(Google source image)
((ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ..))
ನುಡಿನಮನ ಕವಿತೆ
ಶೀರ್ಷಿಕೆ : ಪುನೀತವಾಯಿತು ಈ ನೆಲ
🍁🍁🍁🍁🍁🍁🍁🍁🍁🍁
ಪುನೀತವಾಯಿತು ಕನ್ನಡದ ನೆಲ
ಗಂಧದ ಗುಡಿಯ ಸುತ್ತಿ ಬಂದಮೇಲೆ
ಅಪ್ಪು ಅಭಿ ಅರಸುವಾಗಿ
ಜನರ ಮನದಲಿ ನೆಲೆನಿಂತ ಮೇಲೆ
ಪುನೀತವಾಯಿತು ಕನ್ನಡದ ನೆಲ
ಬೆಟ್ಟದ ಹೂವನ್ನು ಅರಸಿಕೊಂಡು ಹೋದಮೇಲೆ
ಸಮಾಜಮುಖಿ ಕೆಲಸಗಳು ಒಂದೇ ಎರಡೇ
ಅಸಂಖ್ಯಾತವಾದ ಮೇಲೆ..
(Google source images)
**
ಬೇಸರದ ಛಾಯೆ ಎಲ್ಲೆಡೆ
ಅನುದಿನ ನೆನಪಿನಲ್ಲಿ ಬಂದು ಹೋಗುವ
ನಗುಮೊಗವೊಂದೀಗ ಮರೆಯಾದ ಮೇಲೆ
ಕಣ್ಣೀರಿನಲೇ ಅಭಿಷೇಕ,
ಮುಗಿಬೀಳುವ ಜನಸಾಗರ
ಇದನ್ನು ತಡೆಯಲಾಗುವುದೇ ಹೇಳಿ??
'ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ'
ಎಂಬಂತೆ ಸದ್ಗುಣ, ವಿನಯತೆಯ
ಕಲಿಸಿಕೊಟ್ಟು ಹೊರಟುಹೋದ ಮೇಲೆ
ಬೇಸರದ ಛಾಯೆ ಎಲ್ಲೆಡೆ..
ಪರಮಾತ್ಮ ಪೃಥ್ವಿಯ ತೊರೆದ ಮೇಲೆ..
(Google Image Source)
***
ಆಕಾಶದಲ್ಲಿ ಹೊಳೆಯುತ್ತಿರುವ
ರಾಜರತ್ನವೊಂದು ಅನುದಿನ ಕಂಡಾಗಲೆಲ್ಲ
ಹೆಮ್ಮೆಯ ಭಾವವು ಮನದ ತುಂಬೆಲ್ಲ...
ಇದ್ದರೆ ಇರಬೇಕು ಪ್ರೀತಿಯ ದೊಡ್ಮನೆ ಹುಡುಗನಂತೆ
ನೀನೇ ಎಂದಿಗೂ ರಾಜಕುಮಾರನಂತೆ
ನಿನ್ನಲ್ಲಿರುವ ಪವರ್, ಜನರನ್ನು
ಮೈತ್ರಿಗೊಳಿಸುವ ಹುಮ್ಮಸ್ಸು ಯಾರಿಗೂ ಬರದಯ್ಯ
ಲಕ್ಕಿ ಮ್ಯಾನ್ ನೀವಲ್ಲ, ನಿಮ್ಮ ಪಡೆದ ಕರುನಾಡಯ್ಯ....
- ಸಿಂಧು ಭಾರ್ಗವ, ಬೆಂಗಳೂರು
ಶುಭೋದಯ🌼🌿 ಶುಭದಿನ🌞
29/Oct/2022 Saturday
(Google Image source)