-0-
ಕರೆಯೋಲೆ ಕರೆವ ಓಲೆ ಕರೆ ಮಾಡಿ ಕರೆದೋಲೆ,
(( ರ೦ಗಿತರ೦ಗ ಚಲನಚಿತ್ರದಿ೦ದ. ))
(( ಪದ ಸಾಫ್ಟ್_ವೇರ್ ನಲ್ಲಿದೆ...))
Title : "Kareyole" Lyrics : | Anup Bhandari | Artist : Inchara Rao | Mins : 2:04 |
ಕರೆಯೋಲೆ ಕರೆವ ಓಲೆ ಕರೆ ಮಾಡಿ ಕರೆದೋಲೆ,
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೋಲೆ,
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ,
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ....
|| ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ ||
ಕನಕಾ೦ಗಿ ಕೈಯಲ್ಲೊ೦ದು ಕ೦ಚಿನ ಕೊಡಪಾನ,
ಕೆರೆನೀರ ಕುಡಿಯೋದಕ್ಕು ಕಟುವಾದ ಕಡಿವಾಣ,
ಕೆರೆದ೦ಡೆ ಕಡೆಯಲ್ಲೆಲ್ಲೋ ಕು೦ತೋನೆ ಕಡುಜಾಣ,
ಅತೀ ಕ್ಷೀಣ ಸ್ಮೃತಿಯುಳ್ಳೋನ ಕೆ೦ದಾವರೆ ಲಕುಷಾಣ,
ಕ್ಷಣವೆಲ್ಲ ಕೃತಕಕಥೆಯಲಿ ಕಳೆಯೋದ ಕಲಿತೋಳೆ,
ಕಲ್ಲಿನ ಕೊಳಲಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೋಳೆ,
ಕಣ್ಣಿಗೆ ಕಾಣದ ಕಾಗದದಲ್ಲಿ
ಕು೦ಚದಿ ಕಾವ್ಯವ ಕೊರೆದೋಲೆ....
|| ಕರೆಯೋಲೆ ಕರೆವ ಓಲೆ
ಕರೆ ಮಾಡಿ ಕರೆದೋಲೆ ||
ಆಸಕ್ತರು ನಿಮ್ಮ ವಾಲ್ ಗೆ ಹ೦ಚಿಕೊಳ್ಳಿ.
>> ತುಳಸಿ ನವೀನ್ ಭಟ್ .ಉಡುಪಿ