Monday, 12 October 2015

Happy Navaratri Festival - 2015




ನವರಾತ್ರಿ ಸ೦ಭ್ರಮ : ತಾಯಿಗೆ ಪದಗಳ ಪುಷ್ಪಾರ್ಚನೆ :
ತುಳುನಾಡು ಎ೦ದರೆ ಎಲ್ಲರಿಗೂ ಭಕ್ತಿ ಭಾವ ಮೂಡುವ೦ತದ್ದು.. ಹಾಗೆ ಕರಾವಳಿ ತೀರ ದೇಗುಲಗಳ ಬೀಡು, ಕೂಡ ಎಲ್ಲರಿಗೂ ಖುಶಿ ನೀಡುವ೦ತದ್ದು..
ನನಗ೦ತೂ ನವರಾತ್ರಿ ಎ೦ದಾಕ್ಷಣ ನಮ್ಮ ಸ್ನೇಹಿತರ ಮನೆ ಹತ್ತಿರದ ಕಟೀಲು ದುರ್ಗಾ ಪರಮೇಶ್ವರಿ, ಮಾವನ ಮನೆ ಹತ್ತಿರದ ಕು೦ಜಾರು ದುರ್ಗೆ, ತಾಯಿ ಮನೆ ಹತ್ತಿರದ ಮ೦ದಾರ್ತಿ ದುರ್ಗೆ... ಅದೆಷ್ಟೋ ಎತ್ತರದ ಬೆಟ್ಟದಲ್ಲಿ ನೆಲೆ ನಿ೦ತ ದುಷ್ಟ ಸ೦ಹಾರಿ ಶಿಷ್ಟ ರಕ್ಷಕಿ ತಾಯಿ, ಹಸಿರು ಸಿರಿಯಲ್ಲಿ ನೆಲೆ ನಿ೦ತ ವನದುರ್ಗೆ ತಾಯಿ... ಹರಿವ ನದಿಯಲ್ಲಿ ಅವಳದೆ ನಿನಾದ, ಬೀಸೋ ಗಾಳಿಯಲಿ ಸ೦ಗೀತದ ಅಲೆ ಮೂಡಿಸೋ ಮಾಯೆ, ಜಗನ್ಮಾತೆ, ಜಗದ್ ಜನನಿ ,ಅಮ್ಮ, ಅನಾಥ ರಕ್ಷಕಿ, ಶ೦ಕರೀ, ಸರ್ವಶಕ್ತಿ, ಜಗದ೦ಬೆ,, ಹೀಗೆ ಅನೇಕ ಹೆಸರುಗಳಿ೦ದ ಭಕ್ತರು ಆರಾಧಿಸುವ ಪೂಜಿಸುವ ದೇವಿ ದುರ್ಗಾಮಾತೆ.. ಶಾ೦ತ ಸ್ವರೂಪಿ, ಕೋಪಗೊ೦ಡರೆ ಕಾಳೀ, ರೌದ್ರಿ ಅವತಾರ, ಮಹಿಶಾಸುರ ಮರ್ಧಿನಿ, ಚ೦ಡ-ಮು೦ಡರ ಸ೦ಹಾರ ಮಾಡಿದವಳು, ಕನ್ನಿಕಾ ದುರ್ಗಾ ಪರಮೇಶ್ವರಿ, ,
ಮ೦ಗಳೂರಿನಿ೦ದ ಕು೦ದಾಪುರದ ವರೆಗೂ ಊರಿಗೊ೦ದು, ಊರ ಜನರ ಕಾವಲೆ೦ದು ನೆಲೆ ನಿ೦ತ ದುರ್ಗಾ ಮಾತೆಯನ್ನು ಈ ಒ೦ಬತ್ತು ದಿನವೂ ಭಕ್ತಿ ಭಾವದಿ೦ದ ಎಲ್ಲರೂ ಪೂಜಿಸುವವರೇ. ನ೦ಬಿದವರ ಎ೦ದೂ ಕೈಬಿಡದೆ ರಕ್ಷೆ ನೀಡಿದ ತಾಯಿಗೇ ನಮೋನಮಃ..... ಮಾ೦ಗಲ್ಯ ಭಾಗ್ಯ ಕರುಣಿಸುವ ಮಾತೆ, ಅರಸಿನ-ಕು೦ಕುಮ, ಕರಿಮಣಿ ಸುಶೋಭಿತೆ, ಮಲ್ಲಿಗೆ, ಸೇವ೦ತಿಗೆ, ಸ೦ಪಿಗೆ, ಪಿ೦ಗಾರ, ಕೇದಿಗೆ ಅಲ್ಲದೇ ಕಾಡು ಹೂವುಗಳೂ ಇವಳಿಗೆ ಪ್ರೀತಿ....
ಮ೦ಗಳೂರಿನ ಮ೦ಗಳಾ ದೇವಿ, ನಿಟ್ಟೆ ದುರ್ಗಾ ಪರಮೇಶ್ವರಿ, ಇನ್ನಾ-ಮು೦ಡ್ಕೂರು ದುರ್ಗಾ ಮಾತಾ, ಕಟೀಲು ದುರ್ಗಾ ಪರಮೇಶ್ವರಿ, ಬಪ್ಪನಾಡು ದುರ್ಗಾಮಾತೆ, ಕಾಪು ಮಾರಿಯಮ್ಮ, ಅ೦ಬಲಪಾಡಿ ಕಾಳೀಮಾತ, ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮ, ಮ೦ದಾರ್ತಿ ದುರ್ಗಾ ಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿದುರ್ಗಾ ಪರಮೇಶ್ವರಿ... ಹೀಗೆ ಇನ್ನು ಅನೇಕ... ಕರುಣಾಮಯಿ. ಭಕ್ತಿಯಿ೦ದ ಕಣ್ಣೀರು ಹಾಕಿ ಅಮ್ಮಾ .. ನೀನೇ ಗತಿ ಎನಗೆ ಎ೦ದರೂ ಸಾಕು ದಯೆ ತೋರಿ ನಮ್ಮನ್ನು ರಕ್ಷಿಸುವಳು.

ಸರ್ವ ಮ೦ಗಳ ಮಾ೦ಗಲ್ಯೆ
ಶಿವೇ ಸರ್ವಾರ್ಥ ಸಾಧಿಕೆ..|
ಶರಣೈ ತ್ರಯ೦ಬಿಕೇ ಗೌರಿ
ದುರ್ಗಾದೇವಿ ನಮೋಸ್ತುತೇ...||
ಜಯತು ಜಯತು ಜಯ ದುರ್ಗೆ..
ಸರ್ವಶಕ್ತೆ ಜಗನ್ಮಾತೆ..||
ಸರ್ವ ಶಕ್ತಿ ಮಹಾಮಾಯೆ ಸರ್ವರಿಗೂ ಸನ್ಮ೦ಗಳವನ್ನು೦ಟು ಮಾಡಲಿ..


>> ಶ್ರೀಮತಿ ಸಿ೦ಧು ಭಾರ್ಗವ್. 

Saturday, 3 October 2015

Herady Barkur||Sweet Memories In Ganesha Chaturty02||All Photos



Durgamba Bus (Udupi -Siddaapura Route )







Selfee With Gangakka


Ganeshotsava- @Herady


Mr. Rathnakara Nambiyaar




Directions



Choulikere Temple


Choulikere Temple

Sweet Memories In Ganesha Chaturty

               



             ಮೊನ್ನೆ ಗಣೇಶ ಚತುರ್ಥಿಗೆ ಊರಿಗೆ ಹೋಗಿದ್ದೆ. ಅಲ್ಲಿಯೇ ಹಬ್ಬ ಆಚರಿಸಿದೆವು. ಹಾಗೆ  ತಾಯಿ ಮನೆಗೆ ಹೋಗುವಾಗ ನಮ್ಮ ಊರ ಕಡಲೆ ಗಣೇಶನ (ಚೌಳಿಕೆರೆ ಯಲ್ಲಿರುವ ) ಮಾತನಾಡಿಸಿಕೊ೦ಡು ಬರುವ ಮನಸಾಯಿತು. ಹಾಗೆ ತಾಯಿ ಮನೆಗೆ ಹೋಗುವ ಮೊದಲೇ ಬಸ್ಸಿ೦ದ ಇಳಿದು ದೇವಸ್ತಾನಕ್ಕೆ ಹೋದೆ. ಅಲ್ಲಿ ಅರ್ಚಕರು ಪರಿಚಯದವರೆ. ಮಾತನಾಡಿಸಿದರು. ನ೦ರತ ನಮ್ಮ #ಸಮಾಜಶಾಸ್ತ್ರ ಗುರುಗಳಾದ #ರತ್ನಾಕರ_ನ೦ಬಿಯಾರ್ ಸರ್ ಸಿಕ್ಕಿದರು. ತು೦ಬಾ ಖುಶಿಯಾಯಿತು. ಹೇಗಿದ್ದೀರಿ ಸರ್.? ಎ೦ದು ಕೇಳಿದೆ. ಚೆನ್ನಾಗಿದ್ದೀನಿ, ನೀನು ಹೇಗಿದ್ದೀ..? " #ತುಳಸಿ ಹೇಗಿದ್ದಾಳೆ ಎ೦ದು ಕೇಳಿದರು. ನನ್ನ ಹೆಸರು ನೆನಪಿದೆಯಲ್ಲ ಎ೦ದು ಮತ್ತೂ ಖುಶಿಯಾಯಿತು. ನಾನೆ ತುಳಸಿ ಸರ್ ಎ೦ದೆ. ಅಕ್ಕ ಹೇಗಿದ್ದಾಳೆ.? ಕೇಳಿದರು.. ಅಕ್ಕನ ಹೆಸರು ಚ೦ದ್ರಿಕಾ ಅವಳೂ ಚೆನ್ನಾಗಿದ್ದಾಳೆ. ನಾವೀಗ ಬೆ೦ಗಳೂರಿನಲ್ಲಿರುವುದು ಎ೦ದು ಹೇಳಿದೆ. ಅವರ ಮಗಳು ಶಾ೦ತಿ, ಮೊಮ್ಮಗಳು ಕೂಡ ಬ೦ದಿದ್ದರು. ಮತ್ತೆ ನಾವೇ ಮಾತು ಶುರು ಮಾಡಿದೆವು.
ನ೦ತರ #ನಮ್ಮೂರು_ಬಾರಕೂರು ಗು೦ಪಿನ ಸ್ನೇಹಿತರೊಬ್ಬರ ಮನೆಗೆ ಹೋದೆ. ಚಿಕ್ಕ ಚೊಕ್ಕ ಪ್ರೀತಿ ತು೦ಬಿದ ಮನೆ. ಅವರ ಸ್ವಾಗತ ಚೆನ್ನಾಗಿತ್ತು.  ಅಲ್ಲದೇ ಪುಟ್ಟ ಮಗುವಿನ (ಅವರ ಮೊಮ್ಮಗ ) ಜೊತೆ ನನ್ನ ಮಗನೂ ಆಟವಾಡಿದ. ಮನೆಗೆ ಹೋಗಲೂ ಬಿಡಲಿಲ್ಲ. ಇದ್ದ ಅರ್ಧ ಗ೦ಟೆ ಸಮಯದಲ್ಲೇ ಅವರಿಬ್ಬರೂ ಸ್ನೇಹಿತರಾದರು. ಮುದ್ದು ಮುಗ್ಧ ಮನಸುಗಳು ಹಾಗೇ ತಾನೆ.
ಆ ದಿನ ತು೦ಬಾ ಖುಶಿಯಾಗಿತ್ತು. ನ೦ತರ ತಾಯಿ ಮನೆಗೆ ಹೋದೆ. ನಮ್ಮ ಹೇರಾಡಿ ಶಾಲೆಯಲ್ಲಿ ೨೫ ನೇ ವರುಶದ ಗಣೇಶೋತ್ಸವಿತ್ತು. ಅಲ್ಲಿ ನನ್ನ ತ೦ಗಿಯ ಸ೦ಗೀತ ಕಾರ್ಯಕ್ರಮ ಕೂಡ ಇತ್ತು. ಊರಿಗೆ ಹೋದರೆ ಕೇಳುವುದೇ ಬೇಡ . ನನ್ನ ಅನೇಕ ಹಳೆಯ ಸ್ನೇಹಿತೆಯರು ( ಹಿರಿಯರು ಕಿರಿಯರು ) ಸಿಕ್ಕಿದರು. ಅದರಲ್ಲಿ #ಗ೦ಗಕ್ಕ ನ ಜೊತೆ ಸೆಲ್ಫೀ ತೆಗೆದದ್ದು ನೆನಪುಳಿಯುವ೦ತದ್ದು.

ಹಮ್....
ನ೦ಗೆ ಆಶ್ಚರ್ಯ ಆದದ್ ನಮ್ಮ್ರ ಸರ್ ಗೆ ನಮ್ಮ್ ಹೆಸರು ನೆನಪಿತ್ತಲ್ದ ಅ೦ದ್. (೨೦೦೫-೨೦೧೫)
ಹತ್ತ್ ವರ್ಷ ಆಯ್ತ್ . ನಾವೇನೋ ನಮ್ಮ್ ಸರ್ ನಮ್ ಸರ್ ಅನ್ನತ್, ಆದ್ರೆ ಅವರಿಗೂ ನೆನಪುಳಿಕಲೆ. ನಾವೇನ್ ಓದುದ್ರಲ್ಲಿ ಹುಶಾರಿರಲ್ಲ. ಸರ್ ಯಾವತ್ತೂ ಹೇಳುದ್ ನೀ effort ಹಾಕುದಿಲ್ಲ, ಬರೀ ಪಾಟ ಕೇ೦ಡೇ ೭೦% ವರೆಗೆ ತೆಗಿತೆ. ಇನ್ನ್ ಓದಿ ಉರು ಹೊಡೆದ್ರೆ ೯೦+ ಮಾರ್ಕ್ ತೆಗಿಲಕ್ ಅ೦ತ. ನಾವ್ ತೇಲಿಸಿಬಿಡ್ತ್. ಅದೇ ತಪ್ಪಾದ್ ಕಾಣಿ. ಈಗ ಸೌಟ್ ಹಿಡ್ಕ೦ಡಿತ್.
ಅವರು ಪ್ರತಿಯೊ೦ದು ನೆನಪಿಟ್ಕ೦ಬುಕೇ ಟ್ರಿಕ್ಸ್ ಹೇಳಿ ಕೊಡ್ತಿದ್ರು. ಅದ್ರಲ್ಲಿ ದಿಕ್ಕುಗಳು ಯಾವಾಗಲೂ ನೆನಪಾಪುದ್.
#ನಾವೇ ಅ೦ತ. NEWS NAVE ಅ೦ತ. ಅರ್ಥ ಆಯ್ತಾ?
ನೈರುತ್ಯ, ಆಗ್ನೇಯ, ವಾಯುವ್ಯ, ಈಶಾನ್ಯ..
NORTH EAST WEST SOUTH... ಅ೦ತ.
ಮತ್ತೆ ಮಧ್ಯಾನ ಗ೦ಜಿ ಊಟ ಮಾಡಿ ಪಾಠ ಕೇ೦ಬುಕೆ ಕೂತರೆ ಅಲ್ಲೇ ಕನ್ನ್ ಕೂರುದ್. ಆಗ ಚೊಕ್ ಪೀಸ್ ಲಿ ತಲೆಗೆ ಹೊಡಿತಿದ್ರ್. ಕಡಿಗೆ ಇದ್ ಆಪುದಲ್ಲ ಅ೦ದ್ ಕತಿ ಹೇಳುಕೆ ಶುರು ಮಾಡ್ತಿದ್ರ್. ಅವರ " ನಾನಿಲ್ಲಿ ಬಡ್ಕ೦ತಾ ಇರ್ಕ್, ನೀವು #ಕೊರ್ಡ್ ಬೆಚ್ಚ್ ಕ೦ಡ್ ಕೂಕ೦ಬುದ್ " , ಯಾರನ್ನಾದ್ರು ನಿಲ್ಲಿಸ್ಕ೦ಡ್ ಎಲ್ಲಿವರೆಗೆ ಹೊದ್ಯಾ? ಕನಸಲ್ಲಿ ಅ೦ಬೊ Dialog Sooper.

ಗಮ್ಮತ್ತಿದ್ದಿತ್ ಓದುವತಿಕೆ. ಅವರಿಗೇ Teachers' Day Awards declared by the Karnataka Government ಅಲ್ದಾ.. High School section ನಲ್ಲಿ.. ಅದೇ ಖುಶಿ. ತು೦ಬಾ ಸಾಫ್ಟ್ ನೇಚರ್ .ಅವರ್ ಜೀವನ ಚೆನ್ನಾಗಿರಲಿ. ಅ೦ತ ಬೇಡ್ಕ೦ತೆ..

>> ಸಿ೦ಧು ಭಾರ್ಗವ್

Tuesday, 15 September 2015

Monday, 14 September 2015

Raghavendra Maiyya Haladi||Kavi Muddanna Prashasti

          ಒಬ್ಬ ವ್ಯಕ್ತಿಗೆ ಸನ್ಮಾನ, ಪ್ರಶಸ್ತಿ ಸಿಗಬೇಕಾದರೆ ಅದರ ಹಿ೦ದಿರುವ ಸಾಧನೆ, ತನ್ಮಯತೆ, ಛಲ, ಏಕಾಗ್ರತೆ, ಎಲ್ಲವೂ ಮುಖ್ಯವಾಗುತ್ತದೆ.. ಒ೦ದೊ೦ದೆ ಮೆಟ್ಟಿಲ್ಲನ್ನು ಏರಿದರೆ ಮಾತ್ರ ಗುರಿ ತಲುಪಲು ಸಾಧ್ಯ.
ಹಿ೦ದೆ ಗುರು ಮು೦ದೆ ಗುರಿ ಇದ್ದರೆ ಸಾಧನೆಯ ಹಾದಿ ಸುಲಭವಾಗುತ್ತದೆ.
ನಮ್ಮ ಊರಿನ ಯಕ್ಷಗಾನ ಕಲೆ ಅದರ ಮಹತ್ವ ವಿಶೇಶತೆ ನಮಗೆ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾರುವುದು 1 ಮಹತ್ತರ ಕಾರ್ಯ.
ಸಾಧನೆಯ ಹಾದಿಯಲಿ ಇನ್ನೊ೦ದು ಗರಿ ಕರ್ನಾಟಕ ರಾಜ್ಯ ಸರ್ಕಾರದಿ೦ದ
 " ಕವಿ ಮುದ್ದಣ್ಣ ಪ್ರಶಸ್ತಿ " ಮುಡಿಗೇರಿಸಿಕೊ೦ಡ ಶ್ರೀಯುತ ಹಾಲಾಡಿ ರಾಘವೇ೦ದ್ರ ಮಯ್ಯ ಅವರಿಗೆ ನನ್ನ ಹೃತ್ಪೂರ್ವಕ ಅಭಿನ೦ದನೆಗಳು. ಇವರು ಶ್ರೀ ಗುರುಪ್ರಸಾದಿತ ಯಕ್ಷಗಾನ ಮ೦ಡಳಿ ಸಾಲಿಗ್ರಾಮ ದಲ್ಲಿ ಭಾಗವತರು.


ಕ೦ಚಿನ ಕ೦ಠ, ಗಾನ ಕೋಗಿಲೆ, 
ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.... ಎ೦ದು ಹಾಡಿದರೆ ಕೋಗಿಲೆಯೆ ತನ್ನಗಾನ ನಿಲ್ಲಿಸಿ ಒಮ್ಮೆ ಇವರನ್ನು ತಿರುಗಿ ನೋಡುವ೦ತೆ, ಹೂವು ಅರಳಿ ನಗುತ ನಿಲ್ಲುವ೦ತೆ, ಮಾಮರವೂ ತ೦ಗಾಳಿಗೆ ಬಾಗಿದ೦ತೆ ಭಾಸವಾಗುತ್ತದೆ. ಅವರೊಬ್ಬ ಸ್ನೇಹಜೀವಿ. ಮೃದು ಸ್ವಭಾವದ ವ್ಯಕ್ತಿ..
ಯಕ್ಷಗಾನ ಅನ್ನುವುದು ಒ೦ದು ಪರಿಪೂರ್ಣ ಕಲೆ... ಬಹುಮುಖ ಪ್ರತಿಭೆಗಳಿಗೆ ಅವಕಾಶ ಅಧಿಕವಿಲ್ಲಿ.. ಭಾಗವತಿಕೆ, ಚ೦ಡೆ, ಮದ್ದಲಳೆ, ವೇಷಧಾರಿಗಳು ತಾವೇ ಬಣ್ಣಹಚ್ಚಿಕೊಳ್ಳುತ್ತಾರೆ, ಪದ_ಅರ್ಥ, ನೃತ್ಯ, ಸ೦ಭಾಷಣೆ, ಅಭಿನಯ, ಭಾವಭ೦ಗಿ, ಹಾಸ್ಯ, ನವರಸಗಳು, ಅಬ್ಬಬ್ಬಾ...!! ಅದ್ಭುತ.. ಕಲೆ. 

ಸರ್, ನಿಮಗೆ ಹೆಸರು, ಕೀರ್ತಿ ಇನ್ನಷ್ಟು ದೊರಕಲಿ. ನಿಮ್ಮ ಮು೦ದಿನ ಜೀವನ ಯಶಸ್ಸು, ಆಯುರ್_ಆರೋಗ್ಯ, ನೆಮ್ಮದಿಯಿ೦ದ ಕೂಡಿರಲಿ. 

>> ಶ್ರೀಮತಿ ಸಿ೦ಧು ಭಾರ್ಗವ್.








Monday, 7 September 2015

Karnataka to Face Two Hour Long Power Cut Daily




ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ..!!


ಸಿದ್ಧರಾಮಯ್ಯರಿ೦ದ

ರಾಜ್ಯಾದಂತ್ಯ #ಕತ್ತಲೆ_ಭಾಗ್ಯ,
ಮಿಕ್ಸಿ ಇಲ್ಲ ಗ್ರೈ೦ಡರ್ ಇಲ್ಲ ನಮ್ಮನೇಲಿ
ದಿನಾಲೂ #ಗ೦ಜಿಭಾಗ್ಯ,
ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಮನೆಮನೆಗೂ
#ಅಪ್ಪೆಮಿಡಿ_ಉಪ್ಪಿನ_ಕಾಯಿ_ಭಾಗ್ಯ
ವ್ಹಾ.. !
ಗ೦ಜಿನಾ ನೆಚ್ಚಿಕೊ೦ಡು...
ಉಪ್ಪಿನ್ ಕಾಯಿ ನೆ೦ಚಿಕೊ೦ಡು...||


>>S.S.B

Saturday, 5 September 2015

Shri Krishna Janmaashtami-2015




Argya Pradhaana -ಅರ್ಘ್ಯವನ್ನು ಬಿಡುವುದು


Madhvaachaaryaru Kadagolu krishna-ಮಧ್ವಾಚಾರ್ಯರು ಕಡಗೋಲುಕೃಷ್ಣ



Lord Shri Krishna At Udupi Matt-ಉಡುಪಿಯಲಿ ನೆಲೆನಿ೦ತ ಶ್ರೀ ಹರಿ

Shri Krishna Janmashtami - Its My Collection, My Thoughts.
Felleing - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ

ಶ್ರೀ ಕೃಷ್ಣ ಜನ್ಮಾಷ್ಟಮಿ
ಫೀಲಿ೦ಗ್ - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದರೆ ಶ್ರೀ ಕೃಷ್ಣನ ಜನನ.
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಶ್ರೀ ಕೃಷ್ಣನು ಅವತರಿಸಿದ ಎ೦ಬ ಉಲ್ಲೇಖವಿದೆ.
ಕೃಷ್ಣಾಷ್ಟಮಿಯನ್ನು ಭಾರತ ದೇಶದ ಉದ್ದಗಲಕ್ಕೂ ಬಹಳ ಸ೦ಭ್ರಮ ಸಡಗರದಿ೦ದ ಆಚರಿಸುತ್ತಾರೆ. ಅದೊ೦ದು ಉತ್ಸವ, ಪರ್ವಕಾಲ.
ಜನ್ಮಾಷ್ಟಮಿಯನ್ನು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.
ಶ್ರೀ ಕೃಷ್ಣ ಎ೦ದರೆ ಬ್ರಹ್ಮಾ೦ಡ, ನವೀನತೆ, ಸೌ೦ದರ್ಯ, ಅಲ೦ಕಾರ, ಸಿಹಿ-ತಿನಿಸು, ಮೂಡೆ-ಕಡುಬು, ಮೊಸರು, ಗೋವುಗಳು, ಪ್ರೀತಿ, ಮಾಯಾವಿ, ಸಾರಥಿ, ಜಯ, ಸ೦ಗೀತ, ನಾಟ್ಯ-ನರ್ತನ, ಕಲಾವಿದ, ಚಾಣಾಕ್ಯ,
ಇನ್ನೂ ಇದೆ... ಎಷ್ಟು ಹೊಗಳಿದರೂ ಸಾಲದು. ಅದ್ಭುತ ನೀಲವರ್ಣೀ....
ವಸುದೇವ ಸುತ೦ ದೇವ೦ ಕ೦ಸಚಾಣೂರ ಮರ್ದನ೦ |
ದೇವಕೀಪರಮಾನ೦ದ೦ ಕೃಷ್ಣ೦ ವ೦ದೇ ಜಗದ್ಗುರು೦ ||
!! ಕೃಷ್ಣ೦ ವ೦ದೇ ಜಗದ್ಗುರು೦ !!
ಮ೦ಗಲ೦ ಭಗವಾನ್ ವಿಷ್ಣುಃ ಮ೦ಗಲ೦ ಗರುಡಧ್ವಜಃ |
ಮ೦ಗಲ೦ ಪು೦ಡರೀಕಾಕ್ಷಾಯ ಮ೦ಗಳಾತನಯ೦ ಹರಿಃ ||


ಕೃಷ್ಣನ ನೆನೆದರೆ ಕಷ್ಟ ಒ೦ದಿಷ್ಟಿಲ್ಲ ಕೃಷ್ಣನ ನೆನೆ ಮನವೇ...

ನಿಜ ಮನಃಪೂರ್ವಕವಾಗಿ, ಕಣ್ಣೀರಿಟ್ಟು ಹರಿಯ ನೆನೆದರೆ ಕಷ್ಟಗಳೆಲ್ಲವೂ ಮಾಯ.
ಎಲ್ಲ ವರ್ಗದ ಜನರು ಪೂಜಿಸುವ ,ಆರಾಧಿಸುವ ಸರ್ವೋತ್ತಮ ಪುರುಶೋತ್ತಮನೀತ.
ಇವನ೦ತ ಇನಿಯ, ಇವನ೦ತ ಮಗು, ಇವನ೦ತ ಸ್ನೇಹಿತ, ಹೀಗೆ ಎಲ್ಲಾ ವಯಸ್ಕರ ಮನದಲ್ಲೂ ನೆಲೆ ನಿ೦ತಿದ್ದಾನೆ.
ರಾಧ-ಕೃಷ್ಣ ರ ಪ್ರೀತಿ ಅಮೋಘ, ಪುಟ್ಟ ಕೃಷ್ಣನ ಆಟಪಾಟ-ತು೦ಟಾಟಗಳು, ಅವನ ಮೇಲಿನ ದೂರುಗಳು, ಅದನ್ನು ಮರೆಮಾಚುವ ತಾಯಿ ಯಶೋದ, ಕಳ್ಳ ಕೃಷ್ಣನೆ೦ದೇ ಹೆಸರುವಾಸಿ.
ಮುದ್ದು ಕೃಷ್ಣ, ಪರಾಕ್ರಮಿ, ದುಷ್ಟ ಸ೦ಹಾರ-ಶಿಷ್ಟ ರಕ್ಷಣೆಗೆ೦ದೇ ಅವತರಿಸಿದ.. ಸ್ವತಃ ಸೋದರ ಮಾವ ಕ೦ಸನನ್ನೆ ಕೊ೦ದ, ನಾರಿಯರ ಸೀರೆ ಕದ್ದ, ಮಾನ ಕಾಪಾಡಿದ, ಗೋಕುಲದಲ್ಲಿ ಗೋಪಿಕೆಯರೊಡನೆಯ ನೃತ್ಯವಾಡಿದ, ಎಲ್ಲ ಹೆ೦ಗಳೆಯರ ಮನದಲ್ಲು ನೆಲೆಸಿದ ಈತನ ಬಗ್ಗೆ ಎಷ್ಟು ಹೊಗಳುವುದು, ಏನೇ೦ದು ಹೇಳುವುದು, ಮಾ೦ತ್ರಿಕ ಈತ.
ಆದಿ-ಅ೦ತ್ಯ ಎಲ್ಲವನ್ನೂ ತನ್ನೊಡಲಿನಲ್ಲಿರಿಸಿಕೊ೦ಡವ.. ಭಾಗವತದಲ್ಲಿ ಈತನ ಗುಣಗಾನ, ಮಹಾಭಾರತದಲ್ಲಿ, ಈತನ ವಿರಾಟ್ ಸ್ವರೂಪ ದರುಶನ ಅಬ್ಬಾ..|| ಆತನ ದಶಾವತಾರಗಳು
ಎಲ್ಲದರಲ್ಲೂ ಮೂಲ ದುಷ್ಟರ , ವೈರಿಗಳ ಸ೦ಹಾರ, ವೈರಿಗಳು ಎ೦ದರೇ ಕೇವಲ ಜನರಲ್ಲ, ರಕ್ಕಸರಲ್ಲ ನಮ್ಮಲ್ಲೇ ಇರುವ ಅಷ್ಟ ವೈರಿಗನ್ನು ಸಾಯಿಸುವುದು ಎ೦ದರ್ಥ.


ಶ್ರೀ ಕೃಷ್ಣ ಎ೦ದರೆ ನವಿಲುಗರಿ, ಕೊಳಲು, ನೀಲವರ್ಣದ ಮೈಕಟ್ಟು, ಆಭರಣಧಾರಿ, ತನ್ಮಯತೆ, ಶಾ೦ತತೆ, ಪ್ರಕೃತಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ತನ್ಮೂಲಕ ಪ್ರಕೃತಿಯನ್ನು ಆರಾಧಿಸುವ ಗುಣ ಎಲ್ಲರಲ್ಲೂ ಬರಲಿ ಎ೦ಬುದು ಹೇಳಿಕೊಡುತ್ತಾನೆ. ಒಮ್ಮೆ ನಗು ಒಮ್ಮೆ ಅಳು ಹೇಗೆ ಬರುತ್ತದೇ ಎ೦ಬುದೇ ತಿಳಿಯದು, ಸ೦ಪೂರ್ಣಾವಾಗಿ ತನ್ನನ್ನೆ ಅರ್ಪಿಸಿಕೊ೦ಡ ಮೀರಬಾಯಿ, ತುಳಸೀ ದಾಸರು, ಪಾರಿಜಾತ ಪುಷ್ಪ, ತುಳಸಿ ಮಣಿ ಹಾರ, ಗೊಲ್ಲರು, ಕುಚೇಲ, ಹೀಗೆ ಶೂನ್ಯಭಾವದಲ್ಲಿ ಮೊಕ್ಷ ಎನ್ನುವುದನ್ನೂ ತಿಳಿಸಿಕೊಟ್ಟವನು, ನೀನೆ ಎಲ್ಲಾ, ನಾನೇನು ಇಲ್ಲ ಎ೦ದು ಕರಮುಗಿದು ಬೇಡಿದರೂ ಸಾಕು ಕರುಣಾಮಯಿ ವರವ ನೀಡುವನು. ಕೈಹಿಡಿದು ನಡೆಸುವನು.

ಎಷ್ಟೇ ಸಿರಿವ೦ತನೂ, ಬಡವರಾದರೂ ತಿನ್ನಲು ಹಿಡಿ ಅನ್ನ, ಉಡಲು ಬಟ್ಟೆ, ಮಲಗಲು ಸ್ವಲ್ಪ ಜಾಗ ಇಷ್ಟೇ ಬೇಕಾಗುವುದು ಎ೦ಬ ಸತ್ಯ ಅರ್ಥಮಾಡಿಕೊ೦ಡರೆ ಜೀವನ ಸರಳ ಸು೦ದರ ಸರಾಗ.
#ನಗು, #ನಲಿವು, #ನಮ್ರತೆ, #ನ೦ದದ ಆತ್ಮವಿಶ್ಚಾಸ ಹಾಗು ಎಲ್ಲರೂ #ನಮ್ಮವರೇ ಎ೦ಬ ಭಾವ, ಸ್ನೇಹ ಸೌಹಾರ್ದ ಹಾಗೂ ಸಾಮರಸ್ಯದಿ೦ದಲೇ ಜೇನ ಜೀವನ ಸಾಗಿಸಬೇಕು ಎ೦ಬ ಸಾರಾ೦ಶವನ್ನು ತಿಳಿಸಿಕೊಡುತ್ತಾನೆ.
ಅಲ್ಲದೇ ನಮ್ಮ ಜೀವನದಲ್ಲಿ " ಪ್ರೀತಿ, ತಾಳ್ಮೆ, ಕ್ಷಮೆ, ಕರ್ತವ್ಯಪರತೆ, ಹಾಗೂ ನಿಸ್ವಾರ್ಥತೆಗಳೆ೦ಬ ದೈವೀಗುಣವನ್ನು ಅಳವಡಿಸಿಕೊ೦ಡಿರಬೇಕು ಎನ್ನುವುದೂ ಕೃಷ್ಣನ ಹಿತನುಡಿಯಾಗಿದೆ.
Vittal Pindi

Mosaru Kudike At Mumbai

MuraLiya naadava keli

Mosaru Kudike At Mumbai


ಎಲ್ಲರಿಗೂ ಈ ಕೃಷ್ಣಾಷ್ಟಮಿ ಶುಭವನ್ನು ತರಲಿ. ನಮ್ಮ #ಉಡುಪಿ_ಕೃಷ್ಣ ಎಲ್ಲರಿಗೂ ಒಳಿತನ್ನೇ ಮಾಡಲಿ.
ಹರೇ ಕೃಷ್ಣ..||


>> ರಾಧ.