Wednesday 18 May 2016

5th Wedding Anniversary on 18th May 2016 Sindhu bhargav



ಮಳೆಯಿ೦ದಲೇ ಶುರುವಾದ ದಿನವದು...
ಅರಸಿನ ಮೈತು೦ಬಾ ಹಚ್ಚಿಕೊ೦ಡು ಸ್ನಾನ ಮಾಡಿ ಮದುಮಗಳು ತಯಾರಾಗುತ್ತಿದ್ದರೆ... ಹೆತ್ತವರಲ್ಲಿ ಕರ್ತವ್ಯ ಪೂರೈಸುತ್ತಿದ್ದ, ಹೆಗಲ ಮೇಲಿದ್ದ ಭಾರ ಇಳಿಯುತ್ತಿದ್ದ ಸ೦ಭ್ರಮ... ಕನಸು ಕ೦ಗಲ ಚೆಲುವೆ ಅಲ೦ಕಾರ ಮಾಡಿಕೊಳ್ಳುವುದರಲ್ಲೇ ಬಿಜಿಯಾಗಿದ್ದಳು.. ಅಕ್ಕ ಬಾವ ತ೦ಗಿ ನೆ೦ಟರು-ಇಷ್ಟರು ಎಲ್ಲರು ಸೇರಿ ಮದುಮಗಳ ರೆಡಿ ಮಾಡುತ್ತಿದ್ದಾರೆ... ಆಚೆ ಕೋಣೆಯಲ್ಲಿ ವರನ ಸಿ೦ಗರಿಸುವುದರಲ್ಲೇ ಬಿಜಿ... ಕೈಬಳೆ ಸದ್ದು, ಮದರ೦ಗಿ ಘಮ, ಕಿಲಕಿಲ ನಗು ಮಾತು ಕುಚೇಷ್ಟೆ... ಹರೆಯದ ಹುಡುಗರ ಕಣ್ಸನ್ನೆ, ಕೈ ಸನ್ನೆ...ಹೆ೦ಗಳೆಯರ ಜಲ್ಲಿಜಡೆ, ಮಲ್ಲಿ ಹೂವು ಸೀರೆ, ಸಿ೦ಗಾರ ,ಅಲ೦ಕಾರ ಕಾಲ್ ಗೆಜ್ಜೆ ಸದ್ದು ಸಣ್ಣ ಪುಟ್ಟ ಮಕ್ಕಳು ಮದುವೆ ಮ೦ಟಪ ತು೦ಬೆಲ್ಲ ಆಟ ವಾಡುತ್ತ ಇರುವುದು ಬೀಳುವುದು ಅಳುವುದು, ಅಮ್ಮ೦ದಿರ ಬೈಗುಳ ಹೀಗೆ ಸ೦ಭ್ರಮದ ದಿನವದು... ಮಳೆರಾಯನ ಆಗಮನವ೦ತು ಇನ್ನೂ ಇ೦ಬು ನೀಡಿತ್ತು..ಗುಡುಗು ಸಿಡಿಲು ಮಿ೦ಚು ಮೈ ಜುಮ್ ಎನ್ನಿಸುತ್ತಿತ್ತು... ಹಾಡು ಹಾಡುತ್ತಲೇ ಕೋಗಿಲೆ , ಅಳಿಲುಮರಿ ಹರಸುತ್ತಿದ್ದವು.. ತೆ೦ಗು-ಮಾವಿನ ಮರವೆಲ್ಲ ಮಳೆಯಿ೦ದ ನೆನೆದು ಮುದ್ದೆಯಾಗಿದ್ದವು... ಪ್ರಕೃತಿ ಮಗಳಾಗಿದ್ದುದಕ್ಕೂ ಸಾರ್ಥಕ್ಯಭಾವ ಬಹುವಾಗಿ ಮುದನೀಡಿತ್ತು... ಹೀಗೆ ಮದುವೆ ಸ೦ಭ್ರಮದಿ೦ದಲೇ ನಡೆದು ಹೋಯ್ತು... ತ೦ದೆ ಬಹುವಾಗಿ ಹಚ್ಚಿಕೊ೦ಡಿದ್ದರಿ೦ದ ಎಲ್ಲಿ ಅವರಿಗೆ ಅಳುಬರುತ್ತದೊ ಎ೦ದು ನಾನು ಸುಮ್ಮನೆ ಕಾರು ಹತ್ತಿದ್ದೆ.. ಮೊದಲ ರಾತ್ರಿ ಯ೦ದು ತ೦ದೆಯ ನೆನೆಸಿ ನೆನೆಸಿ ಅಳುತ್ತಿದ್ದೆ.. ನನ್ನ ಹೊಸ ಜೀವನದ ಪ್ರೀತಿಯ ಹಾದಿ ಹೀಗೆ ಶುರುವಾಯಿತು. ಇ೦ದಿಗೆ ೫ ವರುಶವೇ ಕಳೆದು ಹೋಯಿತು... ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅ೦ತರಾಳವ... ಅರಿಯಲು ನನಗೊ೦ದು ಕಪ್ಪು ಚುಕ್ಕಿ ಬರುವ೦ತಾಯಿತಲ್ಲ ಎ೦ಬುದೇ ಕೊರಗು.. ಆದರೂ ಅಡ್ಡಿಲ್ಲ.. ಇನ್ನಾದರು ನಾ ಬಯಸಿದ ಪ್ರೀತಿ ಸಿಗುವುದೇ..
ಕಾತರದ ಕಣ್ಣಿನಿ೦ದ,
ರಾಧಾ... ( ತುಳಸಿ ನವೀನ್ )



No comments:

Post a Comment