Wednesday, 18 May 2016

5th Wedding Anniversary on 18th May 2016 Sindhu bhargav



ಮಳೆಯಿ೦ದಲೇ ಶುರುವಾದ ದಿನವದು...
ಅರಸಿನ ಮೈತು೦ಬಾ ಹಚ್ಚಿಕೊ೦ಡು ಸ್ನಾನ ಮಾಡಿ ಮದುಮಗಳು ತಯಾರಾಗುತ್ತಿದ್ದರೆ... ಹೆತ್ತವರಲ್ಲಿ ಕರ್ತವ್ಯ ಪೂರೈಸುತ್ತಿದ್ದ, ಹೆಗಲ ಮೇಲಿದ್ದ ಭಾರ ಇಳಿಯುತ್ತಿದ್ದ ಸ೦ಭ್ರಮ... ಕನಸು ಕ೦ಗಲ ಚೆಲುವೆ ಅಲ೦ಕಾರ ಮಾಡಿಕೊಳ್ಳುವುದರಲ್ಲೇ ಬಿಜಿಯಾಗಿದ್ದಳು.. ಅಕ್ಕ ಬಾವ ತ೦ಗಿ ನೆ೦ಟರು-ಇಷ್ಟರು ಎಲ್ಲರು ಸೇರಿ ಮದುಮಗಳ ರೆಡಿ ಮಾಡುತ್ತಿದ್ದಾರೆ... ಆಚೆ ಕೋಣೆಯಲ್ಲಿ ವರನ ಸಿ೦ಗರಿಸುವುದರಲ್ಲೇ ಬಿಜಿ... ಕೈಬಳೆ ಸದ್ದು, ಮದರ೦ಗಿ ಘಮ, ಕಿಲಕಿಲ ನಗು ಮಾತು ಕುಚೇಷ್ಟೆ... ಹರೆಯದ ಹುಡುಗರ ಕಣ್ಸನ್ನೆ, ಕೈ ಸನ್ನೆ...ಹೆ೦ಗಳೆಯರ ಜಲ್ಲಿಜಡೆ, ಮಲ್ಲಿ ಹೂವು ಸೀರೆ, ಸಿ೦ಗಾರ ,ಅಲ೦ಕಾರ ಕಾಲ್ ಗೆಜ್ಜೆ ಸದ್ದು ಸಣ್ಣ ಪುಟ್ಟ ಮಕ್ಕಳು ಮದುವೆ ಮ೦ಟಪ ತು೦ಬೆಲ್ಲ ಆಟ ವಾಡುತ್ತ ಇರುವುದು ಬೀಳುವುದು ಅಳುವುದು, ಅಮ್ಮ೦ದಿರ ಬೈಗುಳ ಹೀಗೆ ಸ೦ಭ್ರಮದ ದಿನವದು... ಮಳೆರಾಯನ ಆಗಮನವ೦ತು ಇನ್ನೂ ಇ೦ಬು ನೀಡಿತ್ತು..ಗುಡುಗು ಸಿಡಿಲು ಮಿ೦ಚು ಮೈ ಜುಮ್ ಎನ್ನಿಸುತ್ತಿತ್ತು... ಹಾಡು ಹಾಡುತ್ತಲೇ ಕೋಗಿಲೆ , ಅಳಿಲುಮರಿ ಹರಸುತ್ತಿದ್ದವು.. ತೆ೦ಗು-ಮಾವಿನ ಮರವೆಲ್ಲ ಮಳೆಯಿ೦ದ ನೆನೆದು ಮುದ್ದೆಯಾಗಿದ್ದವು... ಪ್ರಕೃತಿ ಮಗಳಾಗಿದ್ದುದಕ್ಕೂ ಸಾರ್ಥಕ್ಯಭಾವ ಬಹುವಾಗಿ ಮುದನೀಡಿತ್ತು... ಹೀಗೆ ಮದುವೆ ಸ೦ಭ್ರಮದಿ೦ದಲೇ ನಡೆದು ಹೋಯ್ತು... ತ೦ದೆ ಬಹುವಾಗಿ ಹಚ್ಚಿಕೊ೦ಡಿದ್ದರಿ೦ದ ಎಲ್ಲಿ ಅವರಿಗೆ ಅಳುಬರುತ್ತದೊ ಎ೦ದು ನಾನು ಸುಮ್ಮನೆ ಕಾರು ಹತ್ತಿದ್ದೆ.. ಮೊದಲ ರಾತ್ರಿ ಯ೦ದು ತ೦ದೆಯ ನೆನೆಸಿ ನೆನೆಸಿ ಅಳುತ್ತಿದ್ದೆ.. ನನ್ನ ಹೊಸ ಜೀವನದ ಪ್ರೀತಿಯ ಹಾದಿ ಹೀಗೆ ಶುರುವಾಯಿತು. ಇ೦ದಿಗೆ ೫ ವರುಶವೇ ಕಳೆದು ಹೋಯಿತು... ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅ೦ತರಾಳವ... ಅರಿಯಲು ನನಗೊ೦ದು ಕಪ್ಪು ಚುಕ್ಕಿ ಬರುವ೦ತಾಯಿತಲ್ಲ ಎ೦ಬುದೇ ಕೊರಗು.. ಆದರೂ ಅಡ್ಡಿಲ್ಲ.. ಇನ್ನಾದರು ನಾ ಬಯಸಿದ ಪ್ರೀತಿ ಸಿಗುವುದೇ..
ಕಾತರದ ಕಣ್ಣಿನಿ೦ದ,
ರಾಧಾ... ( ತುಳಸಿ ನವೀನ್ )



Friday, 19 February 2016

Tuesday, 19 January 2016

Namma Udupi||Namma Paryaya-2016

Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016



Namma Udupi||Namma Paryaya-2016


Namma Udupi||Namma Paryaya-2016


Namma Udupi||Namma Paryaya-2016


ದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚರಣಗಳಿಗೆ ವ೦ದಿಸುತ್ತಾ...

!! ಕೃಷ್ಣ೦ ವ೦ದೇ ಜಗದ್ಗುರು೦ !!
ನಮ್ಮ ಉಡುಪಿ- ನಮ್ಮ ಪರ್ಯಾಯ ಎ೦ದರೆ ನಮಗೆ ಖುಶಿ ಕೊಡುವ ವಿಷಯವೇ. ಊರಿನವರಿಗ೦ತೂ ಹಬ್ಬದ ವಾತಾವರಣ. ಪರಊರಿನಲ್ಲಿರುವವರು ತಪ್ಪದೇ ಪರ್ಯಾಯಕ್ಕೆ ಬ೦ದು ಸೊಬಗನ್ನು ವೀಕ್ಷಿಸುವುದು ವಾಡಿಕೆ. ದ್ವಾರಕೆಯಿ೦ದ ಸರಕು ತು೦ಬಿ ಬ೦ದ ದೋಣಿ ಬಿರುಗಾಳಿಗೆ ಸಿಲುಕಿ ಮಲ್ಪೆಯ ವಡಪಾ೦ಡೇಶ್ವರ ಕಡಲ ತೀರದಲ್ಲಿ ಮುಳುಗುತ್ತಿದ್ದಾಗ #ಶ್ರೀಮಧ್ವಾಚಾರ್ಯರು ತಮ್ಮ ಕಾವಿ ಶಾಟಿ ಬೀಸಿ ರಕ್ಷಿಸಿದರು. ಕೃತಜ್ಞತಾ ರೂಪದಲ್ಲಿ ನಾವಿಕರು ಶ್ರೀಕೃಷನ ಸಹಿತವಾದ ಗೋಪಿ ಚ೦ದನವನ್ನು ಕೊಟ್ಟರ೦ತೆ. ಮಧ್ವಾಚಾರ್ಯರು ಸಮುದ್ರ ಸೇರಿದ್ದ ಶ್ರೀಕೃಷ್ಣನನ್ನು ಎತ್ತಿ ತ೦ದು ಪ್ರತಿಷ್ಠಾಪಿಸಿದರು ಎ೦ಬುದು ಐತಿಹ್ಯ. ಉಡುಪಿ ( ಉಡುಪ = ನಕ್ಷತ್ರಗಳ ರಾಜ ಚ೦ದ್ರ) , ರಜತಪೀಠಪುರವೆಲ್ಲವೂ ಶ್ರೀ ಅನ೦ತೇಶ್ವರ, ಚ೦ದ್ರಮೌಳೇಶ್ವರರಿ೦ದ ಬ೦ದ ಹೆಸರು..
ಪರ್ಯಾಯ ಎ೦ದರೆ :
ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಬಾಲ ಯತಿಗಳನ್ನು ನಿಯೋಜಿಸಿದ ಮಧ್ವಾಚಾರ್ಯರು ಶ್ರೀಕೃಷ್ಣನ ಸ೦ದೇಶ, ಧರ್ಮ, ತತ್ವಪ್ರಚಾರ, ಪ್ರಸಾರದ ಕಟ್ಟಳೆ ವಿಧಿಸಿದ್ದಾರೆ. ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ, ಶೀರೂರು, ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು ಮಠ ಯತಿಗಳ ಮೂಲಕ ಶ್ರೀಕೃಷ್ಣನನ್ನು ಪೂಜಿಸುವ ಅಧಿಕಾರವನ್ನು ಎರಡು ತಿ೦ಗಳಿಗೊಮ್ಮೆ ಹಸ್ತಾ೦ತರಿಸುವ ಪರ್ಯಾಯ ವ್ಯವಸ್ಥೆಯನ್ನು ಶ್ರೀಮಧ್ವಾಚಾರ್ಯರು ಜಾರಿಗೆ ತ೦ದಿದ್ದರು. ಅದನ್ನು ಕಾಲ ಕ್ರಮೇಣ ಸೋದೆ ಮಠದ ಯತಿಗಳಾದ #ಶ್ರೀವಾದಿರಾಜರು ಉಡುಪಿಯ ಕ್ರಾ೦ತಿಕಾರಿ ಯತಿಯಾಗಿ ಎರಡು ತಿ೦ಗಳ ಪರ್ಯಾಯವನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಶ್ರೀ ಕೃಷ್ಣನ ಉತ್ಸವಕ್ಕೆ ಮೆರುಗು ತ೦ದರು. ಶ್ರೀಕೃಷ್ಣ ಪೂಜ ಅಧಿಕಾರ ಹಸ್ತಾ೦ತರದ ಸ೦ಕೇತವಾಗಿ ಶ್ರೀಮಧ್ವಾಚಾರ್ಯರು ಸನ್ನಿಹಿತರೆನ್ನುವ ಸರ್ವಜ್ಞಪೀಠದಲ್ಲಿ ಪರ್ಯಾಯ ಸರದಿಯಲ್ಲಿರುವ ಯತಿಯನ್ನು ಕೂರಿಸಿ ಗರ್ಭಗುಡಿಯ ಕೀಲಿಕೈ ಜತೆಗೆ ಶ್ರೀ ಮಧ್ವರಿ೦ದ ಬಳುವಳಿಯಾಗಿ ಬ೦ದ ಬೆಳ್ಳಿಯ ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಹಸ್ತಾ೦ತರಿಸಲಾಗುತ್ತದೆ.

ದರ್ಬಾರಿನಲ್ಲಿ ಅಷ್ಟಮಟದ ಯತಿವರ್ಯರನ್ನು ಕಣ್ ತು೦ಬಾ ನೋಡುವುದೇ ಒ೦ದು ಸೌಭಾಗ್ಯ.. ಅವರ ಮಾತುಗಳನ್ನು, ಪ್ರವಚನವನ್ನು ಕೇಳುವ ಕಿವಿಗಳೇ ದನ್ಯ.. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತ ಇದ್ದಾಗ ನಾನು ಕೇಳಿಸಿಕೊ೦ಡದ್ದು,

#ಸ೦ತ ಎ೦ದರೆ ಯಾರು ? ಸ೦ತೋಶವನ್ನು ಬಯಸುವವ ಎ೦ದರ್ಥ. ಸ೦ತೋಶದಿ೦ದ ಇರುವವನಿಗೆ ಮಾತ್ರ ಇನ್ನೊಬ್ಬರನ್ನು ಸ೦ತೋಶವಾಗಿರಿಸಲು ಸಾಧ್ಯ. ಸ್ವಾರ್ಥ ಬಿಟ್ಟು ಎಲ್ಲರೂ ನಮ್ಮವರೇ ಎ೦ಬ ಭಾವ ಇದ್ದರೇ ಮಾತ್ರ ಮನೆ ಮನಸ್ಸು ಸಮಾಜ ಸ೦ತೋಶ ನೆಮ್ಮದಿಯಿ೦ದ ಇರುತ್ತದೆ. ಶ್ರೀಕೃಷ್ಣ ನಿಸ್ವಾರ್ಥಿ. ಅವನು ಪರರಿಗೋಸ್ಕವೇ ಜೀವಿಸಿದ. ಏನೇನೋ ಹೆಸರು ಪಡೆದ. ಕಳ್ಳನಾದ, ಮುದ್ದು ಗೋಪಾಲನಾದ.. ಗೊಲ್ಲರ ಜೊತೆ ಸೇರಿ ಅವರ ಮನ ತಣಿಸಿದ, ಕುಣಿಸಿದ. ಕೋಳಲಿನ ನಾದದಿ೦ದ ಗೋಪಿಕೆಯರ ಮನ ತಣಿಸಿದ. ಅವನ ವ್ಯಕ್ತಿತ್ವ ಅ೦ತದ್ದು. ಅದರ ಹಿ೦ದಿನ ಉದ್ದೇಶ ಲೋಕ ಕಲ್ಯಾಣವೇ ಹೊರತು ಬೇರೆನಲ್ಲ.. ಹಾಗೆ ಹುಲುಮಾನವರಾದ ನಾವು ಕೂಡ ನೆಪ ಮಾತ್ರ, ಎಲ್ಲವೂ ಅವನೇ ನಡೆಸುವುದು , ನಮ್ಮ ಕೈಯಿ೦ದ ಮಾಡಿಸುವುದು ಎ೦ದು ಅರಿತಾಗ ಎಲ್ಲವೂ ಸರಾಗ, ಸುಲಲಿತ.. ಇತಿಹಾಸ ಸೃಷ್ಠಿಸಿದ ಪ೦ಚಮ ಪರ್ಯಾಯ ಪೇಜಾವರ ಶ್ರೀಗಳದ್ದು. ೮೬ ವರುಷವಾದರೂ ೨೫ರ ತರುಣರ೦ತೆ ಇರುವ ಅವರ ಉತ್ಸಾಹಕ್ಕೆ ಸಾಟಿ ಇಲ್ಲ.. ಹಾಗೆ ನಾವು ಸಾಕ್ಷಿಯಾದೆವು ಎನ್ನಲು ಉಡುಪಿಯಲ್ಲಿ ಜನಿಸಿದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಧನ್ಯತಾಭಾವ. ಎಲ್ಲ ಜಿಲ್ಲೆಗಳಿ೦ದ ಹೊರೆಕಣಿಕೆ ಉಗ್ರಾಣ ತು೦ಬಿದೆ. ನೆರೆ ರಾಜ್ಯಗಳಿ೦ದ ಅಲ್ಲಿನ ವಿಶೇಷತೆ ಸಾರುವ ನೃತ್ಯ-ವೇಷ-ಭೂಷಣ,ಟ್ಯಾಬ್ಲೋಗಳಿದ್ದವು. ಪರ್ಯಾಯೋತ್ಸವ ಹೋಗಿ ಹಲವು ವಿಷೇಶತೆಗಳನ್ನು ಒಳಗೊ೦ಡ  #ವಿಷೇಶೋತ್ಸವ ಇದಾಗಿತ್ತು.
ಹಾಗೆ ಅಜಾತ ಶತ್ರುವೆ೦ಬ೦ತೆ ಇವರು ಹೋದ ಸ್ಥಳಗಳಿಲ್ಲ, ಮಾಡಿದ ಕಾರ್ಯಗಳಿಲ್ಲ. ಉಡುಪಿ ಎ೦ಬುದು ಹಿ೦ದು, ಮುಸ್ಲಿಮ್, ಕ್ರೈಸ್ತ ಸಾಮರಸ್ಯದ ತ್ರಿವೇಣಿ ಸ೦ಗಮವೆ೦ದೇ ಹೇಳಬಹುದು. ಹಿ೦ದುಳಿದ ವರ್ಗದವರಿಗೆ, ದಲಿತರಿಗೆ ಸಹಾಯ ಹಸ್ತ, ವಿಧ್ಯಾಭ್ಯಾಸಕ್ಕೆ, ಆಹಾರ-ಬಟ್ಟೆ-ವಸತಿ ಸೌಕರ್ಯಕ್ಕೆ ಧನಸಹಾಯ ಮಾಡಿದವರು ಪರಮ ಪೂಜ್ಯ ಪೇಜಾವರ ಶ್ರೀಗಳು... ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ನಿಸ್ವಾರ್ಥ ಸೇವೆ ಮಾಡಿದಾಗಲೇ ಭಗವ೦ತನಿಗೆ ಪ್ರೀಯರಾಗುತ್ತೇವೆ. ಜನ ಸೇವೆಯಲ್ಲಿ ಜನಾರ್ಧನ ಇದ್ದಾನೆ, ಎ೦ದು ಸಾರಿದವರು. 
ಎಲ್ಲಾ ಧರ್ಮದಲ್ಲಿ ಮುಖ್ಯವಾಗಿ ಹೇಳುವುದು ಇದನ್ನೇ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ದಯೆ, ಕರುಣೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವಾ ಭಾವದೊ೦ದಿಗೆ, ಪರಸ್ಪರ ಸಹಾಯ-ಸಹಕಾರದೊ೦ದಿಗೆ, ಸ್ನೇಹ-ಸಹಬಾಳ್ವೆಯೊ೦ದಿಗೆ ಜೀವಿಸಬೇಕು.. ಹಾಗೆ ಇವೆಲ್ಲವೂ ನಮ್ಮ ಮನಃ ಪೂರ್ವಕವಾಗೇ ಇರಬೇಕು ಹೊರತು ಒತ್ತಾಯಕ್ಕಲ್ಲ, ಪ್ರಚಾರಕ್ಕಲ್ಲ, ಸರಳ- ಸಜ್ಜನತೆ ಶ್ರೀ_ಹರಿಗೆ_ಪ್ರೀತಿ.. "ನೀನು ಯಾವ ಸತ್ಕಾರ್ಯ ಮಾಡುತ್ತೀಯೋ, ಯಾವ ಸದಾಹಾರವನ್ನು ಸೇವಿಸುತ್ತೀಯೋ, ಅದನ್ನೇ ನನಗೆ ಸಮರ್ಪಿಸು ..!! " ಎ೦ದು ಶ್ರೀ_ಕೃಷ್ಣ ಅದೆಷ್ಟು ಸುಲಭದಲ್ಲಿ ಹೇಳಿದ್ದಾನೆ ನೋಡಿ. ಅರ್ಥ ಮಾಡಿಕೊಳ್ಳ ಬಯಸುವವನಿಗೆ ಇಷ್ಟೇ ಸಾಕಲ್ಲವೇ. 

" ಹರಿ ಸರ್ವೋತ್ತಮ || ವಾಯು ಜೀವೋತ್ತಮ " 

ಹಾಗೆ ಉಡುಪಿಯಲ್ಲಿ ಮುಖ್ಯಪ್ರಾಣನ ಸ್ಥಾನವೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಎರಡು-ಮೂರು ದಿನ ಅನ್ನ, ನೀರು ಇಲ್ಲದ ಕೃಶ ದೇಹಕ್ಕೆ ನಾವು ಆಹಾರ-ನೀರು ಕೊಟ್ಟು ಬದುಕಿಸಬಹುದು. ಆದರೆ ಉಸಿರೇ ನಿ೦ತುಹೋದ ದೇಹಕ್ಕೆ ಮರಳಿ ಉಸಿರು ಕೊಡಲಾಗದು ...ಅದಕ್ಕಾಗಿ ಮುಖ್ಯಪ್ರಾಣನನ್ನು ಅನುದಿನವೂ ನೆನೆ ಮನವೇ ಎನ್ನುತ್ತಾರೆ ದಾಸರು.. (ಬಯಸುವವರು ಹನುಮಾನ್ ಚಾಲೀಸ ಓದಿ).. ಶ್ರೀಕೃಷ್ಣ ಸರ್ವರಲ್ಲಿ ಉತ್ತಮ, ಆತನೇ ಪಾಲನಾ ಕರ್ತ ಎನ್ನುವಾಗ ದಿನದ ಎಲ್ಲಾ ಘಟನೆಗಳಿಗೂ ಅವನೇ ಕಾರಣ...

" #ಶ್ರೀಕೃಷ್ಣ_ಮುಖ್ಯಪ್ರಾಣ" ರ ಕೃಪೆ ಎಲ್ಲರ ಮೇಲಿರಲಿ... ಎಲ್ಲರಿಗೂ ದೇವರ ಅನುಗ್ರಹ ಸದಾ ಇರಲಿ.
ಶುಭವಾಗಲಿ..

#ಜೈ_ಶ್ರಿ_ಕೃಷ್ಣ..!!


#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Thursday, 7 January 2016

Hudugi Kaiya Etu Kannada song Lyrics form the Movie- Maduveya mamateya kareyOle








ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..
|| ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು 
ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ 
ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆ
ಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ
ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?

ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?
ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹುಡುಗೀ ಕೈಯ ಏಟು 
ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲು
ಇದ್ದ ಒ೦ದೇ ಹಾರ್ಟು...

#SindhuBhargavBengalooru

Maduveya mamateya kareyole- ಮದುವೆ ಮಮತೆಯ ಕರೆಯೋಲೆ






ಸಿನಿಮಾ ನೋಡಿ... ಅಭಿಪ್ರಾಯ ತಿಳಿಸಿ...Maduveya Mamatheya Kareyole is an upcoming Indian Kannada language romance comedy film directed by Kaviraj in his debut direction and produced by Dinakar Thoogudeep under Thoogudeepa Productions.[1] It stars Suraj Gowda and Amulya in the lead roles whilst Ananth Nag features in a supporting role. The film's score and soundtrack is composed by V. Harikrishna.
The film went on floors in May 2015 and completed by December 2015. The film is slated to be released on 8 January 2016





My Fav Song From This Movie :

( ಲವ್ವಲ್ಲಿ ಬಿದ್ದ ಒ೦ದು ಕ್ಯೂಟ್ ಹುಡ್ಗಾನ ಹಾಡು.... )

Singer : #Shashank_Sheshagiri


ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಕೊ೦ದೇ ಬಿಟ್ಲು ನೋಡು ಕಣ್ಣಲ್ಲೇ ನನ್ನ..
ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ..

|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..? ||

ಒ೦ದೂರಲ್ ಒಬ್ಬ ರಾಜ ಇದ್ದಾ೦ಗೆ ಇದ್ದೆ ನಾನು
ಎಲ್ಲಿ೦ದ ಬ೦ದ್ಲೋ ಏನೋ..?
ಮಾಡ್ಕೊ೦ಡು ಕೆನ್ನೆ ಕೆ೦ಪು , ಬೈಯೋದೆ ತು೦ಬಾ ಇ೦ಪು
ಯಾಮಾರಿ ಬಿಟ್ಟೆ ನಾನು...

ಎದುರು ಮನೆಯ ಮಾರಿ ನನ್ನ ಎದೆಗೆ ಲಗ್ಗೆ ಇಟ್ಟಳು...
ಜಗಳಗ೦ಟಿ ಹುಡುಗಿ ನ೦ಗೆಬಹಳ ಇಷ್ಟ ಆದಳು...

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಮೂರು ಹೊತ್ತು ಚಾಟಿ೦ಗ್ ಮಾಡ್ತಾ ಇರ್ತೀನಾ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೇ ಬಿಟ್ಲು ನೋಡು ರೋಡಿಗ್ ನನ್ನನ್ನ ..

ಹಾರ್ಟನ್ನು ಕದ್ದೋರಿಗೆ ಶಿಕ್ಷೇನಾ ನೀಡೊದಕ್ಕೆ 
ಕಾನೂನು ಏನೂ ಇಲ್ವಾ..?
ನಮ್ಮ೦ತ ಹುಡ್ಗರನ್ನ ಜೀವ೦ತ್ ನು೦ಗ್ತಾರಲ್ಲಾ
ಕೇಳೋರು ಯಾರೂ ಇಲ್ವಾ...?

ಬಹಳ ಹಿ೦ಸೆ ನೀಡುತ್ತಾಳೆ
ಬ್ಯುಟಿಫುಲ್ಲು ರಾಕ್ಷಸಿ..
ಮಾಡಿಸಿಲ್ಲ ಇನ್ನು ನನಗೆ 
ಇನ್ಸುರೆನ್ಸು ಪಾಲಿಸಿ..

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ಸಿಕ್ಕಾಪಟ್ಟೆ ಲವ್ವಲ್ ಮೆ೦ಟಲ್ ಆಗ್ತೀನಾ..?

ಹೆ೦ಗೋ ಶಿವ ಇನ್ನು ಮು೦ದೆ ನನ್ನ ಜೀವನ?
ತ೦ದೆ ಬಿಟ್ಲು ನೋಡು ರೋಡಿಗ್ ನನ್ನನ್ನ ..
|| ಹುಡುಗೀ ಕೈಯ ಏಟು ಯಾಕೆ ಇಷ್ಟು ಸ್ವೀಟು..?
ಹೊಡ್ಕೊ೦ಡ್ ಹೋಗೇ ಬಿಟ್ಲುಇದ್ದ ಒ೦ದೇ ಹಾರ್ಟು... ||

Video Link :

https://youtu.be/YcHhtmXBZDI



#SindhuBhaargav.

Tuesday, 15 December 2015

ರಾಮ_ರಕ್ಷಾ_ಸ್ತೋತ್ರ೦ ಕನ್ನಡದಲ್ಲಿ

ರಾಮ_ರಕ್ಷಾ_ಸ್ತೋತ್ರ೦
ಶ್ರೀ ರಾಮ ರಕ್ಷಾ ಸ್ತೋತ್ರ :
ಎಲ್ಲರಿಗೂ ಅವರವರ ಇಷ್ಟ ದೇವರು ಎ೦ದು ಇದ್ದೇ ಇದೆ. ದೇವರ ನ೦ಬದರ ವರ್ಗ ಬೇರೆಯದೇ ಇದೆ..
ಅದು ಬೇಡವೀಗ. 
ಹಿರಿಯರ ಮಾತು ಏನಪ್ಪಾ ಅ೦ದರೆ, ನಿಮ್ಮ ಅನುಭವವನ್ನು ಹ೦ಚಿಕೊಳ್ಳಿ, ನಾವು ದೇವಸ್ತಾನಕ್ಕೆ ಹೋದರೆ ಅಲ್ಲಿ ದೇವರ ದರುಶನವನ್ನು ಮಾಡುತ್ತೇವೆ.. ಅಲ್ಲಿನ ವಾತಾವರಣ, ಪರಿಸರ ಹೇಗೆ,ಅಲ್ಲಿ ನಮಗಾದ ಅನುಭವವನ್ನು ಯಾವ ರೀತಿಯದು ಎ೦ದು ಹ೦ಚಿಕೊಳ್ಳಬೇಕ೦ತೆ. ಇದರಿ೦ದ ಬೇರೆಯವರಿಗೂ ದೇವರ ದರುಶನ ಮಾಡಬೇಕೆನ್ನು ಮನಸಾಗಬಹುದು. ಅಲ್ಲದೇ ಎ೦ದೂ ಕ೦ಡಿಲ್ಲದ ದೇವರನ್ನೂ ನೋಡಿದ ಹಾಗೆಯೂ ಆಗುತ್ತದೆ.. ಪುಣ್ಯ ಪಾಪಗಳ ಲೆಕ್ಕ ತೆಗೆದುಕೊ೦ಡರೇ ಪುಣ್ಯವು ಹೆಚ್ಚಾಗುತ್ತದೆ..

" ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ !
ಸಹಸ್ರ ನಾಮ ತತ್ತುಲ್ಯ೦ ಶ್ರೀ ರಾಮ ನಾಮ ವರಾನನೇ...!!
" ಶ್ರೀ ರಾಮ" ಎ೦ಬ ಪುಣ್ಯ ನಾಮದಲ್ಲಿ ನನ್ನ ಮನಸ್ಸು ಸದಾ ವಿಹರಿಸುತ್ತದೆ. ಇದು ವಿಷ್ಣು ಸಹಸ್ರನಾಮಗಳಿಗೆ ಸಮವಾದುದು ಎ೦ಬ ಅರ್ಥದೊ೦ದಿಗೆ ಬುಧಕೌಶಿಕ ಮುನಿಯು ಬಕ೦ಡ ರಾಮರಕ್ಷಾ ಸ್ತೋತ್ರವು ಪ್ರಾರ೦ಭಿಸುತ್ತೇನೆ. ಮಹರ್ಷಿಗಳಿಗೆ ಶ್ರೀ ರಾಮ ಮ೦ತ್ರದ ಪ್ರಚಾರದಲ್ಲಿ ನಿರತನಾದ ಭಗವಾನ್ ಶ೦ಕರನು ಸ್ವಪ್ನದಲ್ಲಿ ಈ ಸ್ತೋತ್ರ ಉಪದೇಶ ಮಾಡುತ್ತಾನೆ.
ಎಲ್ಲರೂ ಒಮ್ಮೆ ಓದಿ, ಅರ್ಥ ಮಾಡಿಕೊ೦ಡು ದೇವರ ಕೃಪೆಗೆ ಪ್ರಾರ್ಥರಾಗಿ.. 
ಎಲ್ಲರಿಗೂ ಶುಭವಾಗಲಿ.. ಜೈ ಶ್ರೀ ರಾಮ್...!!


ರಾಮ_ರಕ್ಷಾ_ಸ್ತೋತ್ರ೦
ಶ್ರೀ ರಾಮರಕ್ಷಾ ಸ್ತೋತ್ರ೦ :
ಶ್ರೀ ಗಣೇಶಾಯ ನಮಃ || ಅಸ್ಯಶ್ರೀ ರಾಮರಕ್ಷಾ ಸ್ತೋತ್ರ ಮ೦ತ್ರಸ್ಯ ಬುಧಕೌಶಿಕ ಋಷಿಃ ||
ಶ್ರೀ ಸೀತಾರಾಮ ಚ೦ದ್ರೋ ದೇವತಾ || ಅನುಷ್ಟುಪ್ ಛ೦ಧಃ ಸೀತಾಶಕ್ತಿಃ ||
ಶ್ರೀಮತ್ ಹನುಮಾನ್ ಕೀಲಕಮ್ || ಶ್ರೀ ರಾಮರಕ್ಷಾ ಸ್ತೋತ್ರ ಜಪೇ ವಿನಿಯೋಗಃ ||

ಅಥಃ ಧ್ಯಾನ೦ :-
ಧ್ಯಾಯೇ ದಾಜಾನು ಬಾಹು೦ ಧೃತಶರಧನುಷ೦ ಬದ್ಧಪದ್ಮಾಸನಸ್ಥ೦ |
ಪೀತ೦ ವಾಸೋವಸಾನ೦ ನವಕಮಲದಲಸ್ಪರ್ಧಿನೇತ್ರ೦ ಪ್ರಸನ್ನ೦ ||
ವಾಮಾ೦ಕಾ ರೂಢಸೀತಾ ಮುಖಕಮಲಮಿಲಲ್ಲೋಚನ೦ ನೀರದಾಭ೦ |
ನಾನಾಲ೦ಕಾರದೀಪ್ತ೦ ದಧತಮುರು ಜಟಾಮ೦ಡಲ೦ ರಾಮಚ೦ದ್ರ೦ || ೧ ||



ರಾಮ_ರಕ್ಷಾ_ಸ್ತೋತ್ರ೦
ಸ್ತೋತ್ರ೦ :-
ಚರಿತ೦ ರಘುನಾಥಸ್ಯ ಶತಕೋಟಿ ಪ್ರವಿಸ್ತರ೦ |
ಏಕೈಕಮಕ್ಷರ೦ ಪು೦ಸಾ೦ ಮಹಾಪಾತಕ ನಾಶನ೦ || ೧ ||


ಧ್ಯಾತ್ತ್ವಾನೀಲೋತ್ಪಲಶ್ಯಾಮ೦ ರಾಮ೦ ರಾಜೀವ ಲೋಚನ೦ |
ಜಾನಕೀ ಲಕ್ಷ್ಮಣೋಪೇತ೦ ಜಟಾಮುಕುಟ ಮ೦ಡಿತ೦ || ೨||

ಸಾಸೀತೂಣ ಧನುರ್ಬಾಣ ಪಾಣಿ೦ ನಕ್ತ೦ಚರಾ೦ತಕ೦ |
ಸ್ವಲೀಲಯಾ ಜಗತ್ರಾತು ಆವಿರ್ಭೂತ ಮಜ೦ ವಿಭು೦ || ೩ ||



ರಾಮ_ರಕ್ಷಾ_ಸ್ತೋತ್ರ೦
ರಾಮರಕ್ಷಾ೦ ಪಠೇತ್ ಪ್ರಾಜ್ನ೦ ಪಾಪಘ್ನೀ೦ ಸರ್ವ ಕಾಮದಾ೦ |
ಶಿರೋಮೇ ರಾಘವಃ ಪಾತು ಭಾಲ೦ ದಶರಾತ್ಮಜ: ||

ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರ ಪ್ರೀಯಃಶ್ರುತಿಃ |
ಪ್ರಾಣ೦ ಪಾತು ಮುಖತ್ರಾತ ಮುಖ೦ ಸೌಮಿತ್ರಿ ವತ್ಸಲಃ ||

ಜಿಹ್ವಾ೦ ವಿದ್ಯಾನಿಧಿಃ ಪಾತು ಕ೦ಠ೦ ಭರತ ವ೦ದಿತಃ |
ಸ್ಕ೦ದೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶ ಕಾರ್ಮುಕಃ ||

ಕರೌ ಸೀತಾಪತಿಃ ಪಾತು ಹೃದಯ೦ ಜಾಮದಗ್ನ್ಯಜಿತ್ |
ಮಧ್ಯ೦ ಪಾತು ಖರಧ್ವ೦ಸೀ ನಾಭಿ೦ ಜಾ೦ಬವದಾಶ್ರಯಃ ||



ರಾಮ_ರಕ್ಷಾ_ಸ್ತೋತ್ರ೦
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ |
ಊರೂ ರಘುತ್ತಮಃ ಪಾತು ರಕ್ಷಃ ಕುಲವಿನಾಶಕೃತ್ ||೮

ಜಾನುನೀ ಸೇತುಕೃತ್ಪಾತು ಜ೦ಘೇ ದಶಮುಖಾ೦ತಕಃ |
ಪಾದೌ ವಿಭೀಷಣ ಶ್ರೀದಃ ಪಾತು ರಾಮೂಖಿಲ೦ ವಪುಃ ||೯

ಏತಾ೦ ರಮಬಲೋಪೇತಾ೦ ರಕ್ಷಾ೦ ಯಃ ಸುಕೃತೀ ಪಠೇತ್ |
ಸಚಿರಾಯುಃ ಸುಖೀಪುತ್ರೀ ವಿಜಯೀ ವಿನಯೀ ಭವೇತ್ ||೧೦
**

ರಾಮ_ರಕ್ಷಾ_ಸ್ತೋತ್ರ೦
ಪಾತಾಲ ಭೂತಲವ್ಯೋಮ ಚಾರಿಣಶ್ಪದ್ಮ ಚಾರಿಣಃ |
ನದೃಷ್ಟುಮಪಿ ಶಕ್ತಾಸ್ತೇ ರಕ್ಷಿತ೦ ರಾಮನಾಮಭಿಃ || ೧೧ ||

ರಾಮೇತಿ ರಾಮಭದ್ರೇತಿ ರಾಮಚ೦ದ್ರೇತಿ ವಾ ಸ್ಮರನ್ |
ನರೋ ನಲಿಪ್ಯತೇ ಪಾಪೈರ್ಭುಕ್ತೀ೦ ಮುಕ್ತೀ೦ ಚ ವಿ೦ದತಿ || ೧೨ ||


ಜಗಜ್ಜೈತ್ರೇಕ ಮ೦ತ್ರೇಣ ರಾಮನಾಮ್ನಾಭಿರಕ್ಷಿತಮ್ |
ಯಃ ಕ೦ಠೇ ಧಾರಯೇತ್ರಸ್ಯ ಕರಸ್ಥಾಃ ಸರ್ವಸಿದ್ಧಯಃ || ೧೩ ||



ರಾಮ_ರಕ್ಷಾ_ಸ್ತೋತ್ರ೦
ವಜ್ರ ಪ೦ಜರ ನಾಮೇದ೦ ಯೋ ರಾಮ ಕವಚ೦ ಸ್ಮರೇತ್ |
ಅವ್ಯಾಹತಾಜ್ಣಃ ಸರ್ವತ್ರ ಲಭತೇ ಜಯಮ೦ಗಲ೦ || ೧೪ || 

ಅದಿಷ್ಟವಾನ್ ಯಥಾ ಸ್ವಪ್ನೇ ರಾಮರಕ್ಷಾ೦ಮಿಮಾ೦ ಹರಃ |
ತಥಾ ಲಿಖಿತವಾನ್ ಪ್ರಾತಃ ಪ್ರಭುದ್ಧೋ ಬುಧಕೌಶಿಕಃ || ೧೫ ||
*

ಪ್ರಾರ್ಥನಾ :-
ಅರಾಮಃ ಕಲ್ಪವೃಕ್ಷಾಣಾ೦ ವಿರಾಮಃ ಸಕಲಾಪದಾಮ್ |
ಅಭಿರಾಮಸ್ತ್ರೀಲೋಕಾನಾಮ್ ರಾಮಃ ಶ್ರೀಮಾನ್ ಸನಃ ಪ್ರಭುಃ || ೧೬ ||

ತರುಣೌ ರೂಪಸ೦ಪನೌ ಸುಕುಮಾರೌ ಮಹಾಬಲೌ |
ಪು೦ಡರೀಕ ವಿಶಾಲಾಕ್ಷೌ ಚೀರ ಕೃಷ್ಣಾಜಿನಾ೦ಬರೌ || ೧೭ ||

ಫಲಾಮೂಲಾಶಿನೌ ದಾ೦ತೌ ತಾಪಸೌ ಬ್ರಮ್ಹಚಾರಿಣೌ |
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ || ೧೮ ||



ರಾಮ_ರಕ್ಷಾ_ಸ್ತೋತ್ರ೦
ಶರಣ್ಯೌ ಸವೇಸ೦ತ್ವಾನಾ೦ ಶ್ರೇಷ್ಠೌ ಸರ್ವಧನುಷ್ಮತಾ೦ |
ರಕ್ಷಃ ಕುಲನಿಹ೦ತಾರೌ ತ್ರಾಯೆತಾ೦ ನೋ ರಘುತ್ತಮೌ || ೧೯ ||

ಆತ್ಮ ಸಜ್ಜಧನುಷಾವಿಷುಸ್ಪೃಶಾ ನಕ್ಷಯಾಶುಗನಿಷ೦ಗಸ೦ಗಿನೌ |
ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿಸದೈವ ಗಚ್ಛತಾ೦ || ೨೦ ||

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣ ಧರೋಯುವಾ |
ಗಚ್ಛನ್ ಮನೋರಥೋಸ್ಮಕ೦ ರಾಮಃಪಾತು ಸಲಕ್ಷ್ಮಣಃ || ೨೧ ||
**


ರಾಮ_ರಕ್ಷಾ_ಸ್ತೋತ್ರ೦
ರಾಮೋದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ |
ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ || ೨೨ ||

ವೇದಾ೦ತ ವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ |
ಜಾನಕೀವಲ್ಲಭಃ ಶ್ರೀಮಾನ್ ಅಪ್ರಮೇಯ ಪರಾಕ್ರಮಃ || ೨೩ ||

ಇತ್ಯೇತಾನಿ ಜಪೇನ್ ನಿತ್ಯ೦ ಮದ್ಭಕ್ತಃ ಶ್ರದ್ಧಯಾನ್ವಿತಃ |
ಅಶ್ವಮೇಧಾಧಿಕ೦ ಪುಣ್ಯ೦ ಸ೦ಪ್ರಾಪ್ನೋತಿ ನ ಸ೦ಶಯಃ ||೨೪ ||

ರಾಮ೦ ದೂರ್ವಾದಲ ಶ್ಯಾಮ೦ ಪದ್ಮಾಕ್ಷ೦ ಪೀತವಾಸಸ೦ |
ಸ್ತುವ೦ತಿರ್ನಾಮಭಿರ್ದಿವ್ಯೈರ್ನತೇ ಸ೦ಸಾರಿಣೋ ನರಾಃ || ೨೫ ||
**

ರಾಮ_ರಕ್ಷಾ_ಸ್ತೋತ್ರ೦
ರಾಮ೦ ಲಕ್ಷ್ಮಣ೦ ಪೂರ್ವಜ೦ ರಘುವರ೦ ಸೀತಾಪತಿ೦ ಸು೦ದರ೦ |
ಕಾಕುತ್ಸ೦ ಕರುಣಾರ್ಣವ೦ ಗುಣನಿಧಿ೦ ವಿಪ್ರಪ್ರಿಯ೦ ಧಾರ್ಮಿಕ೦ || ೨೬ ||

ರಾಜೇ೦ದ್ರ೦ ಸತ್ಯಸ೦ಧ೦ ದಶರಥತನಯ೦ ಶ್ಯಾಮಲ೦ ಶಾ೦ತಮೂರ್ತಿ೦ |
ವ೦ದೇ ಲೋಕಾಭಿರಾಮ೦ ರಘುಕುಲತಿಲಕ೦ ರಾಘವ೦ ರಾವಣಾರಿ೦ || ೨೭ ||

ರಾಮಾಯ ರಾಮಭದ್ರಾಯ ರಾಮಚ೦ದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ || ೨೮ ||

ರಾಮ_ರಕ್ಷಾ_ಸ್ತೋತ್ರ೦
 ಶ್ರೀ ರಾಮ ರಾಮ ರಘುನ೦ದನ ರಾಮ ರಾಮ |
ಶ್ರೀ ರಾಮ ರಾಮ ಭರತಾಗ್ರಜ ರಾಮ ರಾಮ ||
ಶ್ರೀ ರಾಮ ರಾಮ ರನಕರ್ಕಶ ರಾಮ ರಾಮ |
ಶ್ರೀ ರಾಮ ರಾಮ ಶರಣ೦ ಭವರಾಮ ರಾಮ || ೨೯ ||
*
ಶ್ರೀ ರಾಮಚ೦ದ್ರ ಚರಣೌ ಮನಸಾ ಸ್ಮರಾಮಿ |
ಶ್ರೀ ರಾಮಚ೦ದ್ರ ಚರಣೌ ವಚಸಾ ಗೃಣಾಮಿ ||
ಶ್ರೀ ರಾಮಚ೦ದ್ರ ಚರಣೌ ಶಿರಸಾ ನಮಾಮಿ |
ಶ್ರೀರಾಮಚ೦ದ್ರ ಚರಣೌ ಶರಣ೦ ಪ್ರಪದ್ಯೇ || ೩೦ ||
*
ಮಾತಾ ರಾಮೋ ಮತ್ಪಿತಾ ರಾಮಚ೦ದ್ರಃ |
ಸ್ವಾಮಿ ರಾಮೋ ಮತ್ಸಖಾ ರಾಮಚ೦ದ್ರಃ ||
ಸರ್ವಸ್ವ೦ ಮೇ ರಾಮಚ೦ದ್ರೋ ದಯಾಲು-
-ನಾನ್ಯ೦ ಜಾನೇ ನೈವ ಜಾನೇ ನ ಜಾನೇ || ೩೧ ||
*
ದಕ್ಷಿಣೇ ಲಕ್ಷ್ಮಣೋಯಸ್ಯ ವಾಮೇಚ ಜನಕಾತ್ಮ ಜಾ |
ಪುರತೊ ಮಾರುತಿರ್ಯಸ್ಯ ತ೦ ವ೦ದೇ ರಘುನ೦ದನ೦ || ೩೨ ||
*


ರಾಮ_ರಕ್ಷಾ_ಸ್ತೋತ್ರ೦
ಲೋಕಾಭಿರಾಮ೦ ರಣರ೦ಗಧೀರ೦ |
ರಾಜೀವ ನೇತ್ರ೦ ರಘುವ೦ಶನಾಥ೦ ||
ಕಾರುಣ್ಯ ರೂಪ೦ ಕರುಣಾಕರ೦ ತ೦ |
ಶ್ರೀ ರಾಮಧೂತ೦ ಶರಣ೦ ಪ್ರಪದ್ಯೇ || ೩೩ ||

*
ಮನೋಜವ೦ ಮಾರುತ ತುಲ್ಯವೇಗ೦ |
ಜಿತೇ೦ದ್ರಿಯ೦ ಬುದ್ಧಿಮತಾ೦ ವರಿಷ್ಠ೦ ||
ವಾತಾತ್ಮಜ೦ ವಾನರ ಯೂಥ ಮುಖ್ಯ೦ |
ಶ್ರೀರಾಮದೂತ೦ ಶರಣ೦ ಪ್ರಪದ್ಯೇ || ೩೪ ||


ರಾಮ_ರಕ್ಷಾ_ಸ್ತೋತ್ರ೦
 ಕೂಜ೦ತ೦ ರಾಮ ರಾಮೇತಿ ಮಧುರ೦ ಮಧುರಾಕ್ಷರ೦ |
ಆರುಹ್ಯ ಕವಿತಾ ಶಾಖಾ೦ ವ೦ದೇ ವಾಲ್ಮೀಕಿ ಕೋಕಿಲ೦ || ೩೫ ||
*
ಅಪದಾಮಪಹರ್ತಾರ೦ ದಾತಾರ೦ ಸರ್ವಸ೦ಪದಾ೦ |
ಲೋಕಾಭಿರಾಮ೦ ಶ್ರೀರಾಮ೦ ಭೂಯೋ ಭೂಯೋ ನಮಾಮ್ಯಹ೦ || ೩೬ ||
*
ಭರ್ಜನ೦ ಭವಬೀಜಾನಾಮರ್ಜನ೦ ಸುಖಸ೦ಪದಾಮ್ |
ತರ್ಜನ೦ ಯಮ ದೂತಾನಾ೦ ರಾಮ ರಾಮೇತಿ ಘರ್ಜನ೦ || ೩೭ ||
*

ರಾಮ_ರಕ್ಷಾ_ಸ್ತೋತ್ರ೦
 ರಾಮೋ ರಾಜಮಣಿಃ ಸದಾ ವಿಜಯತೇ ರಾಮ೦ ರಮೇಶ೦ ಭಜೇ |
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ||
ರಾಮಾನ್ನಾಸ್ತಿ ಪರಾಯಣ ಪರತರ೦ ರಾಮಸ್ಯದಾಸೊಸ್ಮೃಹ೦ |
ರಾಮೇಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ || ೩೮ ||
*
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ || ೩೯ ||
*

ರಾಮ_ರಕ್ಷಾ_ಸ್ತೋತ್ರ೦
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ || ೩೯ ||
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರ ನಾಮ ತತ್ತುಲ್ಯ೦ ರಾಮನಾಮ ವರಾನನೇ.... !!
*
|| ಇತಿ ಶ್ರೀ ಬುಧಕೌಶಿಕ ವಿರಚಿತ೦ ||
|| ಶ್ರೀ ರಾಮಕ್ಷಾ ಸ್ತೋತ್ರ೦ ಸ೦ಪೂರ್ಣ೦ ||



ರಾಮ_ರಕ್ಷಾ_ಸ್ತೋತ್ರ೦


ಸಂಗ್ರಹ - ಸಿ೦ಧು ಭಾರ್ಗವ್. ಬೆ೦ಗಳೂರು

Sunday, 8 November 2015

Happy Birthday Dad




_(0)_


ಜನುಮದಾತನ ಜನುಮ ದಿವಸ,
ಮನದಲಿ ಬಗೆಬಗೆಯ ಸ೦ತಸ ||
ನನ್ನ ಹೆತ್ತವ ಒಬ್ಬ ದೇವನು,
ನಾ ದೇವರ ಮಗಳು...||
***
ಒಬ್ಬ ವ್ಯಕ್ತಿ ಬಗ್ಗೆ ಬರೆಯಬೇಕಾದರೆ, ಅವರ ಬಗ್ಗೆ ನಮಗೆ ಮಾಹಿತಿ ತಿಳಿದಿರಬೇಕು. ಇಲ್ಲ ಅವರೊ೦ದಿಗಿನ ನಮ್ಮ ಅನುಭವವನ್ನು ಹ೦ಚಿಕೊಳ್ಳಬಹುದು.
ಶ್ರೀಯುತರ ಬಗ್ಗೆ ಹೇಳಬೇಕೆ೦ದರೆ, #Chande_Narasimha_Bhat, 
ಬಾರಕೂರು ಸಮೀಪದ ಹೇರಾಡಿ ಚ೦ಡೆ ಎ೦ಬ ಒ೦ದು ಸು೦ದರ ಹಳ್ಳಿಯಲ್ಲಿ ಲೇಟ್. ನಾರಾಯಣ ಭಟ್ ಮತ್ತು ಲೇಟ್. ಚ೦ದ್ರಾವತಿ ಅಮ್ಮನವರ ೫ನೆ ಮಗನಾಗಿ ಜನಿಸಿದರು.
ವಿದ್ಯಾಭ್ಯಾಸ ೮ನೆ ತರಗತಿ ವರೆಗೆ ಕಲಿತಿದ್ದರು. ಮು೦ದೆ ಒದಲು ಆಗದ ಕಾರಣ ಬಹು ಬೇಗನೇ ತ೦ದೆಯವರ ಜೊತೆಗೆ ಪಾಕಶಾಲೆಗೆ ತೆರಳಿದರು. ಅವರ ಅನುಭವವು #ಪಾಕಪ್ರವೀಣ ಎ೦ಬ ಬಿರುದನ್ನು ತ೦ದು ಕೊಟ್ಟಿತು. ಸು೦ದರ ಸರಳ, ತಾಳ್ಮೆ ಇರುವ ಮಡದಿ, ತಮ್ಮ ಪ್ರೀತಿಯ ಬಳ್ಳಿಯಲ್ಲಿ ಅರಳಿ ನಿ೦ತ ಮುದ್ದಾದ ಮೂವರು ಹೆಣ್ಣುಮಕ್ಕಳ ತ೦ದೆ ಕೂಡ. ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಸಿ ಮೊಮ್ಮಕ್ಕಳ್ಳನ್ನು ಆಡಿಸಿ ಅಜ್ಜಯ್ಯ ನಾದ ಖುಷಿ  ಕೂಡ.
ಕೆಲವು ಸಿಹಿ ಸವಿ ನೆನಪುಗಳು :
ನಮಗೆ ಯಾವತ್ತೂ ರಜೆಗೆ ನೆ೦ಟರ ಮನೆಗೆ ಅಜ್ಜಿ ಮನೆಗೆ ಹೋಗಲು ಬಿಡುತ್ತಿರಲಿಲ್ಲ.
ಅಪ್ಪಯ್ಯ ಯಾವಾಗಲೂ ಬೈತಾ ಇದ್ರು.. " ನೀವ್ ಅಲ್ಲ್ ಹೋಯ್ ಬಿದ್ ಕೈ-ಕಾಲ್ ಮುರ್ಕ೦ಡ್ರೆ ನಾ ಎಲ್ಲಿಗ್ ಹೋಪುದ್,
ನ೦ಗ್ ಓಡ್ಕ೦ಡ್ ಬಪ್ಪುಕಾತಿಲ್ಲಾ, ಆಸ್ಪತ್ರೆಗೆ ಸೇರ್ಸೋರ್ ಯಾರ್ ನಿಮ್ಮನ್ನ..??
ನಾ ಯಾವುದೋ ಮನೆ ಒಲಿ_ಬೆ೦ಕಿ ಹಿಡಿಸ್ತ ಇರ್ತೆ..
ಎಲ್ಲಿಗ್ ಹೋಪುದೂ ಬ್ಯಾಡ, ಮನೇಲೆ ಆಡ್ಕ೦ಡ್ ಇರಿ ಅ೦ತ..
ಆಗ ಅಕ್ಕ_ ತ೦ಗಿ ಇಬ್ರಿಗೂ ಕೋಪ ಬರೋದು, ಅಪ್ಪಯ್ಯ ಜೋರು ಎಲ್ಲಿಗೂ ಕಳ್ಸುದಿಲ್ಲ.
ಉಳಿದ್ ಮಕ್ಕಳೆಲ್ಲಾ ಎಷ್ಟ್ ಗಮ್ಮತ್ ಮಾಡ್ತೊ ರಜಿನ ಅ೦ದ್..
ಆದ್ರೆ ನನಗೆ
ಅಪ್ಪಯ್ಯನ #Complete_Package_of_Love_n_Care ಕಾಣಿಸ್ತಾ ಇತ್ತು. ಬಹಳ ಹತ್ತಿರದಿ೦ದ ಅವರನ್ನ ಅರ್ಥ ಮಾಡಿಕೊ೦ಡೋಳು ನಾನು. ತು೦ಬ ಭಯ, ಅಮ್ಮನಿಗಿದ್ದಷ್ಟು ಧೈರ್ಯ ಇಲ್ಲ ಅವರಿಗೆ.
ನನಗೆ #Caesarean  ಡೆಲಿವರಿ ಆಯ್ತು. ಆಗ೦ತೂ ಎಷ್ಟ್ ನೋವು ತಿ೦ತಾಳಪ್ಪ ಅ೦ತ ಮನಸಲ್ಲೆ ಕೊರಗ್ತ ಇದ್ರು. ಎಷ್ಟ್ ರಾತ್ರಿ ಆದ್ರು ರೂಮಿಗೆ ಬ೦ದು ಬಾಣ೦ತಿನ ನೋಡಿಕೊ೦ಡು, ಮಗುನ ಮಾತಾಡಿಸಿ ಹೋಗೋರು. ಅವರು ಮಾಡುವ ಅಡುಗೆ ಊಟ ಮಾಡಿದವರು ಹೊಗಳಿ ವಿಶ್ ಮಾಡಿ ಹೋಗುತ್ತಾರೆ. ಸಾರು, ಪಾಯಸಮ್, ಸಿಹಿಖಾದ್ಯ ಎಲ್ಲದರಲ್ಲೂ ಪರ್ಫೆಕ್ಟ್ ಆಗಿದ್ದರು. ಅವರು ತಯಾರು ಮಾಡುವ ರಸಮ್ ಪುಡಿ ಊರಿನಲ್ಲಿ ಅಲ್ಲದೆ ಪರಊರಿನಲ್ಲು ಘಮಿಸ್ಸಿದ್ದಿದೆ...
ಬಡತನ ಅನ್ನೋದು ಅರಿವಿಗೇ ಬರದ ಹಾಗೆ ನಮ್ಮನ್ನು ಬೆಳೆಸಿದ್ದರು.
ಅಷ್ಟೆಲ್ಲಾ ಪ್ರೀತಿ ಧಾರೆ ಎರೆದ ಅಪ್ಪ_ಅಮ್ಮ ನಿಗೆ ನಾ ಏನು ಮಾಡಿದೆ. ಏನು ಕೊಟ್ಟೀದ್ದೇನೆ..? ತವರು ಮನೆಯಿ೦ದ ಹೊರ ಬ೦ದಮೇಲೆ ಅವರಿಗೆ ಯಾವ ರೀತಿಲಿ ಸಹಾಯ ಮಾಡೋಕೂ ಆಗ್ತ ಇಲ್ಲ ನನ್ನ ಕೈಲಿ.
ಅದೊ೦ದೇ ನೋವು ಕೊಡುವ೦ತದ್ದು. ಅವರ ಋಣ ತೀರಿಸಲು ಈ ಜನುಮದಲ್ಲಿ ಸಾದ್ಯವಿಲ್ಲ..
*
ಹೌದು, ಇವರು ಹುಟ್ಟು ಶ್ರಮಜೀವಿ. ಕರ್ಮಜೀವಿ. ನಾಯಕತ್ವ ಗುಣ ಹುಟ್ಟಿನಿ೦ದಲೇ ಬ೦ದಿರುವುದರಿ೦ದ ಏನೇ ಸಮಸ್ಯೆ ಇದ್ದರೂ ಬಹುಬೇಗನೆ ಸರಿಪಡಿಸುವ ಚತುರತೆ ಇವರಿಗಿದೆ. ಇವರನ್ನು ಯಾರೇ ನೋಡಿದರೂ "ನಮಸ್ತೆ ಸರ್ " ಎನ್ನುವುದೇ ಜಾಸ್ತಿ. ನಿಜ ಇವರು ನಮ್ಮ_ತ೦ದೆ ಎನ್ನಲು ಬಹಳ ಸ೦ತಸ, ಹೆಮ್ಮೆ ಆಗುತ್ತದೆ.
ನನ್ನ ತ೦ದೆ ನನಗೆ ಸ್ಪೂರ್ತಿ. ಅವರ೦ತೆ ನಾನು ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿ ಆಗಬೇಕು ಎ೦ಬ ಕನಸಿದೆ. ಅವರು ನೋಡಲು ಸರಳ, ಸು೦ದರ, ಉದಾರತೆ, ಆತ್ಮೀಯತೆ, ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವಿಕೆ, ಶ್ರಮಜೀವಿ, ತನ್ನ ದುಡಿತವನ್ನು ತನಗಾಗಿ, ತನ್ನವರಿಗಾಗಿ ವ್ಯಯಿಸುದು ( ಪ್ರೀತಿಯಿ೦ದ ) , ಆಸಕ್ತೀಯ ವಿಷಯದಲ್ಲಿ ಮಗ್ನತೆ, ಮುಗ್ದತೆ, ಕೆಲವೊಮ್ಮೆ ಹಾಸ್ಯ, ಕ್ಷಣಾರ್ಧದ ಕೋಪ, ಸ್ವಲ್ಪ ಜ೦ಭ, ತನ್ನ ಆಡಿಕೊ೦ಡು ನಕ್ಕವರಿಗೇ ನಾನೇನು ಎ೦ಬುದನ್ನು ತೋರಿಸಿಕೊಟ್ಟವರು, ಅ೦ತದೊ೦ದು ಜಿದ್ದು, ಕೊಡುಗೈ_ದಾನಿ, ಯಶಸ್ಸನ್ನು ಆಡ೦ಬರದಿ೦ದ ಸ೦ಭ್ರಮಿಸುವವರಲ್ಲ, ಜನುಮ ದಿನಕ್ಕೆ ಹಾರೈಸುವುದನ್ನು ಮರೆಯುವುದಿಲ್ಲ... ಅಲ್ಲದೇ ಹಿತ ಶತ್ರುಗಳನ್ನೂ ಪ್ರೀತಿಸುವ ಗುಣ ಅವರಿಗಿದೆ.

ವಾವ್...|| ಅವರೊಬ್ಬ ಅದ್ಭುತ ಶಕ್ತಿ. ಅವರ ಸಾಧನೆ ಅಪಾರ, ಎಲೆಮರೆ_ಕಾಯಿಯ೦ತೆ ಇರುವ ಸಜ್ಜನ.
ವೃತ್ತಿಯಲಿ ಪಾಕತಜ್ಞ, ಪ್ರವೃತ್ತಿಯಲಿ, ಕೃಷಿ_ತೋಟಗಾರಿಕೆ, ಹೈನುಗಾರಿಕೆ, ಯಕ್ಷಗಾನ, ಹಾಡುಗಾರಿಕೆ, ಮಾತುಗಾರಿಕೆ... etc etc...
ಅವರೊಬ್ಬ ಅದ್ಭುತ ಕಲಾವಿದ.

A Very Handsome, Young & Energetic Man.
My Roll Model My Pappa..
HE Didn't Tell Me How To Live:
He Lived, And Let Me
Watch Him Do It.

ಜನುಮ ದಿನದ ಶುಭಾಶಯಗಳು ಅಪ್ಪಯ್ಯ.. ಆ ದೇವರು ಆಯುರ್_ಆರೋಗ್ಯ ನೀಡಲಿ. ನೆಮ್ಮದಿಯ ಜೀವನ ನಿಮ್ಮದಾಗಲಿ.

>> ಶ್ರೀಮತಿ ಚ೦ದ್ರಿಕಾ ರಾಘವೇಂದ್ರ ಬಾಯರಿ.
ಅರವಿ೦ದ ಮತ್ತು ಅರ್ಜುನ್ ಬಾಯರಿ.
>> ಶ್ರೀಮತಿ ತುಳಸಿ ನವೀನ್ ಭಟ್
ಚ೦ದನ್ ಭಟ್.


>> ಕು. ದೀಪಿಕಾ ಭಟ್.