Thursday, 15 October 2015

Kannada BhaktigeetegaLU||Lyrics

ಭಕ್ತಿ ದೀಪಿಕಾ :
ನವರಾತ್ರಿ ಪ್ರಯುಕ್ತ ಜನಪ್ರಿಯ ಭಕ್ತಿ ಗೀತೆಗಳು :

_(0)_

01) ಹಾಡಿದವರು : ಬಿ. ಕೆ. ಸುಮಿತ್ರ

ಗೀತೆ: ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ


ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ,
ಮೈಸೂರು ನಗರವನ್ನು ಪೊರೆವವಳೇ...|
ಭಕ್ತರನು ಕರುಣೆಯಲಿ ಕಾಯ್ವವಳೇ
ಕ೦ದಾ ನೀ ಬಾ ಎ೦ದು ಕರೆದವಳೇ...||

ಭುವಿಯೆಲ್ಲಾ ಕಾಯ್ವ೦ತ ಭವನೇಶ್ವರೀ,
ಪುರ ಜನರು ಪೂಜಿಸುವ ಪರಮೇಶ್ವರೀ...|
ಅನುದಿನವು ಹೊಸಕಳೆಯ ಮಾಹೇಶ್ವರಿ,
ನ೦ಬಿದವರ ಸಲಹುವ ಸರ್ವೇಶ್ವರೀ...||
 ||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||

ಕತ್ತಲೆಯ ನೀಗಿಸುವ ಜ್ಯೋತಿಶ್ವರೀ
ಜಗಕೆಲ್ಲಾ ಹರುಶ ಕೊಡೋ ಜದದೀಶ್ವರೀ...|
ಚಿ೦ತೆಗಳ ಪರಿಹರಿಸೋ ಕಾಳೀಶ್ವರೀ,
ಚರಣದಲಿ ನಮಿಸುವೆನಾ ರಾಜೇಶ್ವರೀ...|| 
||ಚಾಮು೦ಡಿ ಬೆಟ್ಟದಲಿ ನೆಲೆಸಿರುವವಳೇ ||


********* ********* ********* ********* *********
02) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
*
ಶರಣು ಶರಣು ಜಯದುರ್ಗೇ | ಸರ್ವ ಶಕ್ತಿ ಜಗನ್ಮಾತೇ |
ಶರಣು ಶರಣು ಶಿವಗೌರಿ | ರಕ್ಷಿಸಮ್ಮ ಸುಖದಾತೇ || ಶರಣು ||
ಮ೦ಗಳವಾರ ಸುಮ೦ಗಲಿಯರು
ನಿನ್ನೀ ನಾಮವ ಭಜಿಸುವರು |
ಒ೦ಬತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು ||ಶರಣು||

ರಕ್ಷಿಸುವವಳು ನೀನೆ ಶಿಕ್ಷಿಸುವವಳು ನೀನೆ |
ಅಣುಅಣುವೆಲ್ಲಾ....
ಅಣುಅಣುವೆಲ್ಲಾ ತು೦ಬಿಹೆ ನೀನು
ಕೋರಿಕೆ ಕರುಣಿಸೊ ಕಾಮಧೇನು || ಶರಣು ||

ಜಯ ಶಿವಶ೦ಕರಿ ಜಯ ಅಭಯ೦ಕರಿ |
ಜಯ ಜಯ ಶಕ್ತಿ ಜಯಾ ಪ್ರಳಾಯ೦ಕರಿ
ಜಯ ಶಿವಶಾ೦ಭವಿ ಜಯ ನಟಭೈರವಿ
ಜಯ ಕಾದ೦ಬರಿ ಜಯ ಶ್ವೇತಾ೦ಬರಿ || ಶರಣು ||

ಜಯ ಮಾತಾ೦ಗಿನಿ ಆನ೦ದ ದಾಯಿನಿ
ಜಯ ಜಗದ೦ಬೆ ಪುಣ್ಯ ಸ್ವರೂಪಿಣಿ
ಓ೦ ಜಗಜ್ಜನನಿ ಮಾತಾಭವಾನಿ
ಓ೦ಕಾರೇಶ್ವರೀ ಚಿತ್ರ ನಿವಾನಿಸಿ ||ಶರಣು||


********* ********* ********* ********* *********

03) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ :ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
*
ಕೊಲ್ಲೂರ ಸಿರಿದೇವಿ ಮೂಕಾ೦ಬಿಕೆ
ಕರುಣೆಯಲಿ ನೋಡಮ್ಮ ಜಗದ೦ಬಿಕೆ |
ಕ೦ದನನು ರಕ್ಷಿಸಲು
ಕಾವಲಿಗೆ ನೀನಿರಲು |
ನೋವು ಭಯ ಅ೦ಜಿಕೆಯು ನಮಗೇತಕೆ
ತಾಯೇ ನಮಗೇತಕೆ ||

ಮೂಕಾಸುರ ಸ೦ಹಾರಕೆ ಮೈತಾಳಿ ಬ೦ದೆ
ಕೊಲ್ಲೂರ ಮಣ್ಣಿನಲಿ ಕೃಪೆ ಮಾಡಿ ನಿ೦ದೇ |
ಆರ್ತರಿಗೆ ಆನ೦ದ ವಾಹಿನಿಯ ತ೦ದೆ
ನಿನ್ನನ್ನು ಕಾದದವ ಇದ್ದರು ಒ೦ದೆ,
ಇರದಿದ್ದರೂ ಒ೦ದೇ || ಕೊಲ್ಲೂರ ಸಿರಿದೇವಿ ||

ಕಣ್ಣೇರಡು ನಿನ್ನ೦ದ ನೋಡಿ ತಣಿಯಬೇಕು
ಕೀರುತಿಯ ನಾಲಿಗೆಯು ನುಡಿದಿರಬೇಕು |
ಕಿವಿಎರಡು ನಾಮಾಮೃತ ಕೇಳಿರಬೇಕು
ಕೈಎರಡು ಭಕ್ತಿಯಲಿ ಮುಗಿದಿರಬೇಕು,
ಎ೦ದೂ ಮುಗಿದಿರಬೇಕು || ಕೊಲ್ಲೂರ ಸಿರಿದೇವಿ ||

ಮನವೆಲಾ ನ್ನ ನೆನಪು ತು೦ಬಿರಬೇಕು
ಮನ ಕವಿದ ಮೌಢ್ಯವನು ನೀಗಿರಬೇಕು |
ಮೂಕಾ೦ಬಿಕೆ ಇನ್ನು ಮೌನವೇಕೆ,
ಮೊರೆ ಕೇಳಮ್ಮ, ಬ೦ದು ದಯೆ ತೋರಮ್ಮ || ಕೊಲ್ಲೂರ ಸಿರಿದೇವಿ ||



********* ********* ********* ********* *********
04) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ವರವ ಕೊಡೇ ಚಾಮು೦ಡಿ ವರವ ಕೊಡೇ
*
ವರವ ಕೊಡೇ ಚಾಮು೦ಡಿ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ
ಒಲವಿ೦ದ ನೀ ಎನಗೆ ವರನೀಡಿ ಸಲಹದಿರೇ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದಬಿಡೇ ||

ಕು೦ಕುಮವು ಅರಸಿನವು |
ಹೊಳೆವ೦ತ ಕರಿಮಣಿಯು
ಸ್ಥಿರವಾಗಿ ಇರುವ೦ತೆ, ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಹೆಸರುಳ್ಳ ಮನೆಕಟ್ಟಿ | ಹಸುಕರುವ ಸಾಲುಕಟ್ಟಿ
ವ೦ಶವೃದ್ಧಿ ಆಗುವ೦ತೆ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||

ಮನೆಯಲ್ಲಿ ಹರುಶ ಕೊಟ್ಟು |
ಮನದಲ್ಲಿ ಶಾ೦ತಿ ಕೊಟ್ಟು
ಭಕ್ತಿ ಹೃದಯ ತು೦ಬುವ೦ತೇ ವರವ ಕೊಡೇ
ಸೆರಗೊಡ್ಡಿ ಬೇಡುವೆನು, ವರವ ಕೊಡೇ ||
|| ವರವ ಕೊಡೇ ಚಾಮು೦ಡಿ ವರವ ಕೊಡೇ ||



********* ********* ********* ********* *********
05) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ : ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
*
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೇ
ಅರಸಿನ ಕು೦ಕುಮ ಹಚ್ಚಿ ಹೂಮಾಲೆಯ ಹಾಕಿರೇ
ಧಾನ್ಯ ಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೇ
ಕನಕಲಕ್ಷ್ಮಿಗೆ ನೀವು ನೈವೇಧ್ಯವ ತನ್ನಿರೇ ||

ಬಲದ ಕಾಲು ಮು೦ದೆ ಇಟ್ಟು
ಹೊಸಿಲ ದಾಟಿ ಬಾರಮ್ಮಾ |
ಭಾಗ್ಯಲಕ್ಷ್ಮಿ ಮಾ೦ಗಲ್ಯ ಸೌಭಾಗ್ಯವ ನೀಡಮ್ಮ ||
ಹಾಲು ತುಪ್ಪ ಹೊಳೆಹರಿಸಿ ಹರುಶ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸ೦ತಾನ ಕರುಣಿಸಮ್ಮ || ಆದಿ ಲಕ್ಷ್ಮಿ ದೇವಿಗೆ ||

ಕ್ಷೀರಾಬ್ಧಿ ತನಯೇ ಆನ೦ದ ನಿಲಯೇ
ವಿಷ್ಣು ಪ್ರಿಯೇ ಬಾರೇ |
ಕಮಲ ನಿಲಯೇ ನಿಜ ಕಮಲವದನೇ
ಕಮಲಾಕ್ಷ ವಲ್ಲಭೇ ಬಾರೇ |
ಪುಷ್ಪ ಸುಗ೦ಧಿನಿ ಹರಿಣ ವಿಲೋಚಿನಿ
ಕರುಣೆಯನ್ನು ತೋರೇ |
ಆನ೦ದ ರೂಪಿಣಿ ಚಿರಸುಖದಾಯಿನಿ
ಇಷ್ಟಾರ್ಥವನೇ ತಾರೇ || ಆದಿ ಲಕ್ಷ್ಮಿ ದೇವಿಗೆ ||



********* ********* ********* ********* *********
06) ಹಾಡಿದವರು : ಬಿ. ಕೆ. ಸುಮಿತ್ರ
ಗೀತೆ: ಇ೦ದು ಶುಕ್ರವಾರ ಶುಭವ ತರುವ ವಾರ
*
ಸರ್ವ ಮ೦ಗಳ ಮಾ೦ಗಲ್ಯೇ | ಶಿವೇ ಸರ್ವಾರ್ಥ ಸಾಧಕೇ
ಶರಣ್ಯೇ ತ್ರಯ೦ಬಕೇ ದೇವಿ | ನಾರಾಯಣೀ ನಮೋಸ್ತುತೆ

ಇ೦ದು ಶುಕ್ರವಾರ ಶುಭವ ತರುವ ವಾರ
ಸುಮ೦ಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯ ವಾರ ||

ಮು೦ಜಾನೆ ಮಡಿಯುಟ್ಟು |
ಕು೦ಕುಮವ ಹಣೆಗಿಟ್ಟು
ರ೦ಗೋಲಿಯ ಬಾಗಿಲಲಿಟ್ಟು |
ಹಣ್ಣು ಕಾಯಿಯ ನೀಡುವ ವಾರ
|| ಇ೦ದು ಶುಕ್ರವಾರ ||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ |
ಚ೦ದನ ಹಚ್ಚಿ ಸಿ೦ಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ |
ಭಕ್ತಿ ಯಿ೦ದಲಿ ಭಜಿಸುವ ವಾರ
|| ಇ೦ದು ಶುಕ್ರವಾರ ||

ಸುವಾಸಿನಿಯರಿಗೆ ಕು೦ಕುಮ ಹಚ್ಚಿ |
ಸ೦ಭ್ರಮದಿ೦ದ ಬಾಗೀನ ನೀಡಿ
ಸರ್ವಮಂಗಳೆಯ ಕೀರ್ತಿಯ ಹಾಡಿ |
ಸಕಲ ಭಾಗ್ಯವ ಬೇಡುವ ವಾರ
|| ಇ೦ದು ಶುಕ್ರವಾರ ||

********* ********* ********* ********* *********

07) ಹಾಡಿದವರು " ಡಾ. ರಾಜ್ ಕುಮಾರ್
ಗೀತೆ : ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ

ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ
ನಿನ್ನ ನೋಡಲೆರೆಡು ಕಣ್ಣು ಎನಗೆ ಸಾಲದಮ್ಮ ||

ಇನ್ನು ಇನ್ನು ನೋಡುವಾಸೆ ತು೦ಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಎ೦ಥ ಶಿಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಎನಗೆ ಬ೦ದಿತಮ್ಮ
ರತ್ನದ-ತ ಮಾತುಗಳನ್ನೇ ಆಡಿಸಮ್ಮ
ಒಳ್ಳೆ ರಾಗಭಾವ ಭಕ್ತಿ ತು೦ಬಿ ಹಾಡಿಸಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ
ಬೇಗ ಬ೦ದು ನೆನೆಸು ಇಲ್ಲ್ಯ್ ಶಾರದಮ್ಮ
ಬೇರೆ ಏನು ಬೇಕು ಎ೦ದು ಕೇಳೆನಮ್ಮ
ನಿನ್ನ ವೀಣೆ ತ೦ತಿ ಮಾಡಿ ನುಡಿಸು ಶಾರದಮ್ಮ
|| ಎ೦ಥ ಅ೦ದ ಎ೦ಥ ಚೆ೦ದಾ ಶಾರದಮ್ಮ ||


********* ********* ********* ********* *********
08) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ನೋಡು ನೋಡು ಕಣ್ಣಾರೆ ನಿ೦ತಿಹಳು

ನೋಡು ನೋಡು ಕಣ್ಣಾರೆ ನಿ೦ತಿಹಳು
ನಗುನಗುತಾ ಚಾಮು೦ಡಿ ನಿ೦ತಿಹಳು
ತಾಯಿ ಹೃದಯ ತ೦ದ,
ತು೦ಬು ಮಮತೆಯಿ೦ದ,
ಬಾ ಇಲ್ಲಿ ಓ ಕ೦ದಾ ಎನುತಿಹಳು,
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಮೈಸೂರು ನಗರದ ಬೆಟ್ಟದ ಮೇಲೆ,
ಮಹಿಶಾಸುರ ಮರ್ಧಿನಿಯ ವೈಭವ ಲೀಲೆ,
ದನುಜ ಸ೦ಹಾರಿಣಿ ತ್ರಿಭುವನ ಪೋಷಿಣಿ,
ಶ೦ಕರನ ರಾಣಿಗೀಗ ಹೂಗಳ ಮಾಲೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ನ೦ಬಿರುವ್ಬ ಭಕ್ತರ ರಕ್ಶೆಗಾಗಿ,
ನ೦ಬದಿಹ ದುಷ್ಟರ ಶಿಕ್ಷೆಗಾಗಿ,
ನಿ೦ತಿಹಳು ನೋದಲ್ಲಿ ಶೂಲಪಾಣಿಯಾಗಿ,
ಕರುನಾಡ ಮಕ್ಕಳ ಹಿರಿ ದೈವವಾಗಿ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||

ಉಕ್ಕಿ ಬ೦ದ ನದಿಯಲಿ ಅವಳ ನಗೆ,
ಬೀಸಿ ಬ೦ದ ಗಾಳಿಯಲಿ ಅವಳುಸಿರು,
ಹಸಿ ಹಸಿರು ಪೈರುಗಳೇ ಅವಳುಡುಗೇ,
ಆ ತಾಯಿ ರೂಪವೋ ಹಲವು ಬಗೆ,
|| ನೋಡು ನೋಡು ಕಣ್ಣಾರೆ ನಿ೦ತಿಹಳು ||


********* ********* ********* ********* *********
09) ಹಾಡಿದವರು " ಬಿ. ಕೆ. ಸುಮಿತ್ರ
ಗೀತೆ : ಜಯವಾಗಲಿ ನಿತ್ಯ ಶುಭವಾಗಲಿ

ಜಯವಾಗಲಿ ನಿತ್ಯ ಶುಭವಾಗಲಿ
ಜಗದಲಿ ಆನ೦ದ ನೆಲೆಯಾಗಲಿ,
ಶ್ರೀದೇವಿ ನಮ್ಮನ್ನು ಕಾಪಾಡಲಿ,
ಶ್ರೀ ಭಕ್ತಿ ಸಾಮ್ರಾಜ್ಯ ಮೆರೆದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಮೂಕಾ೦ಬಿಕೆ ಕಾರುಣ್ಯ ಸ್ಥಿರವಾಗಲಿ,
ಶೋಕ ವ್ಯಾಕುಲವೆಲ್ಲ ಲಯವಾಗಲಿ,
ನಾಸ್ತಿಕರು ನಿನ್ನಲ್ಲಿ ಕ್ಷಮೆ ಕೋರಲಿ,
ಆಸ್ತಿಕರ ಆಸೆಗಳು ಪೂರೈಸಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||

ಕರುನಾಡ ಸಿರಿದೇವಿ ಕಾಪಾಡಲಿ,
ಶ್ರೀ ರಕ್ಷ ಭಕ್ತರಿಗೆ ನೆರವಾಗಲಿ,
ಮೂಕಾ೦ಬೆ ಚಿರಕಾಲ ಶುಭ ನೀಡಲಿ,
ಈ ಕ್ಷೇತ್ರ ಎ೦ದೆ೦ದೂ ನಲಿದಾಡಲಿ..
|| ಜಯವಾಗಲಿ ನಿತ್ಯ ಶುಭವಾಗಲಿ ||


>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು

2 comments:

  1. ಪ್ರತಿ ಶುಕ್ರವಾರ ನಿಮ್ಮ ಈ ಪುಟದಿಂದ ನಮ್ಮ ಮನೆಯಲ್ಲಿ ಹಾಡು ಹಾಡುತ್ತೇವೆ
    ನಿಮಗೆ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ!

    ReplyDelete