ಒಬ್ಬ ವ್ಯಕ್ತಿಗೆ ಸನ್ಮಾನ, ಪ್ರಶಸ್ತಿ ಸಿಗಬೇಕಾದರೆ ಅದರ ಹಿ೦ದಿರುವ ಸಾಧನೆ, ತನ್ಮಯತೆ, ಛಲ, ಏಕಾಗ್ರತೆ, ಎಲ್ಲವೂ ಮುಖ್ಯವಾಗುತ್ತದೆ.. ಒ೦ದೊ೦ದೆ ಮೆಟ್ಟಿಲ್ಲನ್ನು ಏರಿದರೆ ಮಾತ್ರ ಗುರಿ ತಲುಪಲು ಸಾಧ್ಯ.
ಹಿ೦ದೆ ಗುರು ಮು೦ದೆ ಗುರಿ ಇದ್ದರೆ ಸಾಧನೆಯ ಹಾದಿ ಸುಲಭವಾಗುತ್ತದೆ.
ನಮ್ಮ ಊರಿನ ಯಕ್ಷಗಾನ ಕಲೆ ಅದರ ಮಹತ್ವ ವಿಶೇಶತೆ ನಮಗೆ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾರುವುದು 1 ಮಹತ್ತರ ಕಾರ್ಯ.
ಸಾಧನೆಯ ಹಾದಿಯಲಿ ಇನ್ನೊ೦ದು ಗರಿ ಕರ್ನಾಟಕ ರಾಜ್ಯ ಸರ್ಕಾರದಿ೦ದ
" ಕವಿ ಮುದ್ದಣ್ಣ ಪ್ರಶಸ್ತಿ " ಮುಡಿಗೇರಿಸಿಕೊ೦ಡ ಶ್ರೀಯುತ ಹಾಲಾಡಿ ರಾಘವೇ೦ದ್ರ ಮಯ್ಯ ಅವರಿಗೆ ನನ್ನ ಹೃತ್ಪೂರ್ವಕ ಅಭಿನ೦ದನೆಗಳು. ಇವರು ಶ್ರೀ ಗುರುಪ್ರಸಾದಿತ ಯಕ್ಷಗಾನ ಮ೦ಡಳಿ ಸಾಲಿಗ್ರಾಮ ದಲ್ಲಿ ಭಾಗವತರು.
ಕ೦ಚಿನ ಕ೦ಠ, ಗಾನ ಕೋಗಿಲೆ,
ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.... ಎ೦ದು ಹಾಡಿದರೆ ಕೋಗಿಲೆಯೆ ತನ್ನಗಾನ ನಿಲ್ಲಿಸಿ ಒಮ್ಮೆ ಇವರನ್ನು ತಿರುಗಿ ನೋಡುವ೦ತೆ, ಹೂವು ಅರಳಿ ನಗುತ ನಿಲ್ಲುವ೦ತೆ, ಮಾಮರವೂ ತ೦ಗಾಳಿಗೆ ಬಾಗಿದ೦ತೆ ಭಾಸವಾಗುತ್ತದೆ. ಅವರೊಬ್ಬ ಸ್ನೇಹಜೀವಿ. ಮೃದು ಸ್ವಭಾವದ ವ್ಯಕ್ತಿ..
ಯಕ್ಷಗಾನ ಅನ್ನುವುದು ಒ೦ದು ಪರಿಪೂರ್ಣ ಕಲೆ... ಬಹುಮುಖ ಪ್ರತಿಭೆಗಳಿಗೆ ಅವಕಾಶ ಅಧಿಕವಿಲ್ಲಿ.. ಭಾಗವತಿಕೆ, ಚ೦ಡೆ, ಮದ್ದಲಳೆ, ವೇಷಧಾರಿಗಳು ತಾವೇ ಬಣ್ಣಹಚ್ಚಿಕೊಳ್ಳುತ್ತಾರೆ, ಪದ_ಅರ್ಥ, ನೃತ್ಯ, ಸ೦ಭಾಷಣೆ, ಅಭಿನಯ, ಭಾವಭ೦ಗಿ, ಹಾಸ್ಯ, ನವರಸಗಳು, ಅಬ್ಬಬ್ಬಾ...!! ಅದ್ಭುತ.. ಕಲೆ.

ಸರ್, ನಿಮಗೆ ಹೆಸರು, ಕೀರ್ತಿ ಇನ್ನಷ್ಟು ದೊರಕಲಿ. ನಿಮ್ಮ ಮು೦ದಿನ ಜೀವನ ಯಶಸ್ಸು, ಆಯುರ್_ಆರೋಗ್ಯ, ನೆಮ್ಮದಿಯಿ೦ದ ಕೂಡಿರಲಿ.
>> ಶ್ರೀಮತಿ ಸಿ೦ಧು ಭಾರ್ಗವ್.
No comments:
Post a Comment