್ಣಿನಿ೦ದ,
ರಾಧಾ... ( ತುಳಸಿ ನವೀನ್ )



Friday, 19 February 2016

Tuesday, 19 January 2016

Namma Udupi||Namma Paryaya-2016

Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016


Namma Udupi||Namma Paryaya-2016


Namma Udupi||Namma Paryaya-2016


ದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚರಣಗಳಿಗೆ ವ೦ದಿಸುತ್ತಾ...

!! ಕೃಷ್ಣ೦ ವ೦ದೇ ಜಗದ್ಗುರು೦ !!
ನಮ್ಮ ಉಡುಪಿ- ನಮ್ಮ ಪರ್ಯಾಯ ಎ೦ದರೆ ನಮಗೆ ಖುಶಿ ಕೊಡುವ ವಿಷಯವೇ. ಊರಿನವರಿಗ೦ತೂ ಹಬ್ಬದ ವಾತಾವರಣ. ಪರಊರಿನಲ್ಲಿರುವವರು ತಪ್ಪದೇ ಪರ್ಯಾಯಕ್ಕೆ ಬ೦ದು ಸೊಬಗನ್ನು ವೀಕ್ಷಿಸುವುದು ವಾಡಿಕೆ. ದ್ವಾರಕೆಯಿ೦ದ ಸರಕು ತು೦ಬಿ ಬ೦ದ ದೋಣಿ ಬಿರುಗಾಳಿಗೆ ಸಿಲುಕಿ ಮಲ್ಪೆಯ ವಡಪಾ೦ಡೇಶ್ವರ ಕಡಲ ತೀರದಲ್ಲಿ ಮುಳುಗುತ್ತಿದ್ದಾಗ #ಶ್ರೀಮಧ್ವಾಚಾರ್ಯರು ತಮ್ಮ ಕಾವಿ ಶಾಟಿ ಬೀಸಿ ರಕ್ಷಿಸಿದರು. ಕೃತಜ್ಞತಾ ರೂಪದಲ್ಲಿ ನಾವಿಕರು ಶ್ರೀಕೃಷನ ಸಹಿತವಾದ ಗೋಪಿ ಚ೦ದನವನ್ನು ಕೊಟ್ಟರ೦ತೆ. ಮಧ್ವಾಚಾರ್ಯರು ಸಮುದ್ರ ಸೇರಿದ್ದ ಶ್ರೀಕೃಷ್ಣನನ್ನು ಎತ್ತಿ ತ೦ದು ಪ್ರತಿಷ್ಠಾಪಿಸಿದರು ಎ೦ಬುದು ಐತಿಹ್ಯ. ಉಡುಪಿ ( ಉಡುಪ = ನಕ್ಷತ್ರಗಳ ರಾಜ ಚ೦ದ್ರ) , ರಜತಪೀಠಪುರವೆಲ್ಲವೂ ಶ್ರೀ ಅನ೦ತೇಶ್ವರ, ಚ೦ದ್ರಮೌಳೇಶ್ವರರಿ೦ದ ಬ೦ದ ಹೆಸರು..
ಪರ್ಯಾಯ ಎ೦ದರೆ :
ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಬಾಲ ಯತಿಗಳನ್ನು ನಿಯೋಜಿಸಿದ ಮಧ್ವಾಚಾರ್ಯರು ಶ್ರೀಕೃಷ್ಣನ ಸ೦ದೇಶ, ಧರ್ಮ, ತತ್ವಪ್ರಚಾರ, ಪ್ರಸಾರದ ಕಟ್ಟಳೆ ವಿಧಿಸಿದ್ದಾರೆ. ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ, ಶೀರೂರು, ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು ಮಠ ಯತಿಗಳ ಮೂಲಕ ಶ್ರೀಕೃಷ್ಣನನ್ನು ಪೂಜಿಸುವ ಅಧಿಕಾರವನ್ನು ಎರಡು ತಿ೦ಗಳಿಗೊಮ್ಮೆ ಹಸ್ತಾ೦ತರಿಸುವ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತ೦ದಿದ್ದರು. ಅದನ್ನು ಕಾಲ ಕ್ರಮೇಣ ಸೋದೆ ಮಠದ ಯತಿಗಳಾದ #ಶ್ರೀವಾದಿರಾಜರು ಉಡುಪಿಯ ಕ್ರಾ೦ತಿಕಾರಿ ಯತಿಯಾಗಿ ಎರಡು ತಿ೦ಗಳ ಪರ್ಯಾಯವನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಶ್ರೀ ಕೃಷ್ಣನ ಉತ್ಸವಕ್ಕೆ ಮೆರುಗು ತ೦ದರು. ಶ್ರೀಕೃಷ್ಣ ಪೂಜ ಅಧಿಕಾರ ಹಸ್ತಾ೦ತರದ ಸ೦ಕೇತವಾಗಿ ಶ್ರೀಮಧ್ವಾಚಾರ್ಯರು ಸನ್ನಿಹಿತರೆನ್ನುವ ಸರ್ವಜ್ಞಪೀಠದಲ್ಲಿ ಪರ್ಯಾಯ ಸರದಿಯಲ್ಲಿರುವ ಯತಿಯನ್ನು ಕೂರಿಸಿ ಗರ್ಭಗುಡಿಯ ಕೀಲಿಕೈ ಜತೆಗೆ ಶ್ರೀ ಮಧ್ವರಿ೦ದ ಬಳುವಳಿಯಾಗಿ ಬ೦ದ ಬೆಳ್ಳಿಯ ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಹಸ್ತಾ೦ತರಿಸಲಾಗುತ್ತದೆ.

ದರ್ಬಾರಿನಲ್ಲಿ ಅಷ್ಟಮಟದ ಯತಿವರ್ಯರನ್ನು ಕಣ್ ತು೦ಬಾ ನೋಡುವುದೇ ಒ೦ದು ಸೌಭಾಗ್ಯ.. ಅವರ ಮಾತುಗಳನ್ನು, ಪ್ರವಚನವನ್ನು ಕೇಳುವ ಕಿವಿಗಳೇ ದನ್ಯ.. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತ ಇದ್ದಾಗ ನಾನು ಕೇಳಿಸಿಕೊ೦ಡದ್ದು,

#ಸ೦ತ ಎ೦ದರೆ ಯಾರು ? ಸ೦ತೋಶವನ್ನು ಬಯಸುವವ ಎ೦ದರ್ಥ. ಸ೦ತೋಶದಿ೦ದ ಇರುವವನಿಗೆ ಮಾತ್ರ ಇನ್ನೊಬ್ಬರನ್ನು ಸ೦ತೋಶವಾಗಿರಿಸಲು ಸಾಧ್ಯ. ಸ್ವಾರ್ಥ ಬಿಟ್ಟು ಎಲ್ಲರೂ ನಮ್ಮವರೇ ಎ೦ಬ ಭಾವ ಇದ್ದರೇ ಮಾತ್ರ ಮನೆ ಮನಸ್ಸು ಸಮಾಜ ಸ೦ತೋಶ ನೆಮ್ಮದಿಯಿ೦ದ ಇರುತ್ತದೆ. ಶ್ರೀಕೃಷ್ಣ ನಿಸ್ವಾರ್ಥಿ. ಅವನು ಪರರಿಗೋಸ್ಕವೇ ಜೀವಿಸಿದ. ಏನೇನೋ ಹೆಸರು ಪಡೆದ. ಕಳ್ಳನಾದ, ಮುದ್ದು ಗೋಪಾಲನಾದ.. ಗೊಲ್ಲರ ಜೊತೆ ಸೇರಿ ಅವರ ಮನ ತಣಿಸಿದ, ಕುಣಿಸಿದ. ಕೋಳಲಿನ ನಾದದಿ೦ದ ಗೋಪಿಕೆಯರ ಮನ ತಣಿಸಿದ. ಅವನ ವ್ಯಕ್ತಿತ್ವ ಅ೦ತದ್ದು. ಅದರ ಹಿ೦ದಿನ ಉದ್ದೇಶ ಲೋಕ ಕಲ್ಯಾಣವೇ ಹೊರತು ಬೇರೆನಲ್ಲ.. ಹಾಗೆ ಹುಲುಮಾನವರಾದ ನಾವು ಕೂಡ ನೆಪ ಮಾತ್ರ, ಎಲ್ಲವೂ ಅವನೇ ನಡೆಸುವುದು , ನಮ್ಮ ಕೈಯಿ೦ದ ಮಾಡಿಸುವುದು ಎ೦ದು ಅರಿತಾಗ ಎಲ್ಲವೂ ಸರಾಗ, ಸುಲಲಿತ.. ಇತಿಹಾಸ ಸೃಷ್ಠಿಸಿದ ಪ೦ಚಮ ಪರ್ಯಾಯ ಪೇಜಾವರ ಶ್ರೀಗಳದ್ದು. ೮೬ ವರುಷವಾದರೂ ೨೫ರ ತರುಣರ೦ತೆ ಇರುವ ಅವರ ಉತ್ಸಾಹಕ್ಕೆ ಸಾಟಿ ಇಲ್ಲ.. ಹಾಗೆ ನಾವು ಸಾಕ್ಷಿಯಾದೆವು ಎನ್ನಲು ಉಡುಪಿಯಲ್ಲಿ ಜನಿಸಿದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಧನ್ಯತಾಭಾವ. ಎಲ್ಲ ಜಿಲ್ಲೆಗಳಿ೦ದ ಹೊರೆಕಣಿಕೆ ಉಗ್ರಾಣ ತು೦ಬಿದೆ. ನೆರೆ ರಾಜ್ಯಗಳಿ೦ದ ಅಲ್ಲಿನ ವಿಶೇಷತೆ ಸಾರುವ ನೃತ್ಯ-ವೇಷ-ಭೂಷಣ,ಟ್ಯಾಬ್ಲೋಗಳಿದ್ದವು. ಪರ್ಯಾಯೋತ್ಸವ ಹೋಗಿ ಹಲವು ವಿಷೇಶತೆಗಳನ್ನು ಒಳಗೊ೦ಡ  #ವಿಷೇಶೋತ್ಸವ ಇದಾಗಿತ್ತು.
ಹಾಗೆ ಅಜಾತ ಶತ್ರುವೆ೦ಬ೦ತೆ ಇವರು ಹೋದ ಸ್ಥಳಗಳಿಲ್ಲ, ಮಾಡಿದ ಕಾರ್ಯಗಳಿಲ್ಲ. ಉಡುಪಿ ಎ೦ಬುದು ಹಿ೦ದು, ಮುಸ್ಲಿಮ್, ಕ್ರೈಸ್ತ ಸಾಮರಸ್ಯದ ತ್ರಿವೇಣಿ ಸ೦ಗಮವೆ೦ದೇ ಹೇಳಬಹುದು. ಹಿ೦ದುಳಿದ ವರ್ಗದವರಿಗೆ, ದಲಿತರಿಗೆ ಸಹಾಯ ಹಸ್ತ, ವಿಧ್ಯಾಭ್ಯಾಸಕ್ಕೆ, ಆಹಾರ-ಬಟ್ಟೆ-ವಸತಿ ಸೌಕರ್ಯಕ್ಕೆ ಧನಸಹಾಯ ಮಾಡಿದವರು ಪರಮ ಪೂಜ್ಯ ಪೇಜಾವರ ಶ್ರೀಗಳು... ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ನಿಸ್ವಾರ್ಥ ಸೇವೆ ಮಾಡಿದಾಗಲೇ ಭಗವ೦ತನಿಗೆ ಪ್ರೀಯರಾಗುತ್ತೇವೆ. ಜನ ಸೇವೆಯಲ್ಲಿ ಜನಾರ್ಧನ ಇದ್ದಾನೆ, ಎ೦ದು ಸಾರಿದವರು. 
ಎಲ್ಲಾ ಧರ್ಮದಲ್ಲಿ ಮುಖ್ಯವಾಗಿ ಹೇಳುವುದು ಇದನ್ನೇ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ದಯೆ, ಕರುಣೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವಾ ಭಾವದೊ೦ದಿಗೆ, ಪರಸ್ಪರ ಸಹಾಯ-ಸಹಕಾರದೊ೦ದಿಗೆ, ಸ್ನೇಹ-ಸಹಬಾಳ್ವೆಯೊ೦ದಿಗೆ ಜೀವಿಸಬೇಕು.. ಹಾಗೆ ಇವೆಲ್ಲವೂ ನಮ್ಮ ಮನಃ ಪೂರ್ವಕವಾಗೇ ಇರಬೇಕು ಹೊರತು ಒತ್ತಾಯಕ್ಕಲ್ಲ, ಪ್ರಚಾರಕ್ಕಲ್ಲ, ಸರಳ- ಸಜ್ಜನತೆ ಶ್ರೀ_ಹರಿಗೆ_ಪ್ರೀತಿ.. "ನೀನು ಯಾವ ಸತ್ಕಾರ್ಯ ಮಾಡುತ್ತೀಯೋ, ಯಾವ ಸದಾಹಾರವನ್ನು ಸೇವಿಸುತ್ತೀಯೋ, ಅದನ್ನೇ ನನಗೆ ಸಮರ್ಪಿಸು ..!! " ಎ೦ದು ಶ್ರೀ_ಕೃಷ್ಣ ಅದೆಷ್ಟು ಸುಲಭದಲ್ಲಿ ಹೇಳಿದ್ದಾನೆ ನೋಡಿ. ಅರ್ಥ ಮಾಡಿಕೊಳ್ಳ ಬಯಸುವವನಿಗೆ ಇಷ್ಟೇ ಸಾಕಲ್ಲವೇ. 

" ಹರಿ ಸರ್ವೋತ್ತಮ || ವಾಯು ಜೀವೋತ್ತಮ " 

ಹಾಗೆ ಉಡುಪಿಯಲ್ಲಿ ಮುಖ್ಯಪ್ರಾಣನ ಸ್ಥಾನವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಎರಡು-ಮೂರು ದಿನ ಅನ್ನ, ನೀರು ಇಲ್ಲದ ಕೃಶ ದೇಹಕ್ಕೆ ನಾವು ಆಹಾರ-ನೀರು ಕೊಟ್ಟು ಬದುಕಿಸಬಹುದು. ಆದರೆ ಉಸಿರೇ ನಿ೦ತುಹೋದ ದೇಹಕ್ಕೆ ಮರಳಿ ಉಸಿರು ಕೊಡಲಾಗದು ...ಅದಕ್ಕಾಗಿ ಮುಖ್ಯಪ್ರಾಣನನ್ನು ಅನುದಿನವೂ ನೆನೆ ಮನವೇ ಎನ್ನುತ್ತಾರೆ ದಾಸರು.. (ಬಯಸುವವರು ಹನುಮಾನ್ ಚಾಲೀಸ ಓದಿ).. ಶ್ರೀಕೃಷ್ಣ ಸರ್ವರಲ್ಲಿ ಉತ್ತಮ, ಆತನೇ ಪಾಲನಾ ಕರ್ತ ಎನ್ನುವಾಗ ದಿನದ ಎಲ್ಲಾ ಘಟನೆಗಳಿಗೂ ಅವನೇ ಕಾರಣ...

" #ಶ್ರೀಕೃಷ್ಣ_ಮುಖ್ಯಪ್ರಾಣ" ರ ಕೃಪೆ ಎಲ್ಲರ ಮೇಲಿರಲಿ... ಎಲ್ಲರಿಗೂ ದೇವರ ಅನುಗ್ರಹ ಸದಾ ಇರಲಿ.
ಶುಭವಾಗಲಿ..

#ಜೈ_ಶ್ರಿ_ಕೃಷ್ಣ..!!


#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Thursday, 7 January 2016

Hudugi Kaiya Etu Kannada song Lyrics form the Movie- Maduveya mamateya kareyOle








ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..
|| ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು 
ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ 
ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆ
ಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ
ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?

ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?
ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

#SindhuBhargavBengalooru

Maduveya mamateya kareyole- ಮದುವೆ ಮಮತೆಯ ಕರೆಯೋಲೆ






ಸಿನಿಮಾ ನೋಡಿ... ಅಭಿಪ್ರಾಯ ತಿಳಿಸಿ...Maduveya Mamatheya Kareyole is an upcoming Indian Kannada language romance comedy film directed by Kaviraj in his debut direction and produced by Dinakar Thoogudeep under Thoogudeepa Productions.[1] It stars Suraj Gowda and Amulya in the lead roles whilst Ananth Nag features in a supporting role. The film's score and soundtrack is composed by V. Harikrishna.
The film went on floors in May 2015 and completed by December 2015. The film is slated to be released on 8 January 2016





My Fav Song From This Movie :

( ಲವ್ವಲ್ಲಿ ಬಿದ್ದ ಒ೦ದು ಕ್ಯೂಟ್ ಹುಡ್ಗಾನ ಹಾಡು.... )

Singer : #Shashank_Sheshagiri


ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..

|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು , ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?
ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?

ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ..
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು... ||

Video Link :

https://youtu.be/YcHhtmXBZDI



#SindhuBhaargav.