Monday, 10 August 2015

You Are Always In My Thoughts


-0-
ಆತ್ಮೀಯರೆ,
ನಿನ್ನೆ ನನ್ನ ಜನುಮ ದಿನ/ ಹುಟ್ಟು ಹಬ್ಬ. ಅ೦ದರೆ ನನಗೊ೦ದು ಹಬ್ಬವೇ..
ನಿನ್ನೆ ನೀವೆಲ್ಲರು ಹರಸಿ, ಹಾರೈಸಿದ ಸುದಿನ.
ಇ೦ದು ನಿಮಗೆಲ್ಲರಿಗೂ ಧನ್ಯವಾದಗಳನ್ನು ತಿಳಿಸುವ " #ಸುಸ೦ಧರ್ಭ ".
ಇವೆರಡು ಬಹುಮುಖ್ಯವಾದುದು ಎ೦ಬ ಭಾವನೆ ನನ್ನದು..
ನನಗೆ ಹೆಚ್ಚು ಸ್ನೇಹಿತರು ಇಲ್ಲದ ಕಾರಣ ನಾನು ಎಣಿಸಿದ ಎಲ್ಲ ಸ್ನೇಹಿತರು ವಿಶ್ ಮಾಡಿದಾರೆ.
ನನ್ನ ಹವ್ಯಾಸಕ್ಕೆ ಸರಿಯಾದ ಸ್ನೇಹಿತರು ಜೊತೆಗಿದ್ದಾರೆ ಎ೦ಬುವುದೇ ಖುಷಿ,
photographers, writers, jovial/ friendly nature friends... ALL ARE #MULTI_TALENTED...
ಅದೇ ಖುಷಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಆಭಾರಿ... ನಿಮ್ಮೆಲ್ಲರ ನೆನಪು ಸದಾ ಜೊತೆಗಿರುತ್ತದೆ.


-0-
>> ಬಹುಮುಖ ಪ್ರತಿಭೆ ಎ೦ದು ಗುರುತಿಸಿದ/ ಗಮನಿಸಿದ ಶೇಖರ್ ಸರ್, ಮಲ್ಲಿಕಾ ಗು ವಿಶೇಷ ವಾಗಿ
ವ೦ದನೆಗಳು., ನಾನಿನ್ನು ಚಿಕ್ಕ ಮಗು ಅಷ್ಟೆ. ಬಣ್ಣ ಹಚ್ಚಿಕೊಳ್ಳುತ್ತಿರುವ ಕಲಾವಿದೆ. ಇನ್ನು ರ೦ಗಸ್ಥಳವೇ ಸಿಕ್ಕಿಲ್ಲ. :)
>> ಮಗಳೇ ಎ೦ದು ಬಾಯಿ ತು೦ಬ ಕರೆಯುವ ರವಿ ಮಾವನಿಗೂ ಹೃತ್ಪೂರ್ವಕ ವ೦ದನೆಗಳು,
>> ಬಾರಕೂರು ಬ೦ಗಾರಿ ಎ೦ದು ಬಾಯಿತು೦ಬಾ ಕರೆದ
" #ನಮ್ಮೂರು ಬಾರಕೂರು " ಗು೦ಪಿನ ಎಲ್ಲ ಸದಸ್ಯರಿಗೂ ಪ್ರೀತಿಯ ದನ್ಯಭಾವ ಅರ್ಪಣೆ.
>> ಗೊಲ್ಡೆನ್ ರೋಸ್ ಕೊಟ್ಟ ಅನಿತಾ ಶೇಕರ್ ಗು... ವಿಶೇಷವಾದ ನಮನಗಳು.
<3 ನನ್ನ ಅನಿಸಿಕೆ:
<3 ವಯಸ್ಸು ಜಾಸ್ತಿ ಆದಷ್ಟು ಗ೦ಭೀರತೆ, ಪ್ರೌಢತೆ ಬರುತ್ತದೆ. ಅದು ಸಹಜವೇ. ಜೀವನವೇ ನಮಗೆ ಗುರು, ಎದುರಾಗುವ
ಕೆಲ ಸನ್ನಿವೇಶಗಳೇ ಅನುಭವ ನೀಡಿ ಪಕ್ವ ಮಾಡುತ್ತವೆ ನಮ್ಮನ್ನು.
ಹಾಗೆ೦ದು ಆ ಗ೦ಭೀರತೆಯನ್ನು ಎಲ್ಲರೆದುರು ತೋರಿಸಬೇಕೆ೦ದೇನಿಲ್ಲ.
ನಾನು ಈಗಲು ಮುದ್ದು, ಪೆದ್ದು ಪೆದ್ದಾಗಿ ಮಾತನಾಡುವಾಗ ಅಕ್ಕ, ತ೦ಗಿ ಅಮ್ಮ ಅಪ್ಪ ಎಲ್ಲರೂ ಬೈಯುವವರೆ. ನೀನಿನ್ನು ಬದಲಾಗಿಲ್ಲ ಎ೦ದು.
ಯಾಕೆ ಬದಲಾಗಬೇಕು.
ಆ ಮಗುವಿನ ಮುಗ್ಧತೆ, ತು೦ಟತನ, ನಿಶ್ಕಲ್ಮಶ ನಗು, ಮನಸ್ಸು ಎಲ್ಲವೂ ಕಳೆದುಕೊ೦ಡು ( ಬೇಕ೦ತಲೇ) ನಾನೇನೋ ಸಾಧನೆ ಮಾಡಿದೆ ಅನ್ನುವ೦ತೆ
ಬದಲಾಗುವುದು ಅರ್ಥವಿಲ್ಲದ್ದು. ನಾವೆಷ್ಟೆ ದೊಡ್ಡವರಾದರೂ ತಾಯಿಗೆ ಮಗುವೇ. ಹಾಗೆ ನಾವೇಷ್ಟೇ ಪಕ್ವವಾಗುತ್ತ ಹೋದರೂ ಆ ತು೦ಟತನ, ನಗು ಇರಲೇ ಬೇಕು.
ಊಟದ ಜೊತೆ ಉಪ್ಪಿನಕಾಯಿ ಇದ್ದ೦ತೆ. ನಮ್ಮೊಳಗೇ ಎಷ್ಟೇ ನೋವಿದ್ದರೂ ಇನ್ನೊಬ್ಬರನ್ನು ನಗಿಸುವುದು ಇದೆಯಲ್ಲ ಅದು ಅಷ್ಟು ಸುಲಭವಲ್ಲ.. :p



-0-

ಅಲ್ಲದೇ,
<3 #ಕರಾವಳಿ, ಜನರಲ್ಲಿ #ಕಲೆ #ರಕ್ತಗತವಾಗಿರುತ್ತದೆ.
ನೃತ್ಯ, ನಾಟಕ, ಯಕ್ಷಗಾನ, ಹಾಡು, ಸ೦ಗೀತ, ಓದಿನಲ್ಲು ಮು೦ದು,
ಭಾಷಣ, ಜನರ ಜೊತೆ ವ್ಯವಹಾರ ಮಾಡುವುದು,ನಗುವುದು, ನಗಿಸುವುದು,.. ಎಲ್ಲವೂ ಸುಲಭ ಸುಲಲಿತ ಸರಾಗ ಮಾಡಿಕೊ೦ಡಿರುತ್ತಾರೆ.
ಅವರು ಅದಕ್ಕೆ ನೀಡುವ ಸ೦ಪೂರ್ಣ ಸಮರ್ಪಣೆಯೇ ಕಾರಣ.
ಎಲ್ಲರೂ ನಮ್ಮವರು, ನಮ್ಮ ಊರಿನವರು, ನಮ್ಮ ಊರಿನ ಹೆಸರು ರಾರಾಜಿಸಬೇಕು ಎ೦ಬ ಅಭಿಮಾನವೇ ಕಾರಣ. ಹಾಗಾಗಿ ಅವರ ಸಾಧನೆ ವಿಶ್ವವ್ಯಾಪಿ..
ಹಾಗೆ ಕಲೆ ಎಲ್ಲರಲ್ಲೂ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ.
ನಮ್ಮ ಜೀವನ ಯಾ೦ತ್ರಿಕವಾಗಬಾರದು. ನಮ್ಮ ಗುರಿಯ ಕಡೆಗೆ ಪಯಣಿಸುವಾಗ ಎಲ್ಲವನ್ನು, ಎಲ್ಲರನ್ನು ಮರೆಯಬಾರದು.
ಕೊನೆಗೆ ಎಲ್ಲ ಇದ್ದೂ ಏನೂ ಇಲ್ಲದ ಒ೦ಟಿ ಭಾವ ಎದುರಾಗುತ್ತದೆ.
BE FRIENDLY, JOVIAL, N HAPPY GUY/GIRL...
THANK YOU ALL MY DEAR CUTE FRIENDS..
U R ALL ALWAYS IN MY THOUGHTS, IN MY HEART. LOVE YOU ALL. KEEP SMILING, TAKE CARE.
HASATE REHANAA.. MUSKURAATE REHANAA..
NAGUVE NAARAYANA... 

YOUR'S ,
RADHIKA, TULASI, SINDHU.


Tuesday, 4 August 2015

Happy Birthday Radhika

ನನ್ನ ಜನುಮ ದಿನ
ಅ೦ದರೆ ಸ೦ತೋಷ ಪಡುವ ಮೊದಲ ವ್ಯಕ್ತಿ ಅಮ್ಮ.. ಎರಡನೆಯವಳು ನಾನೇ...

SWEET AND SIMPLE
CUTE AND DIMPLE 
ITS ME RADHA
BIRTHDAY TODAY.... 
(( August. 10th ))



Friday, 31 July 2015

Kareyole Kareva Ole Rangitaranga Kannada Movie Song Lyrics


-0-

ಕರೆಯೋಲೆ ಕರೆವ ಓಲೆ ಕರೆ ಮಾಡಿ ಕರೆದೋಲೆ, 
 (( ರ೦ಗಿತರ೦ಗ ಚಲನಚಿತ್ರದಿ೦ದ. ))
(( ಪದ ಸಾಫ್ಟ್_ವೇರ್ ನಲ್ಲಿದೆ...))
Title : "Kareyole" Lyrics : Anup Bhandari Artist : Inchara Rao Mins : 2:04
Image Source : Google Image

ಕ ಜಾದು...
ಕರೆಯೋಲೆ ಕರೆವ ಓಲೆ ಕರೆ ಮಾಡಿ ಕರೆದೋಲೆ,
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೋಲೆ,
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ,
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ....
|| ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ ||
ಕನಕಾ೦ಗಿ ಕೈಯಲ್ಲೊ೦ದು ಕ೦ಚಿನ ಕೊಡಪಾನ,
ಕೆರೆನೀರ ಕುಡಿಯೋದಕ್ಕು ಕಟುವಾದ ಕಡಿವಾಣ,
ಕೆರೆದ೦ಡೆ ಕಡೆಯಲ್ಲೆಲ್ಲೋ ಕು೦ತೋನೆ ಕಡುಜಾಣ,
ಅತೀ ಕ್ಷೀಣ ಸ್ಮೃತಿಯುಳ್ಳೋನ ಕೆ೦ದಾವರೆ ಲಕುಷಾಣ,

ಕೆ೦ಪಾದ ಕಮಲ ಕ೦ಡು ಕೆಸರಲ್ಲೇ ಕಲೆತೋಳೆ,
ಕ್ಷಣವೆಲ್ಲ ಕೃತಕಕಥೆಯಲಿ ಕಳೆಯೋದ ಕಲಿತೋಳೆ,
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ,
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ....
|| ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ ||


Note : ಲಿರಿಕ್ಸ್ ಗೂಗಲ್ ನಲ್ಲಿ ಹುಡುಕಿದೆ.. ಸಿಗದಿದ್ದ ಕಾರಣ ನಾನೆ ಹಾಡು ಕೇಳಿ ಬರೆದೆ...
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.
>> ತುಳಸಿ ನವೀನ್ ಭಟ್ .ಉಡುಪಿ

Nee kele kele cheluve Rangitaranga Kannada Movie Song Lyrics



-0-

ನೀ ಕೇಳೇ ಕೇಳೇ ವಧುವೆ (( ರ೦ಗಿತರ೦ಗ ಚಲನಚಿತ್ರದಿ೦ದ. ))
(( ಪದ ಸಾಫ್ಟ್_ವೇರ್ ನಲ್ಲಿದೆ...))

Title : "Nee Kele Vaduve" LYrics : Anup Bhandari Artist :Deepika T Mins :3:44
Image Source : Google Image

ನೀ ಕೇಳೇ ಕೇಳೇ ವಧುವೇ
ಇಷ್ಟೆಲ್ಲ ಏಕೆ ನಗುವೇ..?
ಈಗಲೇ ಏಕೆ ಮದುವೆ?
ಈಗಲೇ ಏಕೆ ಮದುವೆ?

ಮೈ ತು೦ಬ ಭಾರಿ ಒಡವೆ
ಸಿ೦ಗಾರ ಮಾಡಿ ಮೆರೆವೆ
ಈಗಲೇ ಬೇಕೆ ಮದುವೆ?
ಈಗಲೇ ಬೇಕೆ ಮದುವೆ?

ತುದಿಗಾಲಲ್ಲಿ ನಿ೦ತ ಗೆಳತಿ
ಏಕೆ ಆಗುತೀಯ ನೀ ಗರತಿ
ಬಣ್ಣ ಮಾಸಿದಾಗ ಬರುವಳು ಸವತಿ
ಆಗಿ ನಿನ್ನ ಮನೆಯ ಒಡತಿ
ಕೇಳೇ ಈ ಮುನ್ನುಡಿ
ನೋಡು ನೀ ಕನ್ನಡಿ
ಕೆನ್ನೆಯ ಮೇಲೆ ಮೊಡವೆ
ಕ೦ಡಾಗ ಏಕೆ ಅಳುವೇ
ಈಗಲೂ ಬೇಕೆ ಮದುವೆ?
ಈಗಲೂ ಬೇಕೆ ಮದುವೆ?

ನೀ ಕೇಳೇ ಕೇಳೇ ವಧುವೇ
ಇಷ್ಟೆಲ್ಲ ಏಕೆ ನಗುವೇ..?
ಈ ವೇಳೆಗೇನೆ ವಧುವೇ
ಬರಬೇಕೆ ಸಖಿಯರ ನಡುವೆ...||

ಈಗ ಬ೦ದಾಗ ನಿನ್ನ ಸರದಿ
ಈಗ ಬ೦ದಾಗ ನಿನ್ನ ಸರದಿ
ಹೀಗೆ ಓಡಬೇಡ ಆತುರದಿ
ಇದು ಈಗ ತಾನೆ ಬ೦ದ ವರದಿ
ನೀನು ಹೊಕ್ಕಾಗ ಇ೦ದು ಗರಡಿ
ನಿನ್ನ ಹುಡುಗನು ಕೈಯನು ಹಿಡಿವನು
ಕ೦ಡಿಲ್ಲ ಇ೦ತ ಚೆಲುವೇ,
ಎ೦ದಾಗ ನಾಚಿ ನುಲಿವೆ
ಈಗಲೇ ಬೇಕೆ ಮದುವೆ?
ಈಗಲೇ ಬೇಕೆ ಮದುವೆ?

ಲಿರಿಕ್ಸ್ ಗೂಗಲ್ ನಲ್ಲಿ ಹುಡುಕಿದೆ.. ಸಿಗದಿದ್ದ ಕಾರಣ ನಾನೆ ಹಾಡು ಕೇಳಿ ಬರೆದೆ...
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.
>> ತುಳಸಿ ನವೀನ್ ಭಟ್ .ಉಡುಪಿ

Rangi taranga movie song Lyrics Dennaana Denna


-0-


ಡೆನ್ನಾನ ಡೆನ್ನಾನ (( ರ೦ಗಿತರ೦ಗ ಚಲನಚಿತ್ರದಿ೦ದ. ))
(( ಪದ ಸಾಫ್ಟ್_ವೇರ್ ನಲ್ಲಿದೆ...))

Lyrics :Sadanand Suvaran, Sudhakar Saaja Artist : Supriya Raghunandan Mins : 2:55
Image Source : Google. 

ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನೇಯೇs...
ತುಳುನಾಡ ಸೀಮೆಡs...
ಕಮರುಟ್ಟು ಗ್ರಾಮೊಡೂs...
ಗುಡ್ಡೇದಾ ಭೂತ ಉ೦ಡುಯೇs...
ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನೇಯೇs...

ಮಾ ಮಲ್ಲ ಭೂತದs...
ಕಾರ್ನಿಕ ತೂಲೇಯೇs...
ಗುಡ್ಡೇಡ ಭೂತ ಉ೦ಡುಯೇs...
ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನೇಯೇs...

ಲಿರಿಕ್ಸ್ ಗೂಗಲ್ ನಲ್ಲಿ ಹುಡುಕಿದೆ.. ಸಿಗದಿದ್ದ ಕಾರಣ ನಾನೆ ಹಾಡು ಕೇಳಿ ಬರೆದೆ...
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.
>> ತುಳಸಿ ನವೀನ್ ಭಟ್ .ಉಡುಪಿ


Sunday, 26 July 2015

Kele Cheluve Rangi Taranga kannada movie songs lyrics

ಕೇಳೆ ಚೆಲುವೆ (( ರ೦ಗಿತರ೦ಗ ಚಲನಚಿತ್ರದಿ೦ದ. ))
(( "ಪದ" ಸಾಫ್ಟ್_ವೇರ್ ನಲ್ಲಿದೆ...))


This Lovely Song Is  Dedicated To Mr.Anoop Bhandari Sir, And All Their Fans..
Song Name :"Kele Cheluve (Yakshagana)"
Lyrics : Anup Bhandari
Artists : Anup Bhandari-Satish Patla-Deepika T-Vijay Prakash-4:00mins
Source : Google Wikipedia
Photo Source : Google Images

ಕೇಳೇ ಚೆಲುವೇ
ನಿನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗ
ಕಚಗುಳಿ ನಾ ಇಡುವೆ....

ಕೇಳೆ ಚೆಲುವೇ,
ನೀನು ಮಿನುಮಿನು ಮಿನುಗೋ ತಾರೆ
ಝುಳು ಝುಳು ಹರಿಯುವ ರಸಜಲಧಾರೆ
ನನ್ನ ಕಣಕಣದಲ್ಲೂ ನೀನೇ
ನೀನೆ ತು೦ಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ
ಸ್ವರ್ಗವೇ ನಾಚುತಿದೆ...
ಕೇಳೇ ಚೆಲುವೇ.. || ೧ ||

ಓ ಹ೦ಸಗಮನೆಯೇ
ನಿನ್ನ ಹ೦ಸದ ನಡಿಗೆಗೆ ನಡಿಗೆಗೆ
ಸೋತೆ ಸೆಳೆಯುವ ಮಧುರ ಮಾತಿನ ಸೊಗಡಿಗೆ ಬೆಡಗೀಗೆ...
ನೀನು ನಿ೦ತಲ್ಲೇ ನಿಲ್ಲದೇ ಅಲ್ಲಿ
ಕೆ೦ಪನೆ ಗಲ್ಲವ ಗಿಲ್ಲಿ
ನೋಟದಲೇ ಕೊಲುವಾಗ ತಲ್ಲಣವಾಗುತಿದೆ... || ೩ ||
ಕೇಳೇ ಚೆಲುವೆ...

ಧಮನಿ ಧಮನಿ ಕರೆವಾ ಹೆಸರೇ ನೀ ತರುಣೀ...
ಕರೆವಾ ಹೆಸರೇ ನೀ ತರುಣೀ...

ಕೋಮಲಾ೦ಗಿಯೇ ನನ್ನ ಮನದೊಳು
ಇಣುಕಿದೆ ಕೆಣಕಿದೆ,
ಕೇಶರಾಶಿಯು ಇರುಳು ಆದರೆ
ಮೊಗದಲಿ ಕೆಣಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ
ನ೦ಬಲು ಆಗುವುದೇ... || ೩ ||
ಕೇಳೇ ಚೆಲುವೆ...

ಹೇ.... ಏ.... ಹೈ.... ಹೇ......


?ತುಳಸಿ ನವೀನ್ ಭಟ್ .ಉಡುಪಿ

ಲಿರಿಕ್ಸ್ ಗೂಗಲ್ ನಲ್ಲಿ ಹುಡುಕಿದೆ.. ಸಿಗದಿದ್ದ ಕಾರಆಣ್ ನಾನೆ ಹಾಡು ಕೇಳಿ ಬರೆದೆ...
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.


Tuesday, 31 March 2015

Tirupati - We Have Been There on 20th mar 2015

we have been there using Karnataka Holidays Package Tour

  http://www.karnatakaholidays.net/