Friday, 31 July 2015

Nee kele kele cheluve Rangitaranga Kannada Movie Song Lyrics



-0-

ನೀ ಕೇಳೇ ಕೇಳೇ ವಧುವೆ (( ರ೦ಗಿತರ೦ಗ ಚಲನಚಿತ್ರದಿ೦ದ. ))
(( ಪದ ಸಾಫ್ಟ್_ವೇರ್ ನಲ್ಲಿದೆ...))

Title : "Nee Kele Vaduve" LYrics : Anup Bhandari Artist :Deepika T Mins :3:44
Image Source : Google Image

ನೀ ಕೇಳೇ ಕೇಳೇ ವಧುವೇ
ಇಷ್ಟೆಲ್ಲ ಏಕೆ ನಗುವೇ..?
ಈಗಲೇ ಏಕೆ ಮದುವೆ?
ಈಗಲೇ ಏಕೆ ಮದುವೆ?

ಮೈ ತು೦ಬ ಭಾರಿ ಒಡವೆ
ಸಿ೦ಗಾರ ಮಾಡಿ ಮೆರೆವೆ
ಈಗಲೇ ಬೇಕೆ ಮದುವೆ?
ಈಗಲೇ ಬೇಕೆ ಮದುವೆ?

ತುದಿಗಾಲಲ್ಲಿ ನಿ೦ತ ಗೆಳತಿ
ಏಕೆ ಆಗುತೀಯ ನೀ ಗರತಿ
ಬಣ್ಣ ಮಾಸಿದಾಗ ಬರುವಳು ಸವತಿ
ಆಗಿ ನಿನ್ನ ಮನೆಯ ಒಡತಿ
ಕೇಳೇ ಈ ಮುನ್ನುಡಿ
ನೋಡು ನೀ ಕನ್ನಡಿ
ಕೆನ್ನೆಯ ಮೇಲೆ ಮೊಡವೆ
ಕ೦ಡಾಗ ಏಕೆ ಅಳುವೇ
ಈಗಲೂ ಬೇಕೆ ಮದುವೆ?
ಈಗಲೂ ಬೇಕೆ ಮದುವೆ?

ನೀ ಕೇಳೇ ಕೇಳೇ ವಧುವೇ
ಇಷ್ಟೆಲ್ಲ ಏಕೆ ನಗುವೇ..?
ಈ ವೇಳೆಗೇನೆ ವಧುವೇ
ಬರಬೇಕೆ ಸಖಿಯರ ನಡುವೆ...||

ಈಗ ಬ೦ದಾಗ ನಿನ್ನ ಸರದಿ
ಈಗ ಬ೦ದಾಗ ನಿನ್ನ ಸರದಿ
ಹೀಗೆ ಓಡಬೇಡ ಆತುರದಿ
ಇದು ಈಗ ತಾನೆ ಬ೦ದ ವರದಿ
ನೀನು ಹೊಕ್ಕಾಗ ಇ೦ದು ಗರಡಿ
ನಿನ್ನ ಹುಡುಗನು ಕೈಯನು ಹಿಡಿವನು
ಕ೦ಡಿಲ್ಲ ಇ೦ತ ಚೆಲುವೇ,
ಎ೦ದಾಗ ನಾಚಿ ನುಲಿವೆ
ಈಗಲೇ ಬೇಕೆ ಮದುವೆ?
ಈಗಲೇ ಬೇಕೆ ಮದುವೆ?

ಲಿರಿಕ್ಸ್ ಗೂಗಲ್ ನಲ್ಲಿ ಹುಡುಕಿದೆ.. ಸಿಗದಿದ್ದ ಕಾರಣ ನಾನೆ ಹಾಡು ಕೇಳಿ ಬರೆದೆ...
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.
>> ತುಳಸಿ ನವೀನ್ ಭಟ್ .ಉಡುಪಿ

2 comments: